Budget 2023: ಕೇಂದ್ರ ಬಜೆಟ್‌ಗೂ ಮುನ್ನವೇ ಸರ್ಕಾರ ಸಂತಸದ ಸುದ್ದಿಯೊಂದು ಪ್ರಕಟಿಸಿದೆ. ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು ಉತ್ತೇಜಿಸಲು ಸರ್ಕಾರವು ಬ್ಯಾಂಕ್‌ಗಳಿಗೆ ನೀಡುವ ಪ್ರೋತ್ಸಾಹದ ಮೇಲೆ ಸರಕು ಮತ್ತು ಸೇವಾ ತೆರಿಗೆ ಅಂದರೆ GST ವಿಧಿಸಲಾಗುವುದಿಲ್ಲ ಎನ್ನಲಾಗಿದೆ. ಹಣಕಾಸು ಸಚಿವಾಲಯ ಈ ಮಾಹಿತಿ ನೀಡಿದೆ. ಕಳೆದ ವಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ 2,600 ಕೋಟಿ ರೂಪಾಯಿಗಳ ಪ್ರೋತ್ಸಾಹಕ ಯೋಜನೆಯನ್ನು ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Budget 2023: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ! ಬಜೆಟ್ ಬಳಿಕ ವೇತನ ಎಷ್ಟು ಹೆಚ್ಚಾಗಲಿದೆ?


ರುಪೇ ಡೆಬಿಟ್ ಕಾರ್ಡ್
ರುಪೇ ಡೆಬಿಟ್ ಕಾರ್ಡ್ ಹಾಗೂ ಕಡಿಮೆ ಮೌಲ್ಯದ ಭೀಮ್-ಯುಪಿಐ ವ್ಯವಹಾರಗಳನ್ನು ಉತ್ತೇಜಿಸಲು ಯೋಜನೆಯ ಅಡಿ ಸರ್ಕಾರ ಬ್ಯಾಂಕುಗಳಿಗೆ ರುಪೇ ಡೆಬಿಟ್ ಕಾರ್ಡ್ ವ್ಯವಹಾರದ ಮೌಲ್ಯ ಹಾಗೂ 2000 ರೂ.ಗಳಿಗಿಂತ ಕಡಿಮೆ ಮೌಲ್ಯದ ಭೀಮ್-ಯುಪಿಐ ವ್ಯವಹಾರಗಳಿಗೆ ಪ್ರತಿಶತ ರೂಪದಲ್ಲಿ ಪ್ರೋತ್ಸಾಹ ಮೊತ್ತವನ್ನು ನೀಡುತ್ತದೆ. ಇದು ಕೇಂದ್ರ GST ಕಾಯಿದೆ, 2017 ರ ನಿಬಂಧನೆಗಳ ಅಡಿಯಲ್ಲಿ ವಹಿವಾಟಿನ ತೆರಿಗೆಯ ಮೌಲ್ಯದ ಭಾಗವಾಗಿರುವುದಿಲ್ಲ.


ಇದನ್ನೂ ಓದಿ-Good News: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ! ಕಾರಣ ಇಲ್ಲಿದೆ


ಜಿಎಸ್ಟಿ ದರ
"ಕೌನ್ಸಿಲ್ ಶಿಫಾರಸು ಮಾಡಿದಂತೆ, ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು ಉತ್ತೇಜಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ವತಿಯಿಂದ ಒದಗಿಸಲಾಗುವ ಪ್ರೋತ್ಸಾಹಕಗಳಿಗೆ GST ಅನ್ವಯಿಸುವುದಿಲ್ಲ" ಎಂದು ಸ್ಪಷ್ಟಪಡಿಸಲಾಗಿದೆ. "ಇಂತಹ ವ್ಯವಹಾರವು ಸಬ್ಸಿಡಿ ರೂಪದಲ್ಲಿರಲಿದೆ ಮತ್ತು ಅದು ತೆರಿಗೆಯನ್ನು ಆಕರ್ಷಿಸುವುದಿಲ್ಲ" ಎಂದು ಹೇಳಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.