Good News: ಸಾಲ ಕಟಬಾಕಿ ದಂಡಕ್ಕೆ ಸಂಬಂಧಿಸಿದಂತೆ ಹೊಸ ಕರಡು ನಿಯಮ ಜಾರಿಗೊಳಿಸಿದ RBI
Loan Default Penalty Draft Rule: ರಿಸರ್ವ್ ಬ್ಯಾಂಕ್ ಡ್ರಾಫ್ಟ್ ನಿಯಮವೊಂದನ್ನು ಜಾರಿಗೊಳಿಸಿದೆ. ಇದರಿಂದ ಇನ್ಮುಂದೆ ಹಣಕಾಸು ಸಂಸ್ಥೆಗಳು ಅಥವಾ ಸಾಲದಾತರು ಸಾಲ ಪಡೆದುಕೊಂಡವರ ಡೀಫಾಲ್ಟ್ ಮಾಡಿದ ಸಾಲಗಳ ಮೇಲೆ ಅನಿಯಂತ್ರಿತ ದಂಡವನ್ನು ವಿಧಿಸುವಂತಿಲ್ಲ. ಇದು ಸಾಲದಾತರಿಗೆ ಆದಾಯದ ಮೂಲವಾಗಲಾರದು ಎಂದು ಆರ್ಬಿಐ ಹೇಳಿದೆ. ಮೇ 15ರವರೆಗೆ ಕರಡು ನಿಯಮ ಪ್ರತಿಯಲ್ಲಿ ಸಲಹೆಗಳನ್ನು ಬ್ಯಾಂಕ್ ಸಲಹೆಗಳನ್ನು ಕೋರಿದೆ.
Loan Default Penalty Draft Rule: ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ದಂಡ ವಿಧಿಸುವ ಕುರಿತು ಕರಡು ನಿಯಮವನ್ನು ಹೊರಡಿಸಿದೆ. ಈ ಕರಡಿನಲ್ಲಿ, ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ದಂಡವು ಆದಾಯದ ಮೂಲವಾಗಿರಲು ಸಾಧ್ಯವಿಲ್ಲ ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಸಾಲದಾತನು ದಂಡದ ಮೇಲೆ ಬಡ್ಡಿಯನ್ನು ವಿಧಿಸಿದರೆ, ಅದು ತಪ್ಪು. ಸಾಲ ಕೊಡುವವರು ಇದನ್ನು ಮಾಡಬಾರದು ಎಂದು ಕೇಂದ್ರೀಯ ಬ್ಯಾಂಕ್ ಖಡಾಖಂಡಿತವಾಗಿ ಹೇಳಿದೆ.
ದಂಡವು ಆದಾಯದ ಮೂಲವಲ್ಲ
ದಂಡವನ್ನು ದಂಡದ ಶುಲ್ಕದಂತೆ ಪರಿಗಣಿಸಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಸಾಲದಾತರು ದಂಡ ಮತ್ತು ದಂಡಕ್ಕೂ ಬಡ್ಡಿ ವಿಧಿಸಿ ಆದಾಯ ಎಂದು ಪರಿಗಣಿಸಬಾರದು. ಚಿಲ್ಲರೆ ಸಾಲಗಾರನಿದ್ದರೆ ಅವನಿಗೆ ದಂಡವು ತುಂಬಾ ಕಡಿಮೆಯಿರಬೇಕು. ಬ್ಯಾಂಕ್ ಯಾವುದೇ ರೀತಿಯ ದಂಡವನ್ನು ವಿಧಿಸಿದರೆ, ಸಾಲ ಒಪ್ಪಂದದ ಸಮಯದಲ್ಲಿಯೇ ಗ್ರಾಹಕರಿಗೆ ಬಡ್ಡಿದರ, ದಂಡದ ಶುಲ್ಕಗಳು ಮತ್ತು ಎಲ್ಲಾ ಷರತ್ತುಗಳ ಬಗ್ಗೆ ಸಾಲ ಪಡೆಯುವವರಿಗೆ ಮಾಹಿತಿಯನ್ನು ನೀಡಬೇಕು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ-Business Idea: ಮನೆಯಿಂದಲೇ ಈ ಸೂಪರ್ ಹಿಟ್ ಬಿಸ್ನೆಸ್ ಆರಂಭಿಸಿ ವಾರ್ಷಿಕ 10 ಲಕ್ಷಕ್ಕೂ ಅಧಿಕ ಸಂಪಾದಿಸಿ!
ಯಾವುದೇ ಹಣಕಾಸು ಸಂಸ್ಥೆಗೆ ದಂಡ ಸಂಬಂಧಿತ ನೀತಿ ಏನು, ಮಂಡಳಿಯ ಒಪ್ಪಿಗೆ ಮತ್ತು ಅನುಮೋದನೆ ಅಗತ್ಯ. ಸಾಲದಾತರು ಈ ಕುರಿತು ತಮ್ಮ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಬೇಕು. ಸಾಲವನ್ನು ಮರುಪಾವತಿಸಲು ಗ್ರಾಹಕರಿಗೆ ಜ್ಞಾಪನೆ ಸಂದೇಶವನ್ನು ಕಳುಹಿಸಿದರೆ, ದಂಡದ ಬಗ್ಗೆ ಮಾಹಿತಿಯನ್ನು ಸಹ ಸ್ವೀಕರಿಸಬೇಕು.
ಮೇ 15 ರೊಳಗೆ ಡ್ರಾಫ್ಟ್ ನಿಯಮಕ್ಕೆ ಸಂಬಂಧಿಸಿದಂತೆ ಸಲಹೆ ಕೋರಲಾಗಿದೆ
ರಿಸರ್ವ್ ಬ್ಯಾಂಕ್ ಮೇ 15 ರೊಳಗೆ ಕರಡು ನಿಯಮಗಳ ಕುರಿತು ಸಲಹೆಗಳನ್ನು ಕೋರಿದೆ. ಈ ನಿಯಮವು ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ವಸತಿ ಕಂಪನಿಗಳು, NABARD, Exim ಬ್ಯಾಂಕ್, NHB, SIDBI ಮತ್ತು NaBFID ನಂತಹ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸಲಿವೆ. ಆದರೆ, ರಿಸರ್ವ್ ಬ್ಯಾಂಕ್ ನ ಈ ನಿಯಮ ಕ್ರೆಡಿಟ್ ಕಾರ್ಡ್ ಗಳಿಗೆ ಅನ್ವಯಿಸುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.