RBI Governor: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇದುವರೆಗೆ 1.80 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಬ್ಯಾಂಕಿಂಗ್ ಸಿಸ್ಟಮ್ ಮರಳಿವೆ ಎಂದು ಹೇಳಿದ್ದಾರೆ. 2023ರ ಮಾರ್ಚ್ 31ರವರೆಗೆ ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳ ಪೈಕಿ ಅರ್ಧದಷ್ಟು ಅಂದರೆ ಶೇ.50ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದ್ದಾರೆ. ಇದುವರೆಗೆ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

85ರಷ್ಟು ನೋಟುಗಳು ಬ್ಯಾಂಕ್ ಖಾತೆಗೆ ಠೇವಣಿಯಾಗುತ್ತಿವೆ
ಶೇ.85 ರಷ್ಟು 2,000 ಬ್ಯಾಂಕ್ ನೋಟುಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಇದು ಸಂಪೂರ್ಣವಾಗಿ ನಮ್ಮ ನಿರೀಕ್ಷೆಯಂತೆಯೇ ಆಗಿದ್ದು, ಬ್ಯಾಂಕ್‌ಗಳಲ್ಲಿ ನೋಟುಗಳನ್ನು ಜಮಾ ಮಾಡಲು ಯಾವುದೇ ಆತುರವಾಗಲೀ, ಆತಂಕವಾಗಲೀ ಇಲ್ಲ ಎಂದು ಹೇಳಿದ್ದಾರೆ. 2000 ರೂಪಾಯಿ ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಿಕೊಳ್ಳಲು 4 ತಿಂಗಳ ಕಾಲಾವಕಾಶವಿದ್ದು, ನೋಟುಗಳನ್ನು ಜಮಾ ಮಾಡಲು ಆತುರಪಡುವ ಅವಶ್ಯಕತೆ ಇಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಆರ್‌ಬಿಐ ಸಾಕಷ್ಟು ಕರೆನ್ಸಿ ದಾಸ್ತಾನು ಹೊಂದಿದೆ. ಜನರು ತಮ್ಮ ಸಮಯವನ್ನು ತೆಗೆದುಕೊಂಡು 2000 ರೂ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆರ್‌ಬಿಐ ಗವರ್ನರ್‌ ಎಚ್ಚರಿಕೆಯನ್ನು ಸಹ ನೀಡಿದ್ದು, ಕೊನೆಯ ಕ್ಷಣದಲ್ಲಿ ಎಲ್ಲವನ್ನೂ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಹೀಗಾಗಿ 2000 ರೂಪಾಯಿ ನೋಟುಗಳನ್ನು ಠೇವಣಿ ಇಡುವ ಕಾಲಮಿತಿ ಮುಗಿಯುತ್ತಿರುವಾಗ ಸೆಪ್ಟೆಂಬರ್ ಕೊನೆಯ 10 ರಿಂದ 15 ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ನೋಟುಗಳನ್ನು ಠೇವಣಿ ಇಡುವ ಅಥವಾ ವಿನಿಮಯ ಮಾಡಿಕೊಳ್ಳುವ ಪೈಪೋಟಿ ಶುರುವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Share Market Update: ಸತತ ನಾಲ್ಕು ದಿನಗಳ ಗೂಳಿ ಓಟಕ್ಕೆ ಬಿತ್ತು ಬ್ರೇಕ್, ಸೆನ್ಸೆಕ್ಸ್ ಸೂಚ್ಯಂಕದಲ್ಲಿ 300 ಅಂಕಗಳ ಕುಸಿತ


1000 ರೂಪಾಯಿ ಬಿಡುಗಡೆ ಸಾಧ್ಯತೆ ನಿರಾಕರಣೆ!
ಈ ಸುದ್ದಿಗೋಷ್ಠಿಯ ಸಂದರ್ಭದಲ್ಲಿ  ಆರ್‌ಬಿಐ ಗವರ್ನರ್‌ಗೆ 1000 ರೂಪಾಯಿ ನೋಟು ಮರು ಬಿಡುಗಡೆಯಾಗಬಹುದೇ ಅಥವಾ 500 ರೂಪಾಯಿ ನೋಟು ಹಿಂಪಡೆಯಬಹುದೇ ಎಂದು ಪ್ರಶ್ನಿಸಲಾಗಿದೆ. ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಆರ್‌ಬಿಐ ಗವರ್ನರ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಊಹಾಪೋಹ ಸೃಷ್ಟಿಸಬೇಡಿ ಎಂದು ಎಂದು ಜನಸಾಮಾನ್ಯರಲ್ಲಿ ಅವರು ಮನವಿ ಮಾಡಿದ್ದಾರೆ.


ಇದನ್ನೂ ಓದಿ-RBI MPC: ಹಣದುಬ್ಬರಕ್ಕೆ ಸಂಬಂಧಿಸಿದಂತೆ ಸಂತಸದ ಸುದ್ದಿ ಪ್ರಕಟಿಸಿದ RBI ಗವರ್ನರ್


ನೋಟುಗಳನ್ನು ಹಿಂದಿರುಗಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ
ಮೇ 19, 2022 ರಂದು, RBI ರೂ 2000 ಕರೆನ್ಸಿ ನೋಟನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿತ್ತು. ಇದನ್ನು ಪ್ರಕಟಿಸಿದ ಆರ್‌ಬಿಐ, ನೋಟ್ ಕ್ಲೀನ್ ನೀತಿಯ ಅಡಿಯಲ್ಲಿ, ಆರ್‌ಬಿಐ 2000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ ಎಂದು ಹೇಳಿಟ್ಟು. 2000 ರೂಪಾಯಿ ಚಲಾವಣೆಯಲ್ಲಿರಬಹುದು ಆದರೆ 2000 ರೂಪಾಯಿ ನೋಟು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತದೆ. 30 ಸೆಪ್ಟೆಂಬರ್ 2023 ರವರೆಗೆ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಬಹುದು ಎಂದು ಆರ್‌ಬಿಐ ಹೇಳಿದೆ. ಇದರೊಂದಿಗೆ, 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳ ಶಾಖೆಗಳಲ್ಲಿ ಮತ್ತು ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಇತರ ಮುಖಬೆಲೆಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಅದು ಬ್ಯಾಂಕ್ ಗ್ರಾಹಕರಿಗೆ ಸೂಚಿಸಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.