RE Himalayan: ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಎಸ್ 6 ಆರಂಭದಲ್ಲಿ ಗ್ರಾವೆಲ್ ಗ್ರೇ, ಲೇಕ್ ಬ್ಲೂ, ರಾಕ್ ರೆಡ್, ಸ್ಲೀಟ್ ಗ್ರೇ, ಸ್ನೋ ವೈಟ್ ಮತ್ತು ಗ್ರಾನೈಟ್ ಬ್ಲ್ಯಾಕ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಆದರೆ ನಂತರ, ಫೆಬ್ರವರಿ 2021 ರಲ್ಲಿ, ಅವುಗಳಲ್ಲಿನ ಸ್ಲೀಟ್ ಗ್ರೇ ಮತ್ತು ಸ್ನೋ ವೈಟ್ ಬಣ್ಣದ ಆಯ್ಕೆಗಳನ್ನು ಕೈಬಿಡಲಾಯಿತು. ಈ ಬಣ್ಣದ ಆಯ್ಕೆಗಳಿಗೆ ಕಡಿಮೆ ಬೇಡಿಕೆ ಇದ್ದ ಕಾರಣ ಬಹುಶಃ ಅವುಗಳನ್ನು ಕೈಬಿದಲಾಗಿರಬಹುದು. ನಂತರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಗೆ ಅವುಗಳ  ಬದಲಿಯಾಗಿ ಮಿರಾಜ್ ಸಿಲ್ವರ್ ಮತ್ತು ಪೈನ್ ಗ್ರೀನ್ ಬಣ್ಣದ ಆಯ್ಕೆಗಳನ್ನು ನೀಡಲಾಯಿತು. ಆದರೆ ಇದೀಗ ರಾಯಲ್ ಎನ್ಫಿಲ್ದ್ ಹಿಮಾಲಯನ್ ಗೆ ಮತ್ತೆ ಮೂರು ಹೊಸ ಬಣ್ಣ ಆಯ್ಕೆಗಳನ್ನು ಸೇರಿಸಲಾಗಿದೆ- ಗ್ಲೇಸಿಯರ್ ಬ್ಲೂ, ಸ್ಲೀಟ್ ಬ್ಲ್ಯಾಕ್ ಮತ್ತು ಡ್ಯೂನ್ ಬ್ರೌನ್ ಈ ಆಯ್ಕೆಗಳಾಗಿವೆ. ಈ ಮೂರು ಹೊಸ ಬಣ್ಣದ ಆಯ್ಕೆಗಳೊಂದಿಗೆ, ಈಗಾಗಲೇ ಬಿಡುಗಡೆಯಾದ ಬಣ್ಣ ಆಯ್ಕೆಗಳು ಸಹ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Pension Scheme : ಸರ್ಕಾರದ ಯೋಜನೆಯಲ್ಲಿ ಬರೀ ₹7 ಹೂಡಿಕೆ ಮಾಡಿ, ₹60 ಸಾವಿರ ಪಿಂಚಣಿ ಪಡೆಯಿರಿ! 


ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಂಜಿನ್
ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ, ಹಿಮಾಲಯದಲ್ಲಿ ಯಾವುದೇ ರೀತಿಯ ನವೀಕರಣಗಳನ್ನು ಮಾಡಲಾಗಿಲ್ಲ. ಬೈಕ್ 411cc, ಏರ್-ಕೂಲ್ಡ್, SOHC ಎಂಜಿನ್‌ನೊಂದಿಗೆ ಬರುತ್ತದೆ, ಇದು 6,500 rpm ನಲ್ಲಿ 24.3 bhp ಗರಿಷ್ಠ ಶಕ್ತಿಯನ್ನು ಮತ್ತು 4,000-4,500 rpm ನಲ್ಲಿ 32 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸ್ಥಿರವಾದ ಮೆಶ್ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಬೈಕ್‌ನ ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಇದ್ದು, ಇದು ಡ್ಯುಯಲ್-ಚಾನೆಲ್ ಸ್ವಿಚ್ ಮಾಡಬಹುದಾದ ABS ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಇದರ ಕರ್ಬ್ ತೂಕ 199 ಕೆಜಿಯಾಗಿದೆ. ಬೈಕ್ 15 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಸಹ ಹೊಂದಿದೆ.


ಇದನ್ನೂ ಓದಿ-Car Buying Tips: ಹೊಸ ಕಾರು ಖರೀದಿಸುವಾಗ ಈ 3 ಟ್ರಿಕ್ ಅನುಸರಿಸಿ, ಲಕ್ಷಾಂತರ ರೂ.ಗಳ ಲಾಭ ನಿಮ್ಮದಾಗಿಸಿಕೊಳ್ಳಿ


ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ವೈಶಿಷ್ಟ್ಯಗಳು ಮತ್ತು ಬೆಲೆ
ಈ ಅಡ್ವೆಂಚರ್ ಟೂರರ್ ಬೈಕ್ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ (ಡ್ಯುಯೆಲ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ) ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ (ಸಿಂಗಲ್ ಪಿಸ್ಟನ್‌ನೊಂದಿಗೆ) ಪಡೆದುಕೊಂಡಿದೆ. ಇದು ರೆಟ್ರೊ ವಿನ್ಯಾಸದ ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆರಂಭಿಕ ಬೆಲೆ ರೂ 1,86,811 (ಎಕ್ಸ್ ಶೋ ರೂಂ, ದೆಹಲಿ) ನಿಗದಿಪಡಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.