Savings Account Interest Rates: ಸ್ಥಿರ ಠೇವಣಿ ಮೇಲಿನ ಬಡ್ಡಿದರಗಳು (FD Interest Rates) ಕಡಿಮೆಯಾದಾಗಿನಿಂದ, ಜನರು ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ (SB Account) ಇಡಲು ಆರಂಭಿಸಿದ್ದಾರೆ. ಉಳಿತಾಯ ಖಾತೆಯು ಒಂದು ರೀತಿಯ ಬ್ಯಾಂಕ್ ಖಾತೆಯಾಗಿದೆ, ಇದು ನಿಮಗೆ ಹಣವನ್ನು ಠೇವಣಿ ಮಾಡಲು, ಸುರಕ್ಷಿತವಾಗಿರಿಸಲು ಮತ್ತು ಬಡ್ಡಿಯೊಂದಿಗೆ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ.


COMMERCIAL BREAK
SCROLL TO CONTINUE READING

ಉಳಿತಾಯ ಖಾತೆಯು ಲಿಕ್ವಿಡಿಟಿ, ಬಡ್ಡಿಯನ್ನು ಗಳಿಸುವುದು, ನಿಧಿಗಳ ಸುರಕ್ಷತೆ ಇತ್ಯಾದಿಗಳಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಉಳಿತಾಯ ಖಾತೆಗಳನ್ನು ನೀಡುತ್ತವೆ. ಹೊಸ ಗ್ರಾಹಕರನ್ನು ಆಕರ್ಷಿಸಲು HDFC ಬ್ಯಾಂಕ್ ಮತ್ತು ICICI ಬ್ಯಾಂಕ್‌ನಂತಹ ಪ್ರಮುಖ ಖಾಸಗಿ ಬ್ಯಾಂಕ್‌ಗಳಿಗಿಂತ ಸಣ್ಣ ಖಾಸಗಿ ವಲಯದ ಬ್ಯಾಂಕ್‌ಗಳು ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ.


ಟಾಪ್ ಐದು ಖಾಸಗಿ ಬ್ಯಾಂಕ್ ಗಳು ಉಳಿತಾಯ ಖಾತೆ ಮೇಲೆ ಎಷ್ಟು ಬಡ್ಡಿ ಪಾವತಿಸುತ್ತಿವೆ ತಿಳಿಯೋಣ ಬನ್ನಿ (Interest Rates On Savings Account)
>> DCB ಬ್ಯಾಂಕ್ (DCB Bank) ಉಳಿತಾಯ ಖಾತೆಗಳ ಮೇಲೆ ಶೇ.6.5 ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಖಾಸಗಿ ಬ್ಯಾಂಕುಗಳ ಪಟ್ಟಿಯಲ್ಲಿ ಈ ಬ್ಯಾಂಕ್ ಅತಿ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಇದಕ್ಕಾಗಿ ಕನಿಷ್ಠ ಬ್ಯಾಲೆನ್ಸ್ 2,500 ರಿಂದ 5,000 ರೂ.ಆಗಿದೆ.


>> ಬಂಧನ್ ಬ್ಯಾಂಕ್  (Bandhan Bank) ಉಳಿತಾಯ ಖಾತೆಗಳ ಮೇಲೆ ಶೇ. 6 ರವರೆಗಿನ ಬಡ್ಡಿದರವನ್ನು ನೀಡುತ್ತದೆ. ಇದರಲ್ಲಿ ಮಾಸಿಕ ಸರಾಸರಿ ಬಾಕಿ 5,000 ರೂ.


>> RBL ಬ್ಯಾಂಕ್ (RBL Bank) ಉಳಿತಾಯ ಖಾತೆಗಳ ಮೇಲೆ 6 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ಇದಕ್ಕಾಗಿ ಸರಾಸರಿ ಮಾಸಿಕ ಬಾಕಿ 2,500 ರಿಂದ 5,000 ರೂ.


>> ಯೆಸ್ ಬ್ಯಾಂಕ್ (Yes Bank)  ಉಳಿತಾಯ ಖಾತೆಗಳ ಮೇಲೆ ಶೇ. 5.25 ರವರೆಗಿನ ಬಡ್ಡಿದರವನ್ನು ನೀಡುತ್ತಿದೆ. ಸರಾಸರಿ ಮಾಸಿಕ ಬ್ಯಾಲೆನ್ಸ್ 10,000 ರಿಂದ 25,000 ರೂ.ಇರಬೇಕು. 


ಇದನ್ನೂ ಓದಿ-Aadhaar Update: ಈಗ ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ ಆಧಾರ್ ಡೌನ್‌ಲೋಡ್ ಮಾಡಬಹುದು


>> IDFC ಫಸ್ಟ್ ಬ್ಯಾಂಕ್ (IDFC First Bank) ಮತ್ತು IndusInd ಬ್ಯಾಂಕ್ (IndusInd Bank) ಉಳಿತಾಯ ಖಾತೆಯ ಮೇಲೆ ಶೇ.5ರಷ್ಟು ಬಡ್ಡಿದರವನ್ನು ನೀಡುತ್ತವೆ. IDFC ಫಸ್ಟ್ ಬ್ಯಾಂಕ್‌ನಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ 10,000 ರೂ. ಆಗಿದ್ದರೆ, IndusInd ಬ್ಯಾಂಕ್‌ನಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ 1,500 ರಿಂದ 10,000 ರೂ.ಆಗಿದೆ. 


ಇದನ್ನೂ ಓದಿ-Offline Digital Payments: ಈಗ ಇಂಟರ್ನೆಟ್ ಇಲ್ಲದೆ ಸಾಧ್ಯ ಹಣ ವರ್ಗಾವಣೆ! ಪಾವತಿ ಮಿತಿಯನ್ನು ನಿಗದಿಪಡಿಸಿದ RBI


ಸಣ್ಣ ಖಾಸಗಿ ವಲಯದ ಬ್ಯಾಂಕ್‌ಗಳು ಪ್ರಮುಖ ಖಾಸಗಿ ಬ್ಯಾಂಕ್‌ಗಳಿಗಿಂತ ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ನೀವು ದೀರ್ಘಾವಧಿಯ ಟ್ರ್ಯಾಕ್ ರೆಕಾರ್ಡ್, ಉತ್ತಮ ಸೇವಾ ಮಾನದಂಡಗಳು, ವಿಶಾಲ ಶಾಖೆಯ ನೆಟ್‌ವರ್ಕ್ ಮತ್ತು ಎಟಿಎಂ ಸೇವೆಗಳನ್ನು ಹೊಂದಿರುವ ಬ್ಯಾಂಕ್ ಅನ್ನು ಇದಕ್ಕಾಗಿ ಆಯ್ಕೆ ಮಾಡಬೇಕು.


ಇದನ್ನೂ ಓದಿ-SBI Alert: ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ವಿಶೇಷ ಸೌಲಭ್ಯ ಆರಂಭ; ಲಕ್ಷಾಂತರ ಗ್ರಾಹಕರಿಗೆ ಪ್ರಯೋಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.