ರಿಲಯನ್ಸ್ ಇಂಡಸ್ಟ್ರೀಸ್ ನ ನಿಜವಾದ ಮಾಲೀಕ ಅಂಬಾನಿ ಸಹೋದರರಲ್ಲ! ಕಂಪನಿಯ ಅತಿ ಹೆಚ್ಚು ಶೇರ್ ಇರುವುದು ಈ ವ್ಯಕ್ತಿಯ ಹೆಸರಿನಲ್ಲಿ !
Relaince Industry:ಅಂಬಾನಿ ಕುಟುಂಬದಲ್ಲಿ ರಿಲಯನ್ಸ್‌ನ ಹೆಚ್ಚಿನ ಷೇರುಗಳನ್ನು ಹೊಂದಿರುವ ವ್ಯಕ್ತಿ ಮುಖೇಶ್ ಅಂಬಾನಿ ಅಲ್ಲ. ಹಾಗಂತ ಅನಿಲ್ ಅಂಬಾನಿ ಕೂಡಾ ಅಲ್ಲ.
Relaince Industry : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹಕ್ಕೆ ಅಂಬಾನಿ ಕುಟುಂಬ ಹೊಳೆಯಂತೆ ಹಣ ಹರಿಸಿದೆ.ಮುಖೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿ.ಆದರೆ,ಅಂಬಾನಿ ಕುಟುಂಬದಲ್ಲಿ ರಿಲಯನ್ಸ್‌ನ ಹೆಚ್ಚಿನ ಷೇರುಗಳನ್ನು ಹೊಂದಿರುವ ವ್ಯಕ್ತಿ ಮುಖೇಶ್ ಅಂಬಾನಿ ಅಲ್ಲ. ಹಾಗಂತ ಅನಿಲ್ ಅಂಬಾನಿ ಕೂಡಾ ಅಲ್ಲ.ಹಾಗಿದ್ದರೆ ರಿಲಯನ್ಸ್‌ನ ಅತಿದೊಡ್ಡ ಷೇರುದಾರ ಯಾರು ಎನ್ನುವ ಪ್ರಶ್ನೆ ಕುತೂಹಲ ಮೂಡಿಸುವುದು ಸಹಜ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹಕ್ಕೆ ಅಂಬಾನಿ ಕುಟುಂಬ ಮನಸೋ ಇಚ್ಛೆ ಖರ್ಚು ಮಾಡಿದೆ. ಇದು ಶತಮಾನದ ಅತ್ಯಂತ ದುಬಾರಿ ಮದುವೆ ಎನಿಸಿಕೊಂಡಿದೆ. ವರದಿಗಳ ಪ್ರಕಾರ,ಅನಂತ್-ರಾಧಿಕಾ ಮದುವೆಗೆ ಅಂಬಾನಿ ಕುಟುಂಬ ವ್ಯಯಿಸಿದ್ದು 5000 ಕೋಟಿ ರೂ.ಮದುವೆಗೆ ಇಷ್ಟು ಖರ್ಚು ಮಾಡಿದ ಅಂಬಾನಿ ಕೋಟ್ಯಂತರ ಸಂಪತ್ತಿನ ಒಡೆಯ.ಪ್ರಪಂಚದಾದ್ಯಂತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ 11 ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ : ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ !ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ ಆದೇಶ !
ಮುಖೇಶ್ ಅಂಬಾನಿ ಸಂಪತ್ತು :
122 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಕುಟುಂಬದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಅತಿ ಹೆಚ್ಚು ಷೇರು ಯಾರ ಬಳಿ ಎನ್ನುವುದು ಸದ್ಯ ಚೆರ್ಚೆಯಲ್ಲಿರುವ ವಿಷಯ. ಮುಖೇಶ್ ಅಥವಾ ನೀತಾ ಅಂಬಾನಿ ಅಥವಾ ಅಂಬಾನಿ ಕುಟುಂಬದ ಮಕ್ಕಳು ರಿಲಯನ್ಸ್‌ನ ಅತಿದೊಡ್ಡ ಷೇರುದಾರರು ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಊಹೆ ತಪ್ಪು.
ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಷೇರು ಹೊಂದಿರುವವರು ಯಾರು? :
ರಿಲಯನ್ಸ್‌ನ ಗರಿಷ್ಠ ಷೇರುಗಳನ್ನು ಮುಖೇಶ್ ಅಂಬಾನಿ, ನೀತಾ ಅಂಬಾನಿ ಅಥವಾ ಅವರ ಮೂವರು ಮಕ್ಕಳು ಮತ್ತು ಸೊಸೆಯರ ಹೆಸರಿನಲ್ಲಿ ಖಂಡಿತಾ ಇಲ್ಲ.ಕಂಪನಿಯ ಅತಿದೊಡ್ಡ ವೈಯಕ್ತಿಕ ಷೇರು ಇರುವುದು ಮುಖೇಶ್ ಅಂಬಾನಿ ತಾಯಿ ಕೋಕಿಲಾಬೆನ್ ಅಂಬಾನಿ ಹೆಸರಿನಲ್ಲಿ. ಇವರ ಬಳಿ ಕಂಪನಿಯ ಶೇಕಡಾ 0.24 ಪಾಲು ಇದೆ. ಅವರು ರಿಲಯನ್ಸ್‌ನ 1,57,41,322 ಷೇರುಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ : ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಲೇ ಅಂಬಾನಿಗೆ ಹೊಡೆಯಿತು 10,000 ಕೋಟಿ ಲಾಟರಿ !ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೈ ಜಂಪ್
ರಿಲಯನ್ಸ್‌ನ ನಿಜವಾದ ಮಾಲೀಕ! :
ಎಫ್‌ಐಐ ಮತ್ತು ಸಾರ್ವಜನಿಕ ಷೇರುದಾರರು 49.61 ಶೇಕಡಾ ಈಕ್ವಿಟಿಯನ್ನು ಹೊಂದಿದ್ದಾರೆ. ಮುಖೇಶ್ ಅಂಬಾನಿಯವರ ಕಂಪನಿಯಲ್ಲಿ ವೈಯಕ್ತಿಕ ಷೇರುಗಳು ಕೇವಲ 0.12 ಶೇಕಡಾ., ನೀತಾ ಅಂಬಾನಿ ಕಂಪನಿಯಲ್ಲಿ 0.12% ವೈಯಕ್ತಿಕ ಷೇರುಗಳನ್ನು ಹೊಂದಿದ್ದಾರೆ.ಮುಖೇಶ್ ಮತ್ತು ನೀತಾ ಅಂಬಾನಿ ಅವರ ಮೂವರು ಮಕ್ಕಳಾದ ಆಕಾಶ್,ಅನಂತ್ ಮತ್ತು ಇಶಾ ಅಂಬಾನಿ 0.12 ಶೇಕಡಾ ಷೇರುಗಳನ್ನು ಹೊಂದಿದ್ದಾರೆ.ಆದರೆ, RIL ನಲ್ಲಿ ಅತಿ ದೊಡ್ಡ ವೈಯಕ್ತಿಕ ಷೇರುದಾರರಾಗಿರುವ ಕೋಕಿಲಾಬೆನ್ ಅಂಬಾನಿ ಕಂಪನಿಯಲ್ಲಿ 0.24 ಶೇಕಡಾ ಪಾಲನ್ನು ಹೊಂದಿದ್ದಾರೆ.ಅಂಬಾನಿ ಕುಟುಂಬವು ಒಟ್ಟಾಗಿ ರಿಲಯನ್ಸ್‌ನಲ್ಲಿ 50.39 ರಷ್ಟು ಪಾಲನ್ನು ಹೊಂದಿದೆ.
ಕೋಕಿಲಾಬೆನ್ ಅವರ ಆಸ್ತಿ ಎಷ್ಟು?:
ಮುಖೇಶ್ ಮತ್ತು ನೀತಾ ಅಂಬಾನಿ ಅವರ ಮೂವರು ಮಕ್ಕಳು ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಯ ಭಾಗವಾಗಿದ್ದರೆ,ಕೋಕಿಲಾಬೆನ್ ಕಂಪನಿಯ ನಿರ್ವಹಣೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ.ಆಕೆಯ ಸಂಪತ್ತಿನ ಬಗ್ಗೆ ಮಾತನಾಡುವುದಾದರೆ ಕೋಕಿಲಾಬೆನ್ ಅವರ ಒಟ್ಟು ಸಂಪತ್ತು ಸುಮಾರು 18,000 ಕೋಟಿ ರೂ.ಕೋಟಿಗಟ್ಟಲೆ ಒಡತಿ ಕೋಕಿಲಾಬೆನ್ ಅವರದ್ದು ಸರಳ ಜೀವನ.
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ