Retirement Age Increase: ಸರ್ಕಾರಿ ಅಥವಾ ಖಾಸಗಿ ನೌಕರರ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಊಹಾಪೋಹಗಳು ಹೊರಬೀಳುತ್ತಿವೆ .ಖಾಸಗಿ ಮತ್ತು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮುಂದಾಗಿದೆ. ದೇಶಾದ್ಯಂತ ಹೆಚ್ಚುತ್ತಿರುವ ಹಿರಿಯ ನಾಗರಿಕರ ವಯಸ್ಸಿನ ಕಾರಣ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು EPFO ​​ಪರಿಗಣಿಸುತ್ತಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಪಿಂಚಣಿ ವ್ಯವಸ್ಥೆಯ ಹೊರೆ ಇದರಿಂದ ಕಡಿಮೆಯಾಗಲಿದೆ
ಮಾಧ್ಯಮ ವರದಿಗಳ ಪ್ರಕಾರ, ಇಪಿಎಫ್‌ಒ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರಿಂದ ಪಿಂಚಣಿ ವ್ಯವಸ್ಥೆಯ ಮೇಲಿನ ಹೊರೆ ಗಮನಾರ್ಹವಾಗಿ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಇದರ ಲಾಭ ಸರ್ಕಾರ ಹಾಗೂ ನೌಕರರಿಗೂ ಕೂಡ ಸಿಗಲಿದೆ. ಹೀಗಾಗಿ ಸರ್ಕಾರ ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಯೋಜನೆಗೆ ಮುಂದಾಗಿದೆ ಎನ್ನಲಾಗುತ್ತಿದೆ.


2047 ರ ಹೊತ್ತಿಗೆ ಎಷ್ಟು ಜನರು ನಿವೃತ್ತರಾಗುತ್ತಾರೆ
ನೌಕರರ ಭವಿಷ್ಯ ನಿಧಿ ಸಂಘಟನೆ ನೀಡಿರುವ ಮಾಹಿತಿಯ ಪ್ರಕಾರ ಮಾಹಿತಿಯ ಪ್ರಕಾರ 2047ರ ಹೊತ್ತಿಗೆ ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 140 ಮಿಲಿಯನ್ ಗಿಂತಲೂ ಹೆಚ್ಚಾಗಲಿದ್ದು, ಇದರಿಂದ ಪಿಂಚಣಿ ನಿಧಿಯ ಮೇಲಿನ ಒತ್ತಡ ಗಣನೀಯವಾಗಿ ಹೆಚ್ಚಾಗಲಿದೆ ಎನ್ನಲಾಗಿದೆ. ಭಾರತವನ್ನು ಹೊರತುಪಡಿಸಿದರೆ, ಇತರ ದೇಶಗಳಲ್ಲಿ ಇದು 67 ವರ್ಷಗಳವರೆಗೆ ಇದೆ ಎನ್ನಲಾಗಿದೆ.


ಇದನ್ನೂ ಓದಿ-Car Offers: ಮಾರುತಿ ಸುಜುಕಿ ಕಂಪನಿಯ ಈ ಅಗ್ಗದ ಕಾರುಗಳ ಮೇಲೆ ಸಿಗ್ತಿದೆ ಬಂಪರ್ ಡಿಸ್ಕೌಂಟ್, ಯಾವ ಕಾರಿನ ಮೇಲೆ ಎಷ್ಟು?


ಹೆಚ್ಚಿನ ಹಣವನ್ನು ನೌಕರರು ಠೇವಣಿ ಇಡುತ್ತಾರೆ
ನಿವೃತ್ತಿ ವಯಸ್ಸು ಹೆಚ್ಚಾದರೆ, ನೌಕರರು ಪಿಂಚಣಿ ನಿಧಿಗೆ ಹೆಚ್ಚಿನ ಹಣ ಠೇವಣಿ ಇಡುತ್ತಾರೆ ಮತ್ತು ನೌಕರರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-ಮುಂದಿನ ತಿಂಗಳಿನಿಂದ ಸರ್ಕಾರದ ಈ ಜನಪ್ರಿಯ ಯೋಜನೆ ಸ್ಥಗಿತ.! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ


ಪ್ರಸ್ತುತ ಭಾರತದಲ್ಲಿ ನಿವೃತ್ತಿ ವಯಸ್ಸು ಎಷ್ಟು?
ಭಾರತದಲ್ಲಿ ಪ್ರಸ್ತುತ ಗರಿಷ್ಠ ನಿವೃತ್ತಿ ವಯಸ್ಸು 58 ರಿಂದ 65 ವರ್ಷಗಳಾಗಿವೆ. ಎಲ್ಲಾ ರೀತಿಯ ಖಾಸಗಿ ಮತ್ತು ಸರ್ಕಾರಿ ನೌಕರರು ಇದರ ವ್ಯಾಪ್ತಿಗೆ ಬರುತ್ತಾರೆ. ಇದಲ್ಲದೆ, ನಾವು ಯುರೋಪಿಯನ್ ಒಕ್ಕೂಟದ ಕುರಿತು ಹೇಳುವುದಾದರೆ, ಅಲ್ಲಿ ನಿವೃತ್ತಿಯ ಸರಾಸರಿ ವಯಸ್ಸು 65 ವರ್ಷಗಳಾಗಿದೆ. ಪ್ರಸ್ತುತ, ಯುರೋಪ್‌ನ ಡೆನ್ಮಾರ್ಕ್, ಇಟಲಿ ಮತ್ತು ಗ್ರೀಸ್‌ನಲ್ಲಿ ನಿವೃತ್ತಿ ವಯಸ್ಸು 67 ವರ್ಷವಾಗಿದ್ದರೆ, ಅಮೆರಿಕದಲ್ಲಿ ಇದನ್ನು 66 ವರ್ಷಕ್ಕೆ ನಿಗದಿಪಡಿಸಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.