ಬಂಜರು ಭೂಮಿಯಲ್ಲಿ `ಚಿನ್ನ` ಬೆಳೆದ್ರಾ ಮುಖೇಶ್ ಅಂಬಾನಿ! ಇಲ್ಲಿದೆ ರೋಚಕ ಸ್ಟೋರಿ
Mukesh Ambani: ದೇಶದ ಅಗ್ರ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಅದ್ಧೂರಿಯಾಗಿ ನೆರವೇದಿದೆ. ಈ ಸಮಯದಲ್ಲಿ ಅಂಬಾನಿ ಕುಟುಂಬಸ್ಥರು ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ದೇಶ-ವಿದೇಶದ ಗಣ್ಯರು,ಅತಿಥಿಗಳು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಮಧ್ಯೆ, ಜಾಮ್‌ನಗರದಲ್ಲಿ ಜರುಗಿದ ವಿವಾಹಪೂರ್ವ ಕಾರ್ಯಕ್ರಮ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ರಿಫೈನರಿ ಬಳಿಯಿರುವ ಮಾವಿನ ತೋಟವು ಇಂದು ವಿಶ್ವದಾದ್ಯಂತ ರಿಲಯನ್ಸ್ನ ಕೀರ್ತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
Mukesh Ambani: ಈಗಾಗಲೇ ತೈಲ, ರಿಲಯನ್ಸ್ ಜಿಯೋ ಮತ್ತು ಚಿಲ್ಲರೆ ಕ್ಷೇತ್ರಗಳಲ್ಲಿ ಭಾರೀ ಹೆಸರು ಮಾಡಿರುವ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಇದೀಗ ಕೃಷಿ ಕ್ಷೇತ್ರದಲ್ಲೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ. ಆಯಿಲ್ ಮತ್ತು ರಿಲಯನ್ಸ್ ಜಿಯೋ ಆಧಾರದ ಮೇಲೆ ಪ್ರಸ್ತುತ ವಿಶ್ವದ ಅಗ್ರ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಮುಖೇಶ್ ಅಂಬಾನಿ ಸದ್ಯ ನಿರಂತರವಾಗಿ ಕೃಷಿ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ನಾಯಕತ್ವದಲ್ಲಿರುವ ಅವರ ಕಂಪನಿಯು ವಿಶ್ವದ ಅತಿದೊಡ್ಡ ಮಾವು ರಫ್ತುದಾರ ಸಂಸ್ಥೆಯಾಗಿದೆ. ಅಷ್ಟಕ್ಕೂ ಮುಖೇಶ್ ಅಂಬಾನಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ಇಷ್ಟು ಪ್ರಗತಿ ಸಾಧಿಸಿದ್ದೇ ಒಂದು ರೋಚಕ. ಅದೇನು ಅಂತೀರಾ... ಮುಂದೆ ಓದಿ...
ಬರಡು ಭೂಮಿಯಲ್ಲಿ ಚಿನ್ನ ಬೆಳೆದ ಅಂಬಾನಿ!
ವಾಸ್ತವವಾಗಿ, 1997ರಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ (Jamnagar) ರಿಫೈನರಿಯಿಂದ ಮಾಲಿನ್ಯವು ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಸರ್ಕಾರದ ನಿಯಮಗಳನ್ನು ಅನುಸರಿಸಿ ಸುತ್ತ-ಮುತ್ತಲಿನ ಬರಡು ಭೂಮಿಯಲ್ಲಿ (Barren Land) ಮರಗಳನ್ನು ನೆಡುವ ಮೂಲಕ ಅದರಲ್ಲೂ ಹಣ್ಣುಗಳ ರಾಜ ಮಾವನ್ನು ಬೆಳೆಯುವ ಮೂಲಕ ಬರಡು ಭೂಮಿಯನ್ನು ಬೃಹತ್ ಮಾವಿನ ತೋಟವನ್ನಾಗಿ ಪರಿವರ್ತಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ (Reliance Industries Company) ಈ ಉಪಕ್ರಮದ ಉದ್ದೇಶವು ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ಸಂಸ್ಕರಣಾಗಾರದ ಸುತ್ತಲೂ ಹಸಿರು ಬೆಲ್ಟ್ ಅನ್ನು ರಚಿಸುವುದಾಗಿತ್ತು. ಅಂಬಾನಿ ಕಂಪನಿಯ ಈ ಕ್ರಮಕ್ಕೆ ಸದ್ಯ ಪ್ರಪಂಚದಾದ್ಯಂತ ಭಾರೀ ಮನ್ನಣೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ- ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್: ಸದ್ಯದಲ್ಲೇ ಹೆಚ್ಚಾಗಲಿದೆ ವಾಹನಗಳ ಎಮಿಷನ್ ಟೆಸ್ಟಿಂಗ್ ದರ
600 ಎಕರೆ ಪ್ರದೇಶದಲ್ಲಿ 200ಕ್ಕೂ ಹೆಚ್ಚು ತಳಿಗಳ್ 1.3 ಲಕ್ಷ ಮಾವಿನ ಮರ:
ಬೃಹತ್ 600 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ಭೂಮಿಯಲ್ಲಿ 200ಕ್ಕೂ ಹೆಚ್ಚು ತಳಿಗಳ ಸುಮಾರು 1.3 ಲಕ್ಷ ಮಾವಿನ ಮರಗಳಿವೆ. ಈ ಮಾವಿನ ಮರಗಳಿಗೆ ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ (Reliance Founder Dhirubhai Ambani) ಅವರ ಹೆಸರನ್ನೇ ಇಡಲಾಗಿದೆ. ರಿಲಯನ್ಸ್ ಆಧುನಿಕ ತಂತ್ರಜ್ಞಾನದ ಸಹಾಯದಿಂದಾಗಿ ಹೆಚ್ಚು ಉಪ್ಪು ಮತ್ತು ಒಣ ಭೂಮಿಯಾಗಿದ್ದ ಬರಡು ಭೂಮಿಯಲ್ಲಿ ರಿಲಯನ್ಸ್ ಮಾವಿನ ಮರಗಳಿಂದ ಉತ್ತಮ ಉತ್ಪಾದನೆಯನ್ನು ಹೊರತೆಗೆಯಲು ಸಾಧ್ಯವಾಗಿದೆ. ಇದರಲ್ಲಿ ಸುಧಾರಿತ ಕೃಷಿ ತಂತ್ರಜ್ಞಾನಗಳಾದ (Advanced Agricultural Technology) ನೀರು ಕೊಯ್ಲು, ಹನಿ ನೀರಾವರಿ ಮತ್ತು ಏಕಕಾಲಿಕ ರಸಗೊಬ್ಬರಗಳನ್ನು ಸಹ ಬಳಸಲಾಯಿತು. ಈ ತಂತ್ರದಲ್ಲಿ ಉಪ್ಪು ನೀರನ್ನು ಶುದ್ಧ ನೀರಾಗಿ ಪರಿವರ್ತಿಸುವ ಸಸ್ಯವಿದ್ದು, ಈ ಸ್ಥಾವರದ ಮೂಲಕ ಈ ಪ್ರದೇಶದಲ್ಲಿ ಮಾಲಿನ್ಯ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ರಿಲಯನ್ಸ್ ಏಷ್ಯಾದ ಅತಿದೊಡ್ಡ ಮಾವು ರಫ್ತು ರಫುದಾರ ಕಂಪನಿ (Largest mango exporting company in Asia):
ರಿಲಯನ್ಸ್ ಮಾಲೀಕತ್ವದ ಒಡೆಯ ಮುಕೇಶ್ ಅಂಬಾನಿ (Mukesh Ambani) ಅವರ ತೋಟದಲ್ಲಿ ಪ್ರತಿ ವರ್ಷ 600 ಟನ್ ಮಾವಿನ ಹಣ್ಣುಗಳನ್ನು (Mangoes) ಉತ್ಪಾದಿಸಲಾಗುತ್ತಿದೆ. ಈ ಉದ್ಯಾನದಲ್ಲಿ ದೇಶದ ಪ್ರಸಿದ್ಧ ತಳಿಗಳಾದ ಕೇಸರ್, ಅಲ್ಫಾನ್ಸೋ, ರತ್ನ, ಸಿಂಧು, ನೀಲಂ, ಆಮ್ರಪಾಲಿ ಅಲ್ಲದೆ ವಿದೇಶಿ ತಳಿಗಳಾದ ಫ್ಲೋರಿಡಾದ ಟಾಮಿ ಅಟ್ಕಿನ್ಸ್, ಕೆಂಟ್ ಮತ್ತು ಲಿಲಿ, ಇಸ್ರೇಲ್‌ನ ಕೀಟ್ ಮತ್ತು ಮಾಯಾ ಎಂಬ ಮಾವಿನಗಳನ್ನು ಬೆಳೆಯಲಾಗುತ್ತದೆ. ಪ್ರತಿ ವರ್ಷ ಸುಮಾರು 600 ಟನ್ ಮಾವಿನ ಹಣ್ಣುಗಳನ್ನು ತೋಟದಿಂದ ಉತ್ಪಾದಿಸುವ ರಿಲಯನ್ಸ್, ದೇಶದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದಲ್ಲೇ ಅತಿದೊಡ್ಡ ಮಾವು ರಫ್ತು ಕಂಪನಿಯಾಗಿ (Largest mango exporting company in Asia) ಹೊರಹೊಮ್ಮಿದೆ. ಮಾವು ರಫ್ತಿಗೆ ಸಂಬಂಧಿಸಿದಂತೆ, ರಿಲಯನ್ಸ್ ದೇಶ ಮತ್ತು ವಿಶ್ವದ ಅಗ್ರ ಕಂಪನಿಗಳಲ್ಲಿ ಸೇರಿದೆ.
ಇದನ್ನೂ ಓದಿ- ರತನ್ ಟಾಟಾ ಕಂಪನಿಗೆ ಭಾರೀ ಲಾಭ ತಂದು ಕೊಟ್ಟ ಹಣಕಾಸು ಸಚಿವರ ಈ ಘೋಷಣೆ !
ಮಾವಿನ ವ್ಯಾಪಾರದ ಹೊರತಾಗಿ, ಪ್ರತಿ ವರ್ಷ ರಿಲಯನ್ಸ್ ಜಾಮ್‌ನಗರದ ರೈತರಿಗೆ ಒಂದು ಲಕ್ಷ ಮಾವಿನ ಸಸಿಗಳನ್ನು ವಿತರಿಸುತ್ತದೆ. ಇದಲ್ಲದೆ, ರೈತರಿಗಾಗಿ ರಿಲಯನ್ಸ್‌ನಿಂದ ಹೊಸ ಕೃಷಿ ತಂತ್ರಗಳ ಆಧಾರದ ಮೇಲೆ ತರಬೇತಿ ಅವಧಿಗಳನ್ನು ಸಹ ಆಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ದೇಶದ ಶ್ರೀಮಂತ ವ್ಯಕ್ತಿಯ ಈ ಸಾಧನೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.