Reserve Bank of India: ದೇಶದಲ್ಲಿ ಸದ್ಯ ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಭಾರತೀಯ ರಿಸರ್ವ್‌ ಬ್ಯಾಂಕ್(‌RBI) ಮಹತ್ವದ ಮಾಹಿತಿ ನೀಡಿದೆ. 2024ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಸಂಪೂರ್ಣ ಕರೆನ್ಸಿ ಪೈಕಿ ₹500ರ ನೋಟುಗಳ ಪ್ರಮಾಣ ಶೇ.86.5ಕ್ಕೆ ಏರಿಕೆಯಾಗಿದೆ ಅಂತಾ ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Photos: ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ


ಕಳೆದ ವರ್ಷ ಇದೇ ಅವಧಿಯಲ್ಲಿ ₹500 ಮುಖಬೆಲೆಯ ನೋಟುಗಳ ಪ್ರಮಾಣ ಶೇ.77.1ರಷ್ಟಿತ್ತು ಅಂತಾ ಆರ್‌ಬಿಐ ಹೇಳಿದೆ. 2023ರ ಮೇ ತಿಂಗಳಿನಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯವ ಆದೇಶದ ಬಳಿಕ ಇವುಗಳ ಪ್ರಮಾಣ ಶೇ.10.8ರಿಂದ 0.2ಕ್ಕೆ ಇಳಿದಿದೆ ಎಂದು ತಿಳಿಸಿದೆ. 


ಇದನ್ನೂ ಓದಿ: ಪ್ರಧಾನಿ ಮೋದಿ ಧ್ಯಾನ ಮಾಡಲು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕವನ್ನು ಆರಿಸಿಕೊಂಡಿದ್ದೇಕೆ?


ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಧಿಕ ಅಂದರೆ 5.16 ಲಕ್ಷದಷ್ಟಿದೆ. ಅದೇ ರೀತಿ ₹10 ಮುಖಬೆಲೆಯ ನೋಟುಗಳ ಸಂಖ್ಯೆ 2.49 ಲಕ್ಷದಷ್ಟಿದ್ದು 2ನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಈ ಎರಡೂ ನೋಟುಗಳ ಚಲಾವಣೆಯ ಮೌಲ್ಯ ಮತ್ತು ಪ್ರಮಾಣವು ಕ್ರಮವಾಗಿ ಶೇ.3.9 ಮತ್ತು 7.8ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ