Royal Enfield Bullet 350: ಕೇವಲ 9 ಸಾವಿರ ರೂ. ಪಾವತಿಸಿ ಹೊಚ್ಚ ಹೊಸ ಬುಲೆಟ್ ಮನೆಗೆ ಕೊಂಡೊಯ್ಯಿರಿ
Royal Enfield Bullet 350 On Finance: ರಾಯಲ್ ಎನ್ಫೀಲ್ಡ್, Royal Enfield Bullet 350 ಖರೀದಿಗಾಗಿ ತನ್ನ ಗ್ರಾಹಕರಿಗೆ ಇಎಂಐ ಸೌಕರ್ಯವನ್ನು ಒದಗಿಸುತ್ತಿದೆ. ಇದಕ್ಕಾಗಿ ಕಂಪನಿ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ನಿಗದಿಪಡಿಸಿದೆ. ಹೌದು, ಕೇವಲ ರೂ.9000 ಡೌನ್ ಪೇಮೆಂಟ್ ಪಾವತಿಸುವ ಮೂಲಕ ನೀವು ನಿಮ್ಮ ನೆಚ್ಚಿನ ಬುಲೆಟ್ ಅನ್ನು ಮನೆಗೆ ಕೊಂಡೊಯ್ಯಬಹುದು.
Royal Enfield Bullet 350 EMI Details: ದ್ವಿಚಕ್ರ ವಾಹನ ತಯಾರಕ ರಾಯಲ್ ಎನ್‌ಫೀಲ್ಡ್ ತನ್ನ ಶಕ್ತಿಶಾಲಿ ಮೋಟಾರ್‌ಸೈಕಲ್‌ಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ದೇಶದಲ್ಲಿ ಗರಿಷ್ಠ 350 ಸಿಸಿ ಬೈಕ್‌ಗಳನ್ನು ಮಾರಾಟ ಮಾಡುತ್ತದೆ. ರೆಟ್ರೊ ವಿನ್ಯಾಸ ಮತ್ತು ಉತ್ತಮ ಲುಕ್ ಹಿನ್ನೆಲೆ ಕಂಪನಿಯ ಬೈಕ್‌ಗಳು ಲಕ್ಷಾಂತರ ಜನರ ಮೊದಲ ಆಯ್ಕೆಯಾಗಿದೆ ಮತ್ತು ಅವುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.
ಬೆಲೆಯ ವಿಷಯದಲ್ಲಿ, ಸಾಮಾನ್ಯ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಈ ಬೈಕ್‌ಗಳು ಸ್ವಲ್ಪ ದುಬಾರಿಯಾಗಿದೆ. ಇದರಿಂದ ಹಲವರಿಗೆ ಈ ದ್ವಿಚಕ್ರ ವಾಹನ ಖರೀದಿಸಲು ಸಾಧ್ಯವಾಗುವುದಿಲ್ಲ. ಅಂತಹ ರಾಯಲ್ ಎನ್‌ಫೀಲ್ಡ್ ಭರ್ಜರಿ ಆಫರ್ ಅನ್ನು ಪರಿಚಯಿಸಿದೆ, ಹೌದು, ಇದೀಗ ಕೇವಲ 9 ಸಾವಿರ ರೂಪಾಯಿ ಪಾವತಿಸಿ ಹೊಸ ಬುಲೆಟ್ ಅನ್ನು ನೀವು ನಿಮ್ಮ ಮನೆಗೆ ಕೊಂಡೊಯ್ಯಬಹುದು.
ಈ ಕೊಡುಗೆಯ ಲಾಭ ಹೇಗೆ ಪಡೆದುಕೊಳ್ಳಬೇಕು?
ಕಂಪನಿಯು ಈ ವಾಹನ ಖರೀದಿಸಲು ತನ್ನ ಗ್ರಾಹಕರಿಗೆ ಹಣಕಾಸು ಯೋಜನೆಯನ್ನು ಪರಿಚಯಿಸಿದೆ, ಈ ಯೋಜನೆಯ ಪ್ರಕಾರ ಕಂಪನಿಯ ವಿವಿಧ ಮಾದರಿಗಳಲ್ಲಿ ಡೌನ್ ಪೇಮೆಂಟ್ ಮತ್ತು EMI ಸೌಲಭ್ಯವನ್ನು ಪರಿಚಯಿಸಿದೆ. ಇದರ ಅಡಿ ರಾಯಲ್ ಎನ್ಫೀಲ್ಡ್ ಬುಲೆಟ್ 350 ಗಾಗಿ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ನಿಗದಿಪಡಿಸಲಾಗಿದೆ. ಕೇವಲ ರೂ.9000 ಮುಂಗಡ ಪಾವತಿ ಮಾಡುವ ಮೂಲಕ ಇದನ್ನು ನೀವು ಖರೀದಿಸಬಹುದು.
ಇದನ್ನೂ ಓದಿ-EPF Pension ಧಾರಕರಿಗೆ ಒಂದು ಸಂತಸದ ಸುದ್ದಿ, ತಪ್ಪದೆ ಓದಿ
ಅದು ಎಷ್ಟಾಗುತ್ತದೆ?
ಉದಾಹರಣೆಗಾಗಿ, ದೆಹಲಿಯಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ 350 ರ ಕಿಕ್ ಸ್ಟಾರ್ಟ್ ಆವೃತ್ತಿಯ ಆನ್ ರೋಡ್ ಬೆಲೆ ರೂ 1,71,017 ಆಗಿದೆ ಮತ್ತು ನೀವು ರೂ 9000 ಡೌನ್ ಪೇಮೆಂಟ್ ಮಾಡುವ ಮೂಲಕ ಈ ಮಾದರಿಯನ್ನು ಆಯ್ಕೆ ಮಾಡಿಕೊಂಡರೆ, ಆನ್‌ಲೈನ್ EMI ಕ್ಯಾಲ್ಕುಲೇಟರ್ ಪ್ರಕಾರ ನೀವು 9.7 ರಷ್ಟು ಬಡ್ಡಿದರದಲ್ಲಿ ಮುಂದಿನ 3 ವರ್ಷಗಳವರೆಗೆ ಪ್ರತಿ ತಿಂಗಳು ಸುಮಾರು 5 ಸಾವಿರ ರೂಪಾಯಿ EMI ಅನ್ನು ಪಾವತಿಸಬೇಕಾಗುತ್ತದೆ. ಇದರಿಂದ, ನಿಮ್ಮ ಜೇಬಿಗೆ ಸ್ವಲ್ಪ್ಲ ಹೊರೆಯಾದರೂ ಕೂಡ ನಿಮ್ಮ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸುವ ಆಸೆ ಈಡೇರಲಿದೆ.
ಇದನ್ನೂ ಓದಿ-Top Selling Bikes: ಇವೆ ನೋಡಿ ದೇಶದಲ್ಲಿ ಅತ್ಯಧಿಕ ಮಾರಾಟಗೊಳ್ಳುವ ಬೈಕ್ ಗಳು
ರಾಯಲ್ ಎನ್‌ಫೀಲ್ಡ್, ಇತ್ತೀಚೆಗೆ 350 ಸಿಸಿ ಸೆಗ್ಮೆಂಟ್ ನಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ, ರಾಯಲ್ ಎನ್‌ಫೀಲ್ಡ್ ಹಂಟರ್ 350, ಇದನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆ ಸುಮಾರು 1.5 ಲಕ್ಷ ರೂ. ಮತ್ತು ಟಾಪ್ ರೂಪಾಂತರದ ಬೆಲೆ ಸುಮಾರು 1.6 ರೂ.ನಿಗದಿಪಡಿಸಲಾಗಿದೆ. ಹಂಟರ್ 350 ಇದುವರೆಗೆ ಕಂಪನಿ ಪರಿಚಯಿಸಿದ ಎಲ್ಲಾ ಬೈಕ್ಗಳಲ್ಲಿ ಹಗುರವಾದ ಬೈಕ್ ಆಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.