ನವದೆಹಲಿ: SBI Bank Alert To 44 Crore Customers - ಕೊರೊನಾ ಕಾಲದಲ್ಲಿ (Corona Pandemic) ಹೆಚ್ಚಿನ ಜನರು ತಮ್ಮ ಆದಾಯ ಹೆಚ್ಚಿಸುವುದರ ಜೊತೆಗೆ ಖರ್ಚು ಕಡಿಮೆ ಮಾಡುವಲ್ಲಿ ತಮ್ಮ ಗಮನ ಕೆಂದ್ರೀಕರಿಸಿದ್ದಾರೆ. ಹೀಗಿರುವಾಗ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಅಪ್ಡೇಟ್ ನಿಮಗೆ ನೀಡುವುದು ಅವಶ್ಯಕವಾಗುತ್ತದೆ.  ಇದೆ ಸರಣಿಯಲ್ಲಿ ಕೆಲ ಬ್ಯಾಂಕ್ ಗಳು ಹಿರಿಯ ನಾಗರಿಕರಿಗಾಗಿ ಕೆಲ ವಿಶೇಷ ಸವಲತ್ತುಗಳು ನೀಡುತ್ತಿವೆ. ಇನ್ನೊಂದೆಡೆ ಒಂದು ವೇಳೆ ನೀವು ನಿಮ್ಮ ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್  ಕಾರ್ಡ್ (Aadhaar Card) ಜೊತೆಗೆ ಲಿಂಕ್ (PAN-Aadhaar Linking) ಇನ್ನೂ ಮಾಡಿಲ್ಲ ಎಂದಾದರೆ, ಅದನ್ನು ತಕ್ಷಣ ಮಾಡಿ. ಏಕೆಂದರೆ, ಒಂದು ವೇಳೆ ನೀವು ಹಾಗೆ ಮಾಡದೆ ಹೋದಲ್ಲಿ ನಿಮಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ರೂ.1000 ದಂಡ ಬೀಳುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಖಾತೆದಾರಗಿಗೆ ಕೊನೆಯ ಎಚ್ಚರಿಕೆ
ವಾಸ್ತವದಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವ ಅಂತಿಮ ಗಡುವನ್ನು  ಜೂನ್ 30, 2021 ನಿಗದಿಪಡಿಸಿದೆ. ಒಂದು ವೇಳೆ ನೀವು ಜೂನ್ 30ರೊಳಗೆ ಈ ಕೆಲಸ ಮಾಡದೆ ಹೋದಲ್ಲಿ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ. ಇದಲ್ಲದೆ ಆದಾಯ ತೆರಿಗೆ ಕಾನೂನಿನ ಅಡಿ ನಿಮಗೆ ರೂ.1000 ದಂಡ ಬೀಳಲಿದೆ.


SBI ಜಾರಿಗೊಳಿಸಿದೆ SOS ಸಂದೇಶ
ಭಾರತೀಯ ಸ್ಟೇಟ್ ಬ್ಯಾಂಕ್
(SBI SOS) ತನ್ನ ಗ್ರಾಹಕರಿಗೆ ಒಂದು ಹೊಸ ಅಧಿಸೂಚನೆ ಜಾರಿಗೊಳಿಸಿದೆ. ಈ ತಿಂಗಳಾಂತ್ಯದವರೆಗೆ ಗ್ರಾಹಕರು ತಮ್ಮ-ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಜೂನ್ 30, 2021 ರೊಳಗೆ ಲಿಂಕ್ ಮಾಡಿಸಲು ಈ ಅಧಿಸೂಚನೆ ಸೂಚಿಸಲಾಗಿದೆ. ಇದಲ್ಲದೆ ನಿಗದಿತ ನಿಯಮಗಳ ಪಾಲನೆ ಮಾಡದೆ ಹೋದಲ್ಲಿ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದೂ ಕೂಡ SBI ಎಚ್ಚರಿಸಿದೆ.


ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಅದನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ TheOfficialSBI ನಲ್ಲಿ ಈ ಮಾಹಿತಿಯನ್ನು ನೀಡಿದೆ. ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಗಳನ್ನು ಆನಂದಿಸಲು ತನ್ನ ಗ್ರಾಹಕರಿಗೆ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಬ್ಯಾಂಕ್ ಕೋರಿದೆ.


Google, Facebook ಕಂಪನಿಗಳ ಮೇಲೆ ಶೇ.15 ರಷ್ಟು ತೆರಿಗೆ, G-7 ದೇಶಗಳ ಮಧ್ಯೆ ಐತಿಹಾಸಿಕ ಒಪ್ಪಂದ


ಈ ವಿಶೇಷ ಕೊಡುಗೆಯ ಅಡಿ ಆಯ್ದ ಮ್ಯಾಚುರಿಟಿ ಪಿರಿಯಡ್ (Selected Maturity Period FD) ಹೊಂದಿರುವ FD ಗಳ ಮೇಲೆ ಹಿರಿಯ ನಾಗರಿಕರಿಗೆ (Senior Citizen) ಅನ್ವಯಿಸುವ ಬಡ್ಡಿದರಗಳ ಮೇಲೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಾವತಿಸುತ್ತಿವೆ. ಈ ಕೊಡುಗೆಯ ಗಡುವನ್ನು ಮಾರ್ಚ್ 31 ರಿಂದ ಜೂನ್ 30, 2021 ರವರೆಗೆ ವಿಸ್ತರಿಸಲಾಗಿದೆ. ಅಂದರೆ ಈ ಕೊಡುಗೆಯ ಲಾಭ ಪಡೆಯಲು ಇದೀಗ ಹಿರಿಯ ನಾಗರಿಕರ ಬಳಿ ಕೇವಲ ಮೂರು ವಾರಗಳ ಕಾಲಾವಕಾಶ ಉಳಿದಿದೆ.


ಇದನ್ನೂ ಓದಿ-`ಹೈಕಮಾಂಡ್ ಸೂಚಿಸಿದ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ..!'


ಯಾವ ಬ್ಯಾಂಕ್ ನಲ್ಲಿ ಎಷ್ಟು ಲಾಭ
ಪ್ರಸ್ತುತ SBIನಲ್ಲಿ ಸಾಮಾನ್ಯ ನಾಗರಿಕರಿಗೆ 5 ವರ್ಷಗಳ ಅವಧಿಯವರೆಗಿನ ಡಿಪಾಸಿಟ್ ಮೇಲೆ ಶ್. 5.4ರಷ್ಟು ಬಡ್ಡಿ ಸಿಗುತ್ತಿದೆ. ಆದರೆ ಒಂದು ವೇಳೆ ಯಾವುದೇ ಹಿರಿಯ ನಾಗರಿಕರು ಈ ವಿಶೇಷ FD ಯೋಜನೆಯಡಿ ಹೂಡಿಕೆ ಮಾಡಿದರೆ ಅವರಿಗೆ ಶೇ.6.20ರಷ್ಟು ಬಡ್ಡಿ ಸಿಗಲಿದೆ. ಇನ್ನೊಂದೆಡೆ HDFC ಬ್ಯಾಂಕ್ ಕೂಡ ಸಿನಿಯರ್ ಕೆಯರ್ (HDFC Senior Citizen Care)  ಪ್ರಸ್ತುತ ಪಡಿಸಿದೆ. ಬ್ಯಾಂಕ್ ಇದರಲ್ಲಿ ಶೇ.0.75ರಷ್ಟು ಹೆಚ್ಚುವರಿ ಬಡ್ಡಿ ಪಾವತಿಸುತ್ತಿದೆ. ಒಂದು ವೇಳೆ ಹಿರಿಯ ನಾಗರಿಕರು ಈ ವಿಶೇಷ ಯೋಜನೆಯ ಅಡಿ FD ಹೂಡಿಕೆ ಮಾಡಿದರೆ, ಅವರಿಗೆ ಶೇ.6.25 ರಷ್ಟು ಬಡ್ಡಿ ಅನ್ವಯಿಸಲಿದೆ.


ICICI ಬ್ಯಾಂಕ್ ಕೂಡ ICICI Bank Golden Years ಸ್ಕೀಮ್ ಅಡಿ ಹಿರಿಯ ನಾಗರಿಕರ ವಿಶೇಷ FD ಮೇಲೆ ಶೇ.0.80 ರಷ್ಟು ಹೆಚ್ಚುವರಿ ಬಡ್ಡಿ ನೀಡುತ್ತಿವೆ. ಅಂದರೆ, ಹಿರಿಯ ನಾಗರಿಕರಿಗೆ ಈ ವಿಶೇಷ ಯೋಜನೆಯ ಅಡಿ ಶೇ.6.30 ರಷ್ಟು ಬಡ್ಡಿ ಸಿಗುತ್ತಿದೆ. 


ಇದನ್ನೂ ಓದಿ-ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಫೈನಲ್ ನೋಟಿಸ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ