RBI on Tata, Reliance And Birla: ಟಾಟಾ, ಬಿರ್ಲಾ ಮತ್ತು ರಿಲಯನ್ಸ್‌ನಂತಹ ಕಾರ್ಪೊರೇಟ್ ದೈತ್ಯಗಳು ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರವನ್ನು (Banking Sector) ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಈ ಕೈಗಾರಿಕಾ ಸಂಸ್ಥೆಗಳು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಬ್ಯಾಂಕಿಂಗ್‌ಗೆ ವಿಸ್ತರಿಸಲು ಯೋಜಿಸಿವೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅವುಗಳ ಪ್ರವೇಶವನ್ನು ತಡೆಹಿಡಿದಿದೆ. ಈ ಕುರಿತು ಆರ್‌ಬಿಐನ ಆಂತರಿಕ ಗುಂಪು ಒಟ್ಟು 33 ಸಲಹೆಗಳನ್ನು ನೀಡಿದ್ದು, ಅವುಗಳಲ್ಲಿ 21 ಅನ್ನು ಸ್ವೀಕರಿಸಲಾಗಿದೆ. ಇನ್ನೂ 12 ಸಲಹೆಗಳನ್ನು ಕೇಂದ್ರ ಬ್ಯಾಂಕ್ ಪರಿಗಣಿಸುತ್ತಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಔದ್ಯೋಗಿಕ ಕುಟುಂಬಗಳ ಪ್ರವೇಶದ ಯೋಜನೆಗೆ ಈ ಹಿಂದಿನ ಕೇಂದ್ರೀಯ ಬ್ಯಾಂಕರ್‌ಗಳಿಂದ ಹಿಡಿದು ರಾಜಕಾರಣಿಗಳವರೆಗೆ ವಿರೋಧ ವ್ಯಕ್ತವಾಗಿತ್ತು ಎಂಬುದು ಇಲ್ಲಿ ಗಮನಾರ್ಹ.  ಸ್ವೀಕರಿಸಿದ ಸಲಹೆಗಳಲ್ಲಿ ಕನಿಷ್ಠ ಬಂಡವಾಳದ ಅಗತ್ಯವನ್ನು 1,000 ಕೋಟಿ ರೂ.ಗೆ ಹೆಚ್ಚಿಸುವುದು ಮತ್ತು ಕಂಪನಿಯ 26% ವರೆಗೆ ಪ್ರವರ್ತಕರು ಹೊಂದಲು ಅವಕಾಶ ನೀಡುವುದು ಶಾಮೀಲಾಗಿವೆ. ಈ ಸಲಹೆಯನ್ನು ಸ್ವೀಕರಿಸುವುದರಿಂದ ಬಿಲಿಯನೇರ್ ಉದಯ್ ಕೋಟಕ್ ತನ್ನ ಬ್ಯಾಂಕ್ ಮೇಲೆ  ಹಿಡಿತಕ್ಕೆ ಸಾಧಿಸಲಿದ್ದಾರೆ. ಹೀಗಾಗಿ ಈ ಮಾನದಂಡವು ಎಲ್ಲಾ ರೀತಿಯ ಪ್ರವರ್ತಕರಿಗೆ ಅನ್ವಯಿಸಬೇಕು ಎಂದು ಆರ್‌ಬಿಐ ಹೇಳಿದೆ.


ಇದನ್ನೂ ಓದಿ-Affordable Bikes:ಪೆಟ್ರೋಲ್ ದರ ಏರಿಕೆ ಚಿಂತೆ ಬಿಟ್ಟು ಬಿಡಿ, ಇಲ್ಲಿವೆ ಪವರ್ಪುಲ್ ಮೈಲೇಜ್ ನೀಡುವ ಅಗ್ಗದ ಬೈಕ್ ಗಳು


ನಿಯಮಗಳನ್ನು ಬಿಗಿಗೊಳಿಸಲಿದೆ RBI
ಟಾಟಾಗಳು ಮತ್ತು ಬಿರ್ಲಾಗಳಂತಹ ಕೈಗಾರಿಕಾ ಸಂಸ್ಥೆಗಳು ನಡೆಸುತ್ತಿರುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ಎರಡು ಹೊಡೆತಗಳನ್ನು ಎದುರಿಸುತ್ತಿವೆ. ಹೀಗಾಗಿ ಎನ್‌ಬಿಎಫ್‌ಸಿಗಳನ್ನು ನಿಯಂತ್ರಿಸುವ ನಿಯಮಗಳನ್ನು ಬ್ಯಾಂಕ್‌ಗಳ ಕಾನೂನಿನಂತೆ ಮತ್ತಷ್ಟು ಕಟ್ಟುನಿಟ್ಟಾಗಿ ಮಾಡುವುದಾಗಿ ಕೇಂದ್ರ ಬ್ಯಾಂಕ್ ಘೋಷಿಸಿದೆ. ಇದೇ ವೇಳೆ ಮೂರು ವರ್ಷಗಳಲ್ಲಿ, ಪಾವತಿ ಬ್ಯಾಂಕ್‌ಗಳನ್ನು ಸಣ್ಣ ಹಣಕಾಸು ಬ್ಯಾಂಕ್‌ಗಳಾಗಿ ಪರಿವರ್ತಿಸುವ ಸಲಹೆಯನ್ನು ತಿರಸ್ಕರಿಸಲಾಗಿದೆ. ಇದು Paytm ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. Paytm ಪ್ರಸ್ತುತ ಪಾವತಿ ಬ್ಯಾಂಕ್ ವಲಯದಲ್ಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-Sensexನಲ್ಲಿ ಭಾರೀ ಕುಸಿತ.. ನಿಫ್ಟಿ 17,100 ಕ್ಕೆ ಇಳಿಕೆ


ಮಧ್ಯಸ್ಥಗಾರರಿಂದ ಬಂದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪರಿಗಣಿಸಿದ ನಂತರ, 21 ಶಿಫಾರಸುಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ  ಹೇಳಿದೆ. ಉಳಿದ ಶಿಫಾರಸುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪ್ರವರ್ತಕರ ಪಾಲನ್ನು ಈಗಿನ ಶೇ.15ರಿಂದ ಶೇ.26ಕ್ಕೆ ಹೆಚ್ಚಿಸುವ ಸಲಹೆಯನ್ನು ಅನುಮೊದಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಪ್ರವರ್ತಕರು 15 ವರ್ಷಗಳ ದೀರ್ಘಾವಧಿಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಸಾಧ್ಯವಾಗಲಿದೆ. 


ಇದನ್ನೂ ಓದಿ-7th Pay Commission : ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಹೆಚ್ಚಾಗಲಿದೆ ವೇತನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.