ನವದೆಹಲಿ: SBI Bank Alert- ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಗ್ರಾಹಕರಾಗಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದೆ. ಎಸ್‌ಬಿಐನ ಕೆಲವು ಸೇವೆಗಳು (SBI Services Affected) ಜುಲೈ 10 ಮತ್ತು 11 ರಂದು ಸ್ಥಗಿತಗೊಳ್ಳಲಿದೆ ಎಂದು ಎಸ್‌ಬಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಹಾಗಾಗಿ ಬ್ಯಾಂಕಿಂಗ್ ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳನ್ನು ಶೀಘ್ರವೇ ಮುಗಿಸಿ.


COMMERCIAL BREAK
SCROLL TO CONTINUE READING

ಮಾಹಿತಿ ನೀಡಿರುವ ಬ್ಯಾಂಕ್:
ವಾಸ್ತವವಾಗಿ, ನಿರ್ವಹಣೆ ಚಟುವಟಿಕೆಯಿಂದಾಗಿ  (Maintenance Activity)  ಜುಲೈ 10 ರಂದು ರಾತ್ರಿ 10.45 ರಿಂದ ಜುಲೈ 11 ರಂದು ಬೆಳಿಗ್ಗೆ 12.15 ರವರೆಗೆ ಬ್ಯಾಂಕಿನ ಅನೇಕ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಸ್‌ಬಿಐ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ. ಇದು ಇಂಟರ್ನೆಟ್ ಬ್ಯಾಂಕಿಂಗ್ (Internet Banking), ಯೋನೊ (YONO), ಯುಪಿಐ (UPI) ಮತ್ತು ಯೋನೊ ಲೈಟ್ (YONO Lite) ಸೇವೆಗಳನ್ನು ಒಳಗೊಂಡಿದೆ.


Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!


ಬ್ಯಾಂಕ್ ಎರಡು ಟ್ವೀಟ್ ಮಾಡಿದೆ:
ಎಸ್‌ಬಿಐ (SBI) ತನ್ನ ಎರಡನೇ ಟ್ವೀಟ್‌ನಲ್ಲಿ ಗ್ರಾಹಕರಿಗೆ ತಮ್ಮ ಪಾಸ್‌ವರ್ಡ್‌ಗಳನ್ನು ನಿರಂತರವಾಗಿ ಬದಲಾಯಿಸುವಂತೆ ಮನವಿ ಮಾಡಿದೆ. ಬ್ಯಾಂಕ್ ಪ್ರಕಾರ, ಆನ್‌ಲೈನ್‌ನಲ್ಲಿ ಪಾಸ್‌ವರ್ಡ್ ಬದಲಾಯಿಸುವುದು ವೈರಸ್ ವಿರುದ್ಧದ ಲಸಿಕೆಯಂತಿದೆ. ಅಂತಹ ಪರಿಸ್ಥಿತಿಯಲ್ಲಿ, ಸೈಬರ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮ್ಮ ಪಾಸ್‌ವರ್ಡ್ ಅನ್ನು ನಿರಂತರವಾಗಿ ಬದಲಾಯಿಸುತ್ತಿರಿ ಎಂದು ಬ್ಯಾಂಕ್ ಸಲಹೆ ನೀಡಿದೆ.


ಇದನ್ನೂ ಓದಿ- Paytm Postpaid: ಗ್ರಾಹಕರಿಗೆ ನಿಮಿಷಗಳಲ್ಲಿ ಸಿಗಲಿದೆ 60,000 ರೂಪಾಯಿಗಳ ಸಾಲ..!


ಎಸ್‌ಬಿಐ ಗ್ರಾಹಕರ ಮೇಲೆ ಚೀನೀ ಹ್ಯಾಕರ್ಸ್ ಕಣ್ಣು !
ಎಸ್‌ಬಿಐ ಗ್ರಾಹಕರ ಸೈಬರ್ ಭದ್ರತಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಚೀನಾದ ಹ್ಯಾಕರ್‌ಗಳು ಎಸ್‌ಬಿಐ ಗ್ರಾಹಕರ ಖಾತೆಗಳಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ. ಫಿಶಿಂಗ್ ಹಗರಣಗಳನ್ನು ಹೊಂದಿರುವ ಚೀನೀ ಮೂಲದ ಹ್ಯಾಕರ್‌ಗಳು ವಿಶೇಷ ವೆಬ್‌ಸೈಟ್ ಲಿಂಕ್‌ಗಳನ್ನು ಬಳಸಿಕೊಂಡು ತಮ್ಮ ಕೆವೈಸಿಯನ್ನು ನವೀಕರಿಸಲು ಬ್ಯಾಂಕ್ ಬಳಕೆದಾರರನ್ನು ಕೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ 50 ಲಕ್ಷ ರೂ.ಗಳ ಉಡುಗೊರೆಯನ್ನು ನೀಡುವುದಾಗಿ ಆಮಿಷ ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.