ಹಣದುಬ್ಬರ ಎಫೆಕ್ಟ್: ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ
ಸೋಮವಾರದಂದು ರೂಪಾಯಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 77.42ರೂಗೆ ಕುಸಿದಿದೆ.
ಮುಂಬೈ: ದೇಶದ ಹಣದುಬ್ಬರ ಪರಿಣಾಮ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್ ಗೆ 77.40ರೂಗೆ ಕುಸಿದಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಬರೊಬ್ಬರಿ 52 ಪೈಸೆ ಇಳಿಕೆ ದಾಖಲಾಗಿದ್ದು, ಆ ಮೂಲಕ ರೂಪಾಯಿ ಮೌಲ್ಯ ಪ್ರತಿ ಡಾಲರ್ ಎದುರು 77.42ಕ್ಕೆ ಕುಸಿತಗೊಂಡಿದೆ.
ಇದನ್ನೂ ಓದಿ: Gold Coin ATM : ಈ ATM ನಿಂದ ನೋಟುಗಳಲ್ಲ ಬದಲಾಗಿ ಚಿನ್ನದ ನಾಣ್ಯ ಬರುತ್ತೆ, ಅದು ಹೇಗೆ? ಇಲ್ಲಿದೆ
ರೂಪಾಯಿ ಸೋಮವಾರದಂದು ಡಾಲರ್‌ಗೆ 0.3% ರಷ್ಟು ಕುಸಿದು 77.1825 ರೂ.ಗೆ ತಲುಪಿತು. ಮಾರ್ಚ್‌ನಲ್ಲಿ ಮುಟ್ಟಿದ ಹಿಂದಿನ ದಾಖಲೆಯ ಕನಿಷ್ಠ 76.9812 ಅನ್ನು ದಾಟಿತು. ವಿದೇಶಿ ಬಂಡವಾಳದ ಹೊರಹರಿವು, ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಈ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೀತಿಯನ್ನು ಸಾಮಾನ್ಯಗೊಳಿಸುವಲ್ಲಿ ತುರ್ತು ಅಗತ್ಯವನ್ನು ಆರ್‌ಬಿಐ ಗುರುತಿಸಿರುವುದು ಬೆಂಬಲದ ಮೂಲವಾಗಿದೆ ಎಂದು ಬಿಎನ್‌ಪಿ ಪರಿಬಾಸ್ ತಂತ್ರಜ್ಞರಾದ ಸಿದ್ಧಾರ್ಥ್ ಮಾಥುರ್ ಮತ್ತು ಚಿದು ನಾರಾಯಣನ್ ಟಿಪ್ಪಣಿಯಲ್ಲಿ ಬರೆದಿದ್ದಾರೆ. ಆದಾಗ್ಯೂ, ಇಕ್ವಿಟಿ ಹರಿವುಗಳು ಬಡ್ಡಿದರದ ಸಂವೇದನಾಶೀಲ ಹರಿವಿನ ಮೇಲೆ ಪ್ರಾಬಲ್ಯ ಸಾಧಿಸಬಹುದು. ದೇಶೀಯ ಹಣಕಾಸು ಪರಿಸ್ಥಿತಿಗಳಲ್ಲಿನ ತ್ವರಿತ ಬಿಗಿತದ ಪರಿಣಾಮವಾಗಿ ಇಕ್ವಿಟಿ ಮಾರುಕಟ್ಟೆಯ ಭಾವನೆಯಲ್ಲಿನ ಕ್ಷೀಣತೆಯಿಂದ INR ಗೆ ಹೆಚ್ಚಿನ ತೊಂದರೆಯ ಅಪಾಯವಿದೆ ಎಂದು ಹೇಳಿದ್ದಾರೆ.
ಶುಕ್ರವಾರ 55 ಪೈಸೆ ಇಳಿಕೆ ಕಂಡಿದ್ದ ರೂಪಾಯಿ ಒಂದು ಡಾಲರ್‌ಗೆ 76.90ರಂತೆ ವಿನಿಮಯವಾಗುತ್ತಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರರೇ ಗಮನಿಸಿ..! ಜೂನ್ ತಿಂಗಳಿಂದ ಪಡಿತರ ಪೂರೈಕೆಯಲ್ಲಿ ಬದಲಾವಣೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.