RBI Monetary Policy Review: ಕರೋನಾದ ಹೊಸ ರೂಪಾಂತರದ ಓಮಿಕ್ರಾನ್‌ನ ಹರಡುವಿಕೆ ಮತ್ತು ಏರುತ್ತಿರುವ ಹಣದುಬ್ಬರದ ನಡುವೆ, ಸೆಂಟ್ರಲ್ ಬ್ಯಾಂಕ್ ತನ್ನ ಹಣಕಾಸು ನೀತಿ ಪರಾಮರ್ಶೆಯ ಸಮಯದಲ್ಲಿ ಬಡ್ಡಿದರಗಳನ್ನು ಸ್ಥಿರವಾಗಿರಿಸಿಕೊಳ್ಳಬಹುದು ಎಂಬ ಊಹಾಪೋಹಗಳು ಈಗಾಗಲೇ ಇದ್ದವು. ನಿರೀಕ್ಷೆಯಂತೆ ಆರ್‌ಬಿಐ ಬಡ್ಡಿ ದರದಲ್ಲಿ ಬದಲಾವಣೆ ಮಾಡಿಲ್ಲ. ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ಬಡ್ಡಿದರಗಳ ಕುರಿತು ಕೈಗೊಂಡ ನಿರ್ಧಾರಗಳನ್ನು ಪ್ರಕಟಿಸಿದರು.


COMMERCIAL BREAK
SCROLL TO CONTINUE READING

ಆರ್‌ಬಿಐ ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das), ರಿಸರ್ವ್ ಬ್ಯಾಂಕ್ ರೆಪೊ ದರ (Repo Rate) ಮತ್ತು ರಿವರ್ಸ್ ರೆಪೊ ದರದಲ್ಲಿ  (Reverse Repo Rate)  ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.  ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇಕಡಾ 4 ರಷ್ಟು ಇರಿಸಿಕೊಳ್ಳಲು ಸರ್ವಾನುಮತದಿಂದ ಮತ ಚಲಾಯಿಸಿದೆ. ರಿವರ್ಸ್ ರೆಪೋ ದರವನ್ನು ಸಹ 3.35 ಶೇಕಡಾದಲ್ಲಿ ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಇದರೊಂದಿಗೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ಮತ್ತು ಬ್ಯಾಂಕ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 4.25 ರಷ್ಟು ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.


Reserve Bank Of India: ಮತ್ತೊಂದು ಬ್ಯಾಂಕಿನ ಗ್ರಾಹಕರ ಖಾತೆಗಳ ಹಣ ಹಿಂಪಡೆತದ ಮೇಲೆ ನಿರ್ಬಂಧ ವಿಧಿಸಿದ RBI


ರೆಪೋ ಮತ್ತು ರಿವರ್ಸ್ ರೆಪೋ ದರ ಎಂದರೇನು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳಿಗೆ ಸಾಲವನ್ನು ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಈ ಸಾಲದೊಂದಿಗೆ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಸಾಲ ನೀಡುತ್ತವೆ. ಅಂದರೆ, ರೆಪೊ ದರ ಕಡಿಮೆಯಾದಾಗ, ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗಿರುತ್ತವೆ ಮತ್ತು ರೆಪೊ ದರ ಹೆಚ್ಚಾದಾಗ, ಬ್ಯಾಂಕ್‌ಗಳು ಬಡ್ಡಿದರಗಳನ್ನು ಹೆಚ್ಚಿಸಬಹುದು. ಮತ್ತೊಂದೆಡೆ, ರಿವರ್ಸ್ ರೆಪೋ ದರವು ರೆಪೋ ದರಕ್ಕೆ ವಿರುದ್ಧವಾಗಿದೆ ಮತ್ತು ಇದು ಆರ್‌ಬಿಐ ಬ್ಯಾಂಕ್‌ಗಳಿಂದ ಠೇವಣಿಗಳ ಮೇಲೆ ಬಡ್ಡಿಯನ್ನು ಪಾವತಿಸುವ ದರವಾಗಿದೆ. ಮಾರುಕಟ್ಟೆಗಳಲ್ಲಿ ಲಿಕ್ವಿಡಿಟಿಯನ್ನು ರಿವರ್ಸ್ ರೆಪೋ ದರದ ಮೂಲಕ ನಿಯಂತ್ರಿಸಲಾಗುತ್ತದೆ.


'ಖಾಸಗಿ ಹೂಡಿಕೆಗೆ ವೇಗ ನೀಡಬೇಕು':
ಜಾಗತಿಕ ಮಾರುಕಟ್ಟೆಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹಲವು ಸವಾಲುಗಳು ಎದುರಾಗಿವೆ ಮತ್ತು ಭಾರತವೂ ಹಲವು ಸವಾಲುಗಳನ್ನು ಎದುರಿಸಿದೆ, ಇದರಲ್ಲಿ ಆರ್‌ಬಿಐ ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸಿದೆ. ಈಗ ನಾವು ಕರೋನಾವನ್ನು ಎದುರಿಸಲು ಉತ್ತಮ ಸ್ಥಿತಿಯಲ್ಲಿದ್ದೇವೆ. ದೇಶದಲ್ಲಿ ಇನ್ನೂ ಖಾಸಗಿ ಬಂಡವಾಳ ಹೂಡಿಕೆಗೆ ವೇಗ ನೀಡುವ ಅಗತ್ಯವಿದೆ. ದೇಶದ ಕೆಲವು ಭಾಗಗಳಲ್ಲಿ ಪ್ರಾಕೃತಿಕ ವಿಕೋಪಗಳಿಂದಾಗಿ ರಾಜ್ಯಗಳಿಂದ ಬರುವ ಆದಾಯದ ಮೇಲೂ ಪರಿಣಾಮ ಬೀರಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.


ಇದನ್ನೂ ಓದಿ- Cooperative Scheme : ಈ 16 ಬ್ಯಾಂಕ್‌ ಖಾತೆದಾರರಿಗೆ ಸಿಗಲಿದೆ ₹5 ಲಕ್ಷ ಪ್ರಯೋಜನ : ಈ ಲಾಭ ಪಡೆಯಲು ಈ ಕೆಲಸ ಮಾಡಿ


ಜಿಡಿಪಿ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಸಭೆಯ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ. 2021-22ರ ಹಣಕಾಸು ವರ್ಷದಲ್ಲಿ, ಆರ್ಥಿಕ ಬೆಳವಣಿಗೆ ದರದ (Economic Growth Rate) ಗುರಿಯನ್ನು ಶೇಕಡಾ 9.5 ಕ್ಕೆ ಇರಿಸಲಾಗಿದೆ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ