ನವದೆಹಲಿ: Royal Enfield ಭಾರತದಲ್ಲಿ ತನ್ನ Meteor 350 ಬೈಕ್ ಬಿಡುಗಡೆಯೊಂದಿಗೆ ಮತ್ತೊಂದು ದೊಡ್ಡ ಘೋಷಣೆ ಮಾಡಿದೆ. ಒಂದೊಂದಾಗಿ 28 ಹೊಸ ಮಾದರಿಗಳನ್ನು ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ. ಮುಂದಿನ 7 ವರ್ಷಗಳಲ್ಲಿ ಈ ಮಾಡೆಲ್ ಗಳನ್ನು ಒಂದೊಂದಾಗಿ ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿದೆ. ಅಂದರೆ ಪ್ರತಿ ಮೂರು ತಿಂಗಳಿಗೆ ಅಥವಾ ಕ್ವಾರ್ಟರ್ ಗೆ ಬೈಕ್ ಪ್ರೇಮಿಗಳಿಗೆ ನೂತನ Bullet ಸವಾರಿ ಮಾಡುವ ಅವಕಾಶ ಸಿಗಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ಮೊದಲ ಬಾರಿಗೆ Bluetooth Connectivity ಜೊತೆಗೆ ಬೈಕ್ ಬಿಡುಗಡೆ, ಇಲ್ಲಿದೆ ಅದರ ಬೆಲೆ, ವೈಶಿಷ್ಟ್ಯ              


ಕಳೆದ ವಾರ, ರಾಯಲ್ ಎನ್‌ಫೀಲ್ಡ್ ತನ್ನ Thunderbird 350 ಅನ್ನು Meteor 350 ನೊಂದಿಗೆ ಬದಲಾಯಿಸಿದೆ. ಈ ಬೈಕ್‌ನ 3 ರೂಪಾಂತರಗಳಾಗಿರುವ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್ನೋವಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಜೆ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು 350 ಸಿಸಿ ಫ್ಯುಯೆಲ್ ಇಂಜೆಕ್ಟೆಡ್ ಬಿಎಸ್ VI ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಬೈಕು ಕಸ್ಟಮೈಸ್ ಮಾಡುವ ಅವಕಾಶ ಕೂಡ ಗ್ರಾಹಕರಿಗೆ ಲಭ್ಯವಿದೆ.


ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ದಸಾರಿ, ಕಂಪನಿ ಥೈಲ್ಯಾಂಡ್ ನಲ್ಲಿ ವರ್ಷವಿಡಿ ಅಸೆಂಬ್ಲಿ ಯುನಿಟ್ ಪ್ರದರ್ಶಿಸಲಿದೆ. ಅಲ್ಲದೆ ಕಂಪನಿ ದೇಸಿಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಪಾರುಪತ್ಯ ಸಾಧಿಸಲು ನೂತನ ಮಾಡೆಲ್ ಗಳನ್ನು ಬಿಡುಗಡೆಗೊಲಿಸಲಿದೆ. ಈ ಎಲ್ಲ ಮಾಡೆಲ್ ಗಳು 250 ರಿಂದ 750 ಸಿಸಿ ಸೆಗ್ಮೆಂಟ್ ನಲ್ಲಿ ಇರಲಿವೆ. ದಾಸರಿ ಹೇಳುವ ಪ್ರಕಾರ ಕೊವಿಡ್ 19 ಕಾಲದಲ್ಲಿ ಬೈಕ್ ಬುಕ್ಕಿಂಗ್ ನಲ್ಲಿ ಇಳಿಕೆಯಾಗಿದೆ ಆದರೆ, ಇದೀಗ ಬುಕ್ಕಿಂಗ್ ದರ ನಿಧಾನಕ್ಕೆ ಚೇತರಿಸಿಕೊಳ್ಳಲಾರಂಭಿಸಿದೆ. ಕಳೆದ ಅಕ್ಟೋಬರ್ ಕಂಪನಿಯ ಪಾಲಿಗೆ ಉತ್ತಮ ಫಲಿತಾಂಶ ನೀಡಿದೆ ಎಂದು ಅವರು ಹೇಳಿದ್ದಾರೆ. 


ಇದನ್ನು ಓದಿ- ಬುಲೆಟ್‌ಗಳನ್ನು ಮರೆಸಿಬಿಡಲಿದೆಯೇ Hondaದ ಕ್ರೂಸರ್ ಬೈಕ್!


ಹೀರೋ ಮೋಟೋಕಾರ್ಪ್-ಹಾರ್ಲೆ ಡೇವಿಡ್ ಸನ್ ಬೈಕ್ ಗಳು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ಇದಲ್ಲದೆ ಹೊಂಡಾ ಕೂಡ ಮಾರುಕಟ್ಟೆಗೆ ತನ್ನ H'Ness CB 350 ಪರಿಚಯಿಸಿದೆ. ಇದರಿಂದ ಹೋಂಡಾ ಭಾರತದಲ್ಲಿ ಮಿಡ್ ಸೈಜ್ 350-500 ಸಿಸಿ ಬೈಕ್ ಗಳ ಸೆಗ್ಮೆಂಟ್ ಗೆ ಎಂಟ್ರಿ ನೀಡಿದಂತಾಗಿದೆ. ಈ ಬೈಕ್ ಬೆಲೆಯನ್ನು ಕಂಪನಿ ಭಾರತದಲ್ಲಿ ರೂ.1.85 ಲಕ್ಷ ನಿಗದಿಪಡಿಸಿದೆ.


Meteor 350 ಬೈಕ್ ಅನ್ನು ಟ್ರಿಪರ್ ನೇವಿಗೇಶನ್ ಸೌಕರ್ಯದೊಂದಿಗೆ ಬಿಡುಗಡೆ ಮಾಡಲಾಗಿದೆ. ಇದೊಂದು ಸೆಮಿ-ಡಿಜಿಟಲ್, ಡುಯೆಲ್ ಪ್ಯಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್ ಆಗಿದ್ದು, ರಾಯಲ್ ಎನ್ಫಿಲ್ದ್ ಮೋಟರ್ ಬೈಕ್ ನಲ್ಲಿ ಇದು ಮೊದಲ ಬಾರಿಗೆ ಬ್ಲೂ ಟೂಥ್ ಕನೆಕ್ಟಿವಿಟಿಯನ್ನು ಪರಿಚಯಿಸಿದೆ.