ವಹಿವಾಟು ಆರಂಭವಾಗುತ್ತಿದ್ದಂತೆಯೇ ಗಗನಕ್ಕೇರಿದ ಚಿನ್ನದ ಬೆಲೆ! ದಾಖಲೆ ಬರೆದ ಬೆಳ್ಳಿ
Gold Price Today Latest : ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎಂಸಿಎಕ್ಸ್‌ನಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯೂ ಕೂಡಾ ಎಲ್ಲಾ ದಾಖಲೆ ಮೀರುವ ಹಂತಕ್ಕೆ ತಲುಪಿದೆ.
Gold Price Today Latest :ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಲೇ ಇದೆ. ಕಳೆದ ಕೆಲವು ದಿನಗಳಲ್ಲಿ ಇದು ದಾಖಲೆಯ ಮಟ್ಟವನ್ನು ತಲುಪಿದೆ. ಬೆಳ್ಳಿ ಕೂಡಾ ಇಲ್ಲಿಯವರೆಗಿನ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸತತ ಏರಿಳಿತಗಳು ನಡೆಯುತ್ತಿವೆ. 60,000 ಗಡಿ ದಾಟಿದ ಚಿನ್ನ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದೆ. ಅದೇ ರೀತಿ ಬೆಳ್ಳಿ ಕೂಡಾ 75 ಸಾವಿರದ ಗಾಡಿಯನ್ನು ದಾಟಿದೆ. ಮುಂಬರುವ ದಿನಗಳಲ್ಲಿ ಬೆಳ್ಳಿ ಕೆಜಿಗೆ 80,000 ರೂ.ಗೆ ಮತ್ತು 10 ಗ್ರಾಂ ಚಿನ್ನಕ್ಕೆ 65,000 ರೂ.ವರೆಗೆ ಏರಿಕೆಯಗಬಹುದು ಎನ್ನುತ್ತಾರೆ ತಜ್ಞರು.
ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ದರ :
ಮಂಗಳವಾರ ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ಕಾಣುತ್ತಿವೆ. ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎಂಸಿಎಕ್ಸ್‌ನಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆಯೇ 321 ರೂ.
ಏರಿಕೆ ಕಂಡ ಚಿನ್ನದ ಬೆಲೆ 10 ಗ್ರಾಂ ಚಿನ್ನ 60,384 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಬೆಳ್ಳಿ ದರದಲ್ಲಿ 571 ರೂಪಾಯಿ ಏರಿಕೆ ಕಂಡು 74,894 ರೂ. ಯಷ್ಟಾಗಿದೆ.
ಇದನ್ನೂ ಓದಿ : ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ! ಇನ್ನು ಆಯೋಗದ ಮೂಲಕವೇ ನೇಮಕ
ಚಿನ್ನ ಕುಸಿತ, ಬೆಳ್ಳಿಯ ಏರಿಕೆ :
ವಾರದ ಮೊದಲ ವಹಿವಾಟು ದಿನವಾದ ಸೋಮವಾರ ಮಿಶ್ರ ಪ್ರವೃತ್ತಿಯೊಂದಿಗೆ ಮುಕ್ತಾಯಗೊಂಡ ಬುಲಿಯನ್ ಮಾರುಕಟ್ಟೆ ಮಂಗಳವಾರ ಏರಿಕೆ ಕಂಡಿದೆ. ಸೋಮವಾರ ಸಂಜೆ ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ (https://ibjarates.com) ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, 24 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ 60,355 ರೂ.ಗೆ ಇಳಿದಿದ್ದು, ಬೆಳ್ಳಿ ಕೆಜಿಗೆ 74,556 ರೂ.ಗೆ ಏರಿಕೆಯಾಗಿತ್ತು.
ಚಿನ್ನದ ಬೆಲೆಯನ್ನು ಪರಿಶೀಲಿಸುವುದು ಹೇಗೆ?
ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಪ್ರಕಾರ, 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಮಿಸ್ ಕಾಲ್ ಕೊಟ್ಟ ತಕ್ಷಣ ನೀವು ಯಾವ ಸಂಖ್ಯೆಯಿಂದ ಮಿಸ್ ಕಾಲ್ ಕೊಟ್ತಿರುತ್ತಿರೋ ಅದೇ ಸಂಖ್ಯೆಗೆ ಸಂದೇಶ ಬರುತ್ತದೆ.
ಇದನ್ನೂ ಓದಿ : Arecanut price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.