ವಾಲ್ಟ್ ಡಿಸ್ನಿ ಜತೆ ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಿದ ರಿಲಯನ್ಸ್ ಮತ್ತು ವಯಾಕಾಮ್ 18 ಮೀಡಿಯಾ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ಬುಧವಾರ (ಫೆಬ್ರವರಿ 28) ಜಂಟಿ ಉದ್ಯಮಕ್ಕಾಗಿ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಮಾಡಿರುವುದಾಗಿ ಘೋಷಣೆ ಮಾಡಿವೆ. ಇದರೊಂದಿಗೆ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ಒಗ್ಗೂಡಿಸಲಾಗುತ್ತದೆ. ವಹಿವಾಟಿನ ಭಾಗವಾಗಿ ವಯಾಕಾಮ್ 18ಗೆ ಸೇರಿದ ಮಾಧ್ಯಮ ಸಂಸ್ಥೆಗಳು ಕೋರ್ಟ್ ಅನುಮೋದಿತ ವ್ಯವಸ್ಥೆಯ ಮೂಲಕವಾಗಿ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲಾಗುತ್ತದೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ಬುಧವಾರ (ಫೆಬ್ರವರಿ 28) ಜಂಟಿ ಉದ್ಯಮಕ್ಕಾಗಿ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಮಾಡಿರುವುದಾಗಿ ಘೋಷಣೆ ಮಾಡಿವೆ. ಇದರೊಂದಿಗೆ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ಒಗ್ಗೂಡಿಸಲಾಗುತ್ತದೆ. ವಹಿವಾಟಿನ ಭಾಗವಾಗಿ ವಯಾಕಾಮ್ 18ಗೆ ಸೇರಿದ ಮಾಧ್ಯಮ ಸಂಸ್ಥೆಗಳು ಕೋರ್ಟ್ ಅನುಮೋದಿತ ವ್ಯವಸ್ಥೆಯ ಮೂಲಕವಾಗಿ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲಾಗುತ್ತದೆ.
ಬೆಳವಣಿಗೆ ಕಾರ್ಯತಂತ್ರದ ಭಾಗವಾಗಿ ರಿಲಯನ್ಸ್ ನಿಂದ 11,500 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಹಣಕಾಸಿನ ನಂತರದ ಆಧಾರದಲ್ಲಿ ಈ ಜಂಟಿ ಉದ್ಯಮದ ವಹಿವಾಟಿನ ಮೌಲ್ಯ 70,352 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಒಗ್ಗೂಡುವ ಕೆಲವು ಅಂಶಗಳು ಬಿಟ್ಟು ಇಷ್ಟು ಮೌಲ್ಯ ಮಾಡಲಾಗಿದೆ. ಈ ಜಂಟಿ ಉದ್ಯಮದ ಸಂಪೂರ್ಣ ವಹಿವಾಟು ಮುಗಿದ ನಂತರ ರಿಲಯನ್ಸ್ ಇದನ್ನು ನಿಯಂತ್ರಿಸುತ್ತದೆ. ರಿಲಯನ್ಸ್ ಪಾಲು ಶೇ 16.34ರಷ್ಟು, ವಯಾಕಾಮ್ 18 ಪಾಲು ಶೇ 46.82 ಮತ್ತು ಡಿಸ್ನಿ ಪಾಲು ಶೇ 36.84ರಷ್ಟು ಇರುತ್ತದೆ. ಈ ಜಂಟಿ ಉದ್ಯಮಕ್ಕೆ ಡಿಸ್ನಿಯಿಂದ ಇನ್ನೂ ಕೆಲವು ಮಾಧ್ಯಮ ಆಸ್ತಿಗಳನ್ನು ಕೊಡುಗೆ ನೀಡಬಹುದಾಗಿದ್ದು, ಅದು ಮಿಯಂತ್ರಕ ಹಾಗೂ ಥರ್ಡ್ ಪಾರ್ಟಿ ಅನುಮೋದನೆಗೆ ಒಳಪಟ್ಟಿದೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ ಆಟಗಾರನ ಜೊತೆ ಸಪ್ತಪದಿ ತುಳಿಯಲಿರುವ ತಾಪ್ಸಿ ಪನ್ನು..!
ಈ ಜಂಟಿ ಉದ್ಯಮದ ಮುಖ್ಯಸ್ಥರಾಗಿ ನೀತಾ ಅಂಬಾನಿ ಅವರು, ಉಪಾಧ್ಯಕ್ಷರಾಗಿ ಉದಯಶಂಕರ್ ಅವರ ಜತೆಗೆ ಜಂಟಿ ಉದ್ಯಮದ ಕಾರ್ಯತಂತ್ರ ಮಾರ್ಗದರ್ಶನ ಮಾಡಲಿದ್ದಾರೆ. ಈ ಜಂಟಿ ಉದ್ಯಮದ ಮೂಲಕ ಭಾರತದಾದ್ಯಂತ ಎಪ್ಪತ್ತೈದು ಕೋಟಿ ವೀಕ್ಷಕರು ಒಂದು ನೆಲೆಯಲ್ಲಿ ನಿಲ್ಲಲಿದ್ದಾರೆ. ವಿಶ್ವದಾದ್ಯಂತ ಇರುವ ಭಾರತೀಯರಿಗೆ ಇದು ಸೇವೆ ಒದಗಿಸಲಿದೆ.
ಈ ಜಂಟಿ ಉದ್ಯಮದ ಮೂಲಕ ಭಾರತದಲ್ಲಿ ಎಕ್ಸ್ ಕ್ಲೂಸಿವ್ ಆಗಿ ಡಿಸ್ನಿ ಸಿನಿಮಾ ಪ್ರೊಡಕ್ಷನ್ಸ್ ಗೆ ವಿತರಣೆ ಹಕ್ಕು ದೊರೆಯಲಿದೆ. ಮೂವತ್ತು ಸಾವಿರಕ್ಕೂ ಹೆಚ್ಚು ಡಿಸ್ನಿ ಕಂಟೆಂಟ್ ಆಸ್ತಿಗಳಿಗೆ ಲೈಸೆನ್ಸ್ ದೊರೆಯಲಿದೆ.
ಈ ಜಂಟಿ ಉದ್ಯಮದ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, “ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗದ ಆರಂಭ ಸೂಚಿಸುವ ಮಹತ್ವದ ಒಪ್ಪಂದವಾಗಿದೆ. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮಾಧ್ಯಮ ಗುಂಪು ಎಂದು ಗೌರವಿಸುತ್ತೇವೆ. ಮತ್ತು ರಾಷ್ಟ್ರದಾದ್ಯಂತ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಮೋಘವಾದ ಕಂಟೆಂಟ್ ತಲುಪಿಸಲು ನಮ್ಮ ವ್ಯಾಪಕ ಸಂಪನ್ಮೂಲಗಳು, ಸೃಜನಶೀಲ ಸಾಮರ್ಥ್ಯ ಮತ್ತು ಮಾರುಕಟ್ಟೆ ಒಳನೋಟಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುವ ಈ ಕಾರ್ಯತಂತ್ರದ ಜಂಟಿ ಉದ್ಯಮವನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ರಿಲಯನ್ಸ್ ಗುಂಪಿನ ಪ್ರಮುಖ ಪಾಲುದಾರರಾಗಿ ಡಿಸ್ನಿಯನ್ನು ನಾವು ಸ್ವಾಗತಿಸುತ್ತೇವೆ,” ಎಂದಿದ್ದಾರೆ.
ವಾಲ್ಟ್ ಡಿಸ್ನಿ ಕಂಪನಿಯ ಸಿಇಒ ಬಾಬ್ ಐಗರ್ ಮಾತನಾಡಿ, “ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾರುಕಟ್ಟೆಯಾಗಿದೆ ಮತ್ತು ಕಂಪನಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸಲು ಈ ಜಂಟಿ ಉದ್ಯಮವು ಒದಗಿಸುವ ಅವಕಾಶಗಳಿಗಾಗಿ ನಾವು ಉತ್ಸುಕರಾಗಿದ್ದೇವೆ. ರಿಲಯನ್ಸ್ ಭಾರತೀಯ ಮಾರುಕಟ್ಟೆ ಮತ್ತು ಗ್ರಾಹಕರ ಬಗ್ಗೆ ಅಗಾಧ ತಿಳಿವಳಿಕೆಯನ್ನು ಹೊಂದಿದೆ ಮತ್ತು ನಾವು ಒಟ್ಟಾಗಿ ದೇಶದ ಪ್ರಮುಖ ಮಾಧ್ಯಮ ಕಂಪನಿಗಳಲ್ಲಿ ಒಂದನ್ನು ಸೃಷ್ಟಿಸುತ್ತೇವೆ, ಡಿಜಿಟಲ್ ಸೇವೆಗಳು, ಮನರಂಜನೆ ಮತ್ತು ಕ್ರೀಡಾ ಕಂಟೆಂಟ್ ಗಳ ವಿಶಾಲವಾದ ಪೋರ್ಟ್ ಫೋಲಿಯೊದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ನಮಗೆ ಅವಕಾಶ ಮಾಡಿಕೊಡುತ್ತದೆ,” ಎಂದಿದ್ದಾರೆ.
ಇದನ್ನೂ ಓದಿ: ಈ ಸ್ಟಾರ್ ನಟನ ಜೊತೆ ತನಿಷಾ ಕುಪ್ಪಂಡ ಲವ್, 6 ವರ್ಷದ ಪ್ರೀತಿ ಮುರಿದು ಬೀಳಲು ಇದೇ ಕಾರಣ!!
ಬೋಧಿ ಟ್ರೀ ಸಿಸ್ಟಮ್ಸ್‌ನ ಸಹ-ಸಂಸ್ಥಾಪಕರಾದ ಉದಯ್ ಶಂಕರ್ ಮಾತನಾಡಿ, “ನಾವು ರಿಲಯನ್ಸ್‌ನೊಂದಿಗೆ ನಮ್ಮ ಸಂಬಂಧವನ್ನು ವರ್ಧಿಸಲು ಸಂತೋಷಿಸುತ್ತೇವೆ, ಅದಕ್ಕೆ ಈಗ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ಸ್ಥಾನದಲ್ಲಿ ಇರುವ ಡಿಸ್ನಿಯನ್ನು ಸೇರಿಸಿಕೊಳ್ಳುವ ವಿಶೇಷತೆ ಹೊಂದಿದ್ದೇವೆ. ನಮ್ಮ ಪ್ರೇಕ್ಷಕರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ಅಸಾಧಾರಣ ಮೌಲ್ಯವನ್ನು ತಲುಪಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಜಂಟಿ ಉದ್ಯಮವು ಭಾರತದಲ್ಲಿ ಮನರಂಜನೆಯ ಭವಿಷ್ಯವನ್ನು ರೂಪಿಸಲು ಮತ್ತು ಡಿಜಿಟಲ್ ಇಂಡಿಯಾವನ್ನು ಜಾಗತಿಕ ಮಾದರಿಯನ್ನಾಗಿ ಮಾಡುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ವೇಗಗೊಳಿಸಲು ಸಿದ್ಧವಾಗಿದೆ,” ಎಂದಿದ್ದಾರೆ.
ವಹಿವಾಟು ನಿಯಂತ್ರಕ, ಷೇರುದಾರರು ಮತ್ತು ಇತರ ಸಾಮಾನ್ಯ ಅನುಮೋದನೆಗಳಿಗೆ ಈ ವಹಿವಾಟು ಒಳಪಟ್ಟಿರುತ್ತದೆ ಮತ್ತು ಕ್ಯಾಲೆಂಡರ್ ವರ್ಷ 2024ರ ಕೊನೆಯ ತ್ರೈಮಾಸಿಕದಲ್ಲಿ ಅಥವಾ ಕ್ಯಾಲೆಂಡರ್ ವರ್ಷ 2025 ರ ಮೊದಲ ತ್ರೈಮಾಸಿಕದಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.