1000 ರೂಪಾಯಿ ನೋಟ್ ಬಗೆಗಿನ ಮಹತ್ವದ ಮಾಹಿತಿ ಹೊರ ಹಾಕಿದ RBI!
1000 Note Demonetisation:ಇತ್ತೀಚೆಗೆ ಸೆಂಟ್ರಲ್ ಬ್ಯಾಂಕ್ ಸುಮಾರು ಆರು ವರ್ಷಗಳ ನಂತರ 2000 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆದುಹಾಕಲು ನಿರ್ಧರಿಸಿದೆ.
1000 Note Demonetisation : ನೋಟು ಅಮಾನ್ಯೀಕರಣ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ನವೆಂಬರ್ 8 2016. ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂಪಾಯಿ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದ್ದರು. ಇದಾದ ನಂತರ ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬ್ಯಾಂಕ್‌ಗಳು ಮತ್ತು ಎಟಿಎಂಗಳ ಎದುರು ಉದ್ದನೆಯ ಸಾಲುಗಳು ಎಲ್ಲಾ ಕಡೆ
ಸಾಮಾನ್ಯವಾಗಿತ್ತು. ಈ ವೇಳೆ, ಆರ್‌ಬಿಐ 2000 ರೂ. ನೋಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇತ್ತೀಚೆಗೆ ಸೆಂಟ್ರಲ್ ಬ್ಯಾಂಕ್ ಸುಮಾರು ಆರು ವರ್ಷಗಳ ನಂತರ 2000 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆದುಹಾಕಲು ನಿರ್ಧರಿಸಿದೆ.
ಬ್ಯಾಂಕ್‌ಗಳ ಮುಂದೆ ಉದ್ದನೆಯ ಸಾಲುಗಳು :
2000 ರೂಪಾಯಿ ನೋಟು ಚಲಾವಣೆಯಿಂದ ಹೊರಬಂದ ನಂತರವೂ ಬ್ಯಾಂಕ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡು ಬಂದವು. ಈ ನಡುವೆ ಆರ್‌ಬಿಐನಿಂದ 1000 ರೂಪಾಯಿ ನೋಟು ಮರು ಚಲಾವಣೆಯಾಗಲಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚರ್ಚೆ ಹಲವು ಬಾರಿ ನಡೆದಿದೆ. ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ 1000 ರೂಪಾಯಿ ನೋಟಿನ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಡಿಎ ಹೆಚ್ಚಳದ ಬಳಿಕ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಪ್ರಕಟಿಸಿದ ಸರ್ಕಾರ
ಡಿಜಿಟಲ್ ವಹಿವಾಟಿನಿಂದಾಗಿ ಕಡಿಮೆಯಾದ ನಗದು ಅಗತ್ಯಕ್ಕೆ ಸಂಬಂಧಿಸಿದಂತೆ, ಆರ್ಥಿಕತೆಯಲ್ಲಿ ನಗದು ಅಗತ್ಯವನ್ನು ಪೂರೈಸಲು 500 ರೂ ನೋಟುಗಳು ಸಾಕು ಎಂದು ಆರ್‌ಬಿಐ ಈ ಹಿಂದೆ ತಿಳಿಸಿತ್ತು. ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ವಹಿವಾಟು ವೇಗವಾಗಿ ಹೆಚ್ಚಿದೆ. ಇದರಿಂದ ನಗದು ಅಗತ್ಯವೂ ಕಡಿಮೆಯಾಗಿದೆ. ಹೀಗಾಗಿ ಯಾವುದೇ ರೀತಿಯ ವದಂತಿಗಳಿಗೆ ಬಲಿಯಾಗಬೇಡಿ ಎಂದು ಆರ್‌ಬಿಐ ಈ ಹಿಂದೆಯೂ ಹೇಳಿತ್ತು. ಭವಿಷ್ಯದಲ್ಲಿ 1000 ರೂಪಾಯಿ ನೋಟು ಪರಿಚಯಿಸುವ ಯಾವ ಯೋಜನೆಯೂ ಇಲ್ಲ ಎನ್ನುವುದನ್ನು ಕೇಂದ್ರ ಬ್ಯಾಂಕ್ ಹೇಳಿದೆ.
87ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿವೆ ಎಂದು ಇತ್ತೀಚೆಗೆ ಆರ್‌ಬಿಐ ತಿಳಿಸಿದೆ. ಸದ್ಯ ಸುಮಾರು 12 ಸಾವಿರ ಕೋಟಿ ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ. ನಿಮ್ಮ ಬಳಿಯೂ ಯಾವುದೇ ನೋಟು ಉಳಿದಿದ್ದರೆ, ನೀವು ಅದನ್ನು ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ಠೇವಣಿ ಮಾಡಬಹುದು ಅಥವಾ ಅಲ್ಲಿಂದ ವಿನಿಮಯ ಮಾಡಿಕೊಳ್ಳಬಹುದು.
ಇದನ್ನೂ ಓದಿ : ಈ ತಿಂಗಳು ಸರ್ಕಾರಿ ನೌಕರರ ಕೈ ಸೇರುವುದು 30, 864 ರೂ. ಬಾಕಿ ಮೊತ್ತ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.