ನವದೆಹಲಿ:  Increment News - ಖಾಸಗಿ ಕೆಲಸ (Private Jobs) ಮಾಡುವವರಿಗೆ ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಕರೋನಾ ಕಾಲದಲ್ಲಿ ಕಾರ್ಪೊರೇಟ್ ಇಂಡಿಯಾ ತನ್ನ ಉದ್ಯೋಗಿಗಳ ವೇತನವನ್ನು 2021 ರಲ್ಲಿ ಸರಾಸರಿ ಶೇ. 8ರಷ್ಟು ಹೆಚ್ಚಿಸುವೆ. .ಇದೇ ವೇಳೆ 2022 ರಲ್ಲಿ, ಖಾಸಗಿ ಕಂಪನಿಗಳ ವೇತನದಲ್ಲಿ ಸರಾಸರಿ (Average Increment In 2022) ಶೇ.8.6 ರಷ್ಟು ಹೆಚ್ಚಿಸಲಾಗುವ  ನಿರೀಕ್ಷೆ ಇದೆ. ಇದನ್ನು ಡೆಲಾಯ್ಟ್ ನಡೆಸಿದ ಸಮೀಕ್ಷೆಯಲ್ಲಿ (Deloitte Survey) ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಡೆಲಾಯ್ಟ್ ವೇತನ ವೃದ್ಧಿ ಸಮೀಕ್ಷೆ 2021 
2021 ರ ಎರಡನೇ ಹಂತದಲ್ಲಿ, 2020 ಕ್ಕೆ ಹೋಲಿಸಿದರೆ 2021 ರಲ್ಲಿ ಸರಾಸರಿ ಶೇಕಡಾ 8 ರಷ್ಟು ವೇತನ ಹೆಚ್ಚಳವಾಗಿದೆ ಎಂದು ಡೆಲಾಯ್ಟ್ ಅವರ ಸಮೀಕ್ಷೆ ಹೇಳಿದೆ. ವಾಸ್ತವವಾಗಿ, 2020 ರಲ್ಲಿ, ಕೇವಲ ಶೇ. 60ರಷ್ಟು  ಕಂಪನಿಗಳು ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿವೆ.


ಈ ಸಮೀಕ್ಷೆಯ ಪ್ರಕಾರ, 2022 ರಲ್ಲಿ ಖಾಸಗಿ ಉದ್ಯೋಗಿಗಳ (Private Sector) ವೇತನವು ಶೇ. 8.6 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಇದು 2019 ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಮಟ್ಟದಲ್ಲಿದೆ. ಈ ಸಮೀಕ್ಷೆಯಲ್ಲಿ ಒಳಗೊಂಡಿರುವ ಸುಮಾರು ಶೇ. 25 ರಷ್ಟು ಕಂಪನಿಗಳು 2022 ಕ್ಕೆ ಉತ್ತಮ ವೇತನ ಹೆಚ್ಚಳವನ್ನು ಅಂದಾಜಿಸಿವೆ.


ಸಮೀಕ್ಷೆಯಲ್ಲಿ 450ಕ್ಕೂ ಹೆಚ್ಚು ಕಂಪನಿಗಳು ಶಾಮೀಲಾಗಿವೆ
2021 Workforce Increment Trends Survey'ಹೆಸರಿನ ಈ ಸಮೀಕ್ಷೆಯನ್ನು ಜುಲೈ 2021ರಲ್ಲಿ ಆರಂಭಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಮೊದಲು ಎಲ್ಲಕ್ಕಿಂತ ಅನುಭವಿ HR ಅನುಭವಗಳನ್ನು ಸಂಗ್ರಹಿಸಲಾಗಿದೆ. ಈ ಸಮೀಕ್ಷೆಯಲ್ಲಿ 450ಕ್ಕೂ ಅಧಿಕ ಕಂಪನಿಗಳು ಶಾಮೀಲಾಗಿದ್ದವು. 


ಸಮೀಕ್ಷೆಯ ಪ್ರಕಾರ, ಕಂಪನಿಗಳು ನೌಕರರ ಪರ್ಫಾರ್ಮೆನ್ಸ್ ಆಧಾರದ ಮೇಲೆ ವೇತನ ವೃದ್ಧಿಯನ್ನು ಮುಂದುವರೆಸಲಿವೆ ಹಾಗೂ ಎಲ್ಲಕ್ಕಿಂತ ಉತ್ತಮ ಪ್ರದರ್ಶನ ತೋರಿದ ನೌಕರರ ವೇತನವನ್ನು 1.8 ಪಟ್ಟು ಹೆಚ್ಚಿಸುವ ನಿರೀಕ್ಷೆ ಇದೆ.


Covid-19ನಿಂದ ನಿರ್ಮಾಣಗೊಂಡ ಅನಿಶ್ಚಿತತೆ ಮುಂದುವರೆಯಲಿದೆ
Deloitte Touche Tohmatsu India LLP ಕಂಪನಿಯ ಪಾಲುದಾರ ಆನಂದೋರೂಪ್ ಘೋಷ ಪ್ರಕಾರ, 'ಹೆಚ್ಚಿನ ಕಂಪನಿಗಳು 2021 ರ ಹೋಲಿಕೆಯಲ್ಲಿ 2022 ರಲ್ಲಿ ಉತ್ತಮ ವೇತನ ನೀಡಲಿವೆ ಎಂದು ಅಂದಾಜಿಸಲಾಗಿದೆ. ಕೊವಿಡ್ -19 ಕಾರಣ ನಿರ್ಮಾಣಗೊಂಡ ಅನಿಶ್ಚಿತತೆಯ ಕಾಲದಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದೇವೆ. ಇದರಿಂದ ಕಂಪನಿಗಳ ಕುರಿತು ಪೂರ್ವಾನುಮಾನ ಹಚ್ಚುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಕೆಲ ಕಂಪನಿಗಳು ತಾವು ಇತ್ತೀಚೆಗಷ್ಟೇ 2021 ರ ವೇತನ ವೃದ್ಧಿ ಸೈಕಲ್ ಅನ್ನು ಬಂದ್ ಮಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ 2022ರ ವೇತನ ವೃದ್ಧಿ ಅವರ ಪಾಲಿಗೆ ಇನ್ನೂ ತುಂಬಾ ದೂರವಿದೆ. 


ಇದನ್ನೂ ಓದಿ-ನವೆಂಬರ್ 4 ರವರೆಗೆ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪಡೆಯಿರಿ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್


ಯಾವ ಸೆಕ್ಟರ್ ನಲ್ಲಿ ಅತಿ ಹೆಚ್ಚು ವೇತನ ವೃದ್ಧಿಯಾಗಲಿದೆ
2022 ರಲ್ಲಿ ಇನ್ಫಾರ್ಮಶನ್ ಟೆಕ್ನಾಲಜಿ ಕ್ಷೇತ್ರದಲ್ಲಿ ಅತಿ ಹೆಚ್ಚು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಈ ಸರ್ವೇ ಹೇಳುತ್ತಿದೆ. ಇದರ ಬಳಿಕ ಲೈಫ್ ಸೈನ್ಸ್ ಕ್ಷೇತ್ರವಿದೆ. ಕೆಲವು ಡಿಜಿಟಲ್/ಇ-ಕಾಮರ್ಸ್ ಕಂಪನಿಗಳು ಅತಿ ಹೆಚ್ಚು ಏರಿಕೆಗಳನ್ನು ನೀಡಲು ಯೋಜಿಸುವುದರೊಂದಿಗೆ ಎರಡಂಕಿಯ ವೇತನ ಬೆಳವಣಿಗೆಯನ್ನು ನಿರೀಕ್ಷಿಸುವ ಏಕೈಕ ಕ್ಷೇತ್ರ ಐಟಿ ಕ್ಷೇತ್ರವಾಗಿದೆ.


ಇದನ್ನೂ ಓದಿ-ಅಕ್ಟೋಬರ್ 1 ರಿಂದ ಬದಲಾಗಲಿವೆ ಪಿಂಚಣಿ ನಿಯಮಗಳು..! ಪ್ರತಿಯೊಬ್ಬರಿಗೂ ಅನ್ವಯವಾಗುವ ನಿಯಮದ ಸಂಪೂರ್ಣ ವಿವರ ಇಲ್ಲಿದೆ


ಈ ಕ್ಷೇತ್ರದಲ್ಲಿ ಅತಿ ಕಡಿಮೆ ವೇತನ ವೃದ್ಧಿ
ಇದಕ್ಕೆ ವಿಪರೀತ ಎಂಬಂತೆ, ಚಿಲ್ಲರೆ ವ್ಯಾಪಾರ, ಹಾಸ್ಪಿಟಾಲಿಟಿ, ರೆಸ್ಟೋರೆಂಟ್, ಮೂಲಭೂತ ಸೌಕರ್ಯಾಭಿವೃದ್ಧಿ ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ವ್ಯಾಪಾರದ ವೇಗಕ್ಕೆ ಅನುಗುಣವಾಗಿ ಕಡಿಮೆ ವೇತನ ನೀಡುವ ಸಾಧ್ಯತೆ ಇದೆ.


ಇದನ್ನೂ ಓದಿ-Gold Silver Price Today: 6 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿಯೂ ಇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.