Reserve Bank of India: ಎರಡು ಬ್ಯಾಂಕ್‌ಗಳ ವಿಲೀನಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. 2025ರ ಜನವರಿ 6ರಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬ್ಯಾಂಕ್‌ಗಳು ಒಂದಾಗಲಿವೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  


COMMERCIAL BREAK
SCROLL TO CONTINUE READING

ʼʼಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949ರ ಸೆಕ್ಷನ್ 56ರೊಂದಿಗೆ, ಸೆಕ್ಷನ್ 44 A ಉಪ-ವಿಭಾಗ (4)ರ ಅಡಿ ಈ ಎರಡು ಬ್ಯಾಂಕ್‌ಗಳ ಮಿಲನಕ್ಕೆ ಅನುಮೋದಿಸಲಾಗಿದೆ" ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಮಹಾರಾಷ್ಟ್ರದ ಕಾಸ್ಮೋಸ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಒಂದಾಗಲಿವೆ. 


ಇದನ್ನೂ ಓದಿ: ವಿಪರೀತ ಚಳಿ: ಉತ್ತರ ಭಾರತದ ಕೆಲವು ರಾಜ್ಯದ ಶಾಲೆಗಳಿಗೆ ರಜೆ ಘೋಷಣೆ


ಜನವರಿ 6ರಿಂದಲೇ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು (ಕರ್ನಾಟಕ) ಶಾಖೆಗಳು ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಮಹಾರಾಷ್ಟ್ರ) ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2024ರ ಡಿಸೆಂಬರ್ 31ರ ಆದೇಶದ ಮೂಲಕ, ಕಾಸ್ಮೊಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಬ್ಯಾಂಕ್) ಅಲ್ಲದವರಿಗೆ ₹8.30 ಲಕ್ಷ ರೂ. ವಿತ್ತೀಯ ದಂಡವನ್ನು ವಿಧಿಸಿದೆ. ಈ ಎರಡು ಬ್ಯಾಂಕ್‌ಗಳ ವಿಲೀನದಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ವರದಿಯಾಗಿದೆ. 


ಮಾರ್ಚ್ 31, 2023ರಂತೆ ಆರ್‌ಬಿಐ ನಿರ್ದೇಶನಗಳನ್ನು ಪಾಲನೆ ಮಾಡದ ಹಿನ್ನೆಲೆ ಮೇಲ್ವಿಚಾರಣಾ ಸಂಶೋಧನೆ ವರದಿ ಆಧರಿಸಿ ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ನೋಟಿಸ್‌ಗೆ ಬ್ಯಾಂಕ್‌ನ ಉತ್ತರವನ್ನು ಪರಿಗಣಿಸಿದ ನಂತರ ಸೂಚಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ದಂಡವನ್ನು ಏಕೆ ವಿಧಿಸಬಾರದು ಎಂದು ಪ್ರಶ್ನೆ ಮಾಡಿತ್ತು. ನಂತರ ವೈಯಕ್ತಿಕ ವಿಚಾರಣೆ ಮತ್ತು ಹೆಚ್ಚುವರಿ ಸಲ್ಲಿಕೆಗಳ ಪರಿಶೀಲನೆಯಲ್ಲಿಯೂ ಬ್ಯಾಂಕ್ ಸೂಕ್ತ ಕಾರಣ ನೀಡುವಲ್ಲಿ ವಿಫಲವಾಗಿತ್ತು. ಆದ್ದರಿಂದ ₹8.30 ಲಕ್ಷ ವಿತ್ತೀಯ ದಂಡವನ್ನು ವಿಧಿಸಲಾಗಿತ್ತು.


ಇದನ್ನೂ ಓದಿ: ಕೆಜಿಗಟ್ಟಲೇ ಮೇಕಪ್ ಇಲ್ಲ, ತುಂಡು ಬಟ್ಟೆ ಇಲ್ಲವೇ ಇಲ್ಲ.. ನಗುವಿನಿಂದಲೇ ಫೇಮಸ್‌ ಆದ ಸುಂದರಿ..! ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.