RBI Report on Indian Economy -  ಕೋವಿಡ್-19 ಮಹಾಮಾರಿ ಮನುಷ್ಯರ ಆರೋಗ್ಯಕ್ಕೆ ಹಾನಿ ಮಾಡಿರುವುದು ಮಾತ್ರವಲ್ಲದೆ ದೇಶದ ಆರ್ಥಿಕತೆಯನ್ನು ಭಾರಿ ಹಿಂದಕ್ಕೆ ತಳ್ಳಿದೆ. ಹೌದು, ಕೋವಿಡ್ -19 ಮಹಾಮಾರಿಯ ಕಾರಣ ಉಂಟಾದ ಹಾನಿಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಭಾರತೀಯ ಆರ್ಥಿಕತೆಯು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಹೇಳಿದೆ.

COMMERCIAL BREAK
SCROLL TO CONTINUE READING

52 ಲಕ್ಷ ಕೋಟಿ ಉತ್ಪಾದನೆ ನಷ್ಟವಾಗಿದೆ
ಆರ್ಥಿಕತೆಯ ಮೇಲೆ ಕೋವಿಡ್-19 ಮಹಾಮಾರಿಯ ಪ್ರಭಾವವನ್ನು ಆರ್‌ಬಿಐ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಭಾರತದ ಆರ್ಥಿಕತೆಯು ಸುಮಾರು 52 ಲಕ್ಷ ಕೋಟಿ ರೂಪಾಯಿಗಳ ಉತ್ಪಾದನಾ ನಷ್ಟವನ್ನು ಅನುಭವಿಸಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಕೊವಿಡ್ -19 ಪದೇ ಪದೇ ಮರಳಿದ್ದೆ ಈ ತೊಂದರೆಗೆ ಕಾರಣ
ರಿಸರ್ವ್ ಬ್ಯಾಂಕ್‌ನ 2021-22ನೇ ಸಾಲಿನ 'ಕರೆನ್ಸಿ ಮತ್ತು ಹಣಕಾಸು ವರದಿ'ಯ 'ಸಾಂಕ್ರಾಮಿಕ ಗುರುತುಗಳು' ಅಧ್ಯಯನದಲ್ಲಿ ಈ ಅಂದಾಜನ್ನು ವರ್ತಿಸಲಾಗಿದೆ. ವರದಿಯ ಪ್ರಕಾರ, ಕೋವಿಡ್ -19 ರ ಪುನರಾವರ್ತಿತ ವಾಪಸಾತಿಯಿಂದ ಉಂಟಾಗಿರುವ ಅವ್ಯವಸ್ಥೆಯು ಆರ್ಥಿಕತೆಗೆ ಭಾರಿ ಅಡೆತಡೆ ಉಂಟುಮಾಡಿದೆ ಮತ್ತು ಇದರಿಂದಾಗಿ, ಜಿಡಿಪಿಯ ತ್ರೈಮಾಸಿಕ ಪ್ರವೃತ್ತಿಯಲ್ಲಿ ಭಾರಿ ಏರಿಳಿತ ಉಂಟಾಗಿದೆ.

ಮೂರನೇ ಅಲೆಯು ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ
ವರದಿಯ ಪ್ರಕಾರ, 2020-21ರ ಮೊದಲ ತ್ರೈಮಾಸಿಕದಲ್ಲಿ ಮಹಾಮಾರಿಯ ಮೊದಲ ಅಲೆಯ ಸಮಯದಲ್ಲಿ, ಆರ್ಥಿಕತೆಯಲ್ಲಿ ಆಳವಾದ ಕುಸಿತ ಕಂಡುಬಂದಿದೆ. ಆದಾಗ್ಯೂ, ಅದರ ನಂತರ ಆರ್ಥಿಕತೆಯು ವೇಗವನ್ನು ಪಡೆದುಕೊಂಡಿದೆ. ಆದರೆ 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬಂದ ಸಾಂಕ್ರಾಮಿಕದ ಎರಡನೇ ಅಲೆಯು ಅದರ ಮೇಲೆ ಗಂಭೀರ ಪ್ರಭಾವ ಬೀರಿದೆ. ಇದಾದ ಬಳಿಕ 2022 ರ ಜನವರಿಯಲ್ಲಿ ಬಂದ ಮೂರನೇ ಅಲೆಯೂ ಕೂಡ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ.


ಇದನ್ನೂ ಓದಿ-Petrol-Diesel Price: ಇಂಧನ ಬೆಲೆ ಸ್ಥಿರ: ಸಾರ್ವಜನಿಕರಿಗೆ ಕೊಂಚ ರಿಲೀಫ್‌

ಪ್ರಿ-ಕೊವಿಡ್ ಅವಧಿಯಲ್ಲಿ ಬೆಳವಣಿಗೆ ದರ ಶೇ.6.6ರಷ್ಟಿತ್ತು
'ಮಹಾಮಾರಿ ಅತಿ ದೊಡ್ಡ ವಿಷಯವಾಗಿ ಮಾರ್ಪಟ್ಟಿದೆ' ಎಂದು ಆರ್.ಬಿ.ಐ ತನ್ನ ವರದಿಯಲ್ಲಿ ಹೇಳಿದೆ. ಕೋವಿಡ್ ಪೂರ್ವ ಅವಧಿಯಲ್ಲಿ ಬೆಳವಣಿಗೆಯ ದರವು ಸುಮಾರು ಶೇ.6.6 ರಷ್ಟಿತ್ತು (2012-13 ರಿಂದ 2019-20 ರವರೆಗೆ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ). ಆರ್ಥಿಕ ಹಿಂಜರಿತದ ಸಮಯವನ್ನು ಹೊರತುಪಡಿಸಿ, ಇದು ಶೇ. 7.1 ರಷ್ಟಿದೆ (2012-13 ರಿಂದ 2016-17 ರವರೆಗೆ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ).


ಇದನ್ನೂ ಓದಿ-Gold-Silver Price: ಚಿನ್ನ ಪ್ರಿಯರಿಗೆ ಶಾಕ್‌: ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ

'2020-21ರ ನೈಜ ಬೆಳವಣಿಗೆ ದರವನ್ನು ಋಣಾತ್ಮಕ ಶೇಕಡಾ 6.6, 2021-22ಕ್ಕೆ ಶೇಕಡಾ 8.9 ಮತ್ತು 2022-23ಕ್ಕೆ ಶೇಕಡಾ 7.2 ರಷ್ಟನ್ನು ಗಮನಿಸಿದರೆ, ಕೋವಿಡ್ -19 ನಿಂದ ಉಂಟಾದ ನಷ್ಟವನ್ನು ಭಾರತವು ಸರಿದೂಗಿಸಲಿದೆ ಎಂದು ಅಂದಾಜಿಸಲಾಗಿದೆ. ಆದರೆ, 2034-35ರ ವೇಳೆಗೆ ಇದನ್ನು ಸಾಧಿಸಲು ಸಾಧ್ಯವಾಗಲಿದೆ. 2020-21, 2021-22 ಮತ್ತು 2022-23ರಲ್ಲಿನ ಉತ್ಪಾದನೆಯಲ್ಲಿನ ನಷ್ಟವು ಕ್ರಮವಾಗಿ 19.1 ಲಕ್ಷ ಕೋಟಿ, 17.1 ಲಕ್ಷ ಕೋಟಿ ಮತ್ತು 16.4 ಕೋಟಿ ರೂಪಾಯಿಯಾಗಿದೆ ಎಂದು ವರದಿ ಹೇಳಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.