ನವದೆಹಲಿ: ರಾಯಲ್ ಎನ್‌ಫೀಲ್ಡ್ OTO ಕ್ಯಾಪಿಟಲ್‌ನೊಂದಿಗೆ ಅಶ್ಯೂರ್ಡ್ ಬೈಬ್ಯಾಕ್ ಪ್ರೋಗ್ರಾಂ ಪ್ರಾರಂಭಿಸುವುದಾಗಿ ಘೋಷಿಸಿದೆ. ಗ್ರಾಹಕರಿಗೆ ಸುಗಮ ಮತ್ತು ತಡೆರಹಿತ ಮಾಲೀಕತ್ವ(Seamless ownership)ದ ಅನುಭವವನ್ನು ಗ್ಯಾರಂಟಿಗೊಳಿಸುವ ಉದ್ದೇಶದಿಂದ ಈ ಹೊಸ ಕಾರ್ಯಕ್ರಮ ಪರಿಚಯಿಸಲಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿಕೊಂಡಿದೆ. ಅಶ್ಯೂರ್ಡ್ ಬೈಬ್ಯಾಕ್ ಪ್ರೋಗ್ರಾಂ Hassle-free ಗ್ರಾಹಕ ಅನುಭವ ನೀಡುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ರಾಯಲ್ ಎನ್‌ಫೀಲ್ಡ್ ಬೈಕ್‍ಗಳಿಗೆ Accessibility ಹೆಚ್ಚಿಸುತ್ತದೆ ಮತ್ತು ನವೀಕರಣಗಳನ್ನು ಸುಲಭಗೊಳಿಸುತ್ತದೆ.


COMMERCIAL BREAK
SCROLL TO CONTINUE READING

ಈ ಪ್ರೋಗ್ರಾಂನಲ್ಲಿ ನೀವು ಏನು ಪಡೆಯುತ್ತೀರಿ?


ಬೈಬ್ಯಾಕ್ ಪ್ರೋಗ್ರಾಂ 1-3 ವರ್ಷಗಳ flexible tenure ನೀಡುತ್ತದೆ. ಶೇ.45ರಷ್ಟು ಕಡಿಮೆ EMI ಮತ್ತು ಶೇ.77ರಷ್ಟು ಗ್ಯಾರಂಟಿ ಬೈಬ್ಯಾಕ್ ಮೌಲ್ಯವು tenure ಅವಲಂಬಿಸಿ ಮತ್ತು tenure ಕೊನೆಯಲ್ಲಿ ಕ್ಯಾಶ್ ಬ್ಯಾಕ್ ಪ್ರೋತ್ಸಾಹವನ್ನು ನೀಡುತ್ತದೆ. ಅಂದರೆ ಬೈಕ್ ಬಳಸಿದ ನಂತರ ನೀವು ಅದನ್ನು ಕಂಪನಿಗೆ ಮಾರಾಟ ಮಾಡಬಹುದು. ಇಲ್ಲಿ ನೀವು ಬೈಕ್ ಮೌಲ್ಯದ ಶೇ.77ರವರೆಗೆ ಪಡೆಯಬಹುದು.


ಇದನ್ನೂ ಓದಿ: ನವರಾತ್ರಿಯಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರದ ಗಿಫ್ಟ್ ! ವೇತನದಲ್ಲಿ 27 ಸಾವಿರ ರೂ. ಹೆಚ್ಚಳ


ಗ್ರಾಹಕರು ಯಾವ ಆಯ್ಕೆ ಹೊಂದಿರುತ್ತಾರೆ?


ಗ್ಯಾರಂಟಿ ಮರುಖರೀದಿ ಅವಧಿಯ ಕೊನೆಯಲ್ಲಿ, ಗ್ರಾಹಕರು ಬಹು ಆಯ್ಕೆಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಹಳೆಯ ಬೈಕುಗಳನ್ನು ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‍ ಜೊತೆಗೆ Exchange ಮಾಡಿಕೊಳ್ಳಬಹುದು. ಇದಲ್ಲದೇ ಆ ಬೈಕ್‍ಅನ್ನು ಶಾಶ್ವತವಾಗಿ ತನ್ನೊಂದಿಗೆ ಇಟ್ಟುಕೊಳ್ಳಬಹುದು ಅಥವಾ ಕಂಪನಿಗೆ ಹಿಂತಿರುಗಿಸಬಹುದು. ಈ ಎಲ್ಲಾ ಆಯ್ಕೆಗಳು ಗ್ರಾಹಕರಿಗೆ ಸಿಗುತ್ತವೆ.


12 ನಗರಗಳಲ್ಲಿ ಲಭ್ಯ


ಗ್ರಾಹಕರಿಗೆ ದೊಡ್ಡ ಲಾಭವೆಂದರೆ ಕಡಿಮೆ ಮಾಸಿಕ EMI ಮತ್ತು ಅವರ ರಾಯಲ್ ಎನ್‌ಫೀಲ್ಡ್ ಬೈಕ್‍ನ ಗ್ಯಾರಂಟಿ ಮರುಖರೀದಿ ಮೌಲ್ಯ. ಆರಂಭದಲ್ಲಿ ಈ ಕಾರ್ಯಕ್ರಮವು ದೆಹಲಿ, ಗಾಜಿಯಾಬಾದ್, ನೋಯ್ಡಾ, ಲಕ್ನೋ, ಜೈಪುರ, ಭೋಪಾಲ್, ಇಂದೋರ್, ಅಹಮದಾಬಾದ್, ಪುಣೆ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ 12 ನಗರಗಳ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತದೆ. ಇದಲ್ಲದೆ ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ನಗರಗಳಿಗೆ ವಿಸ್ತರಿಸಲಿದೆ.


ಇದನ್ನೂ ಓದಿ: ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ ಆಸ್ತಿ ಪತ್ರಗಳಿಗೆ ಸಂಬಂಧಿಸಿದ ಹೊಸ ನಿಯಮ ! ಆದೇಶ ಜಾರಿಗೊಳಿಸಿದ ಆರ್‌ಬಿಐ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.