ನವದೆಹಲಿ:  SBI Update - ಅಂತರ್ಜಾಲದಲ್ಲಿ ಎಸ್‌ಬಿಐ ಹೆಸರಿನಲ್ಲಿ ಹರಿದಾಡುತ್ತಿರುವ ನಕಲಿ ಕಸ್ಟಮರ್ ಕೇರ್ ನಂಬರ್‌ಗಳ ಕುರಿತು ಎಚ್ಚರಿಕೆ ವಹಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 40 ಕೋಟಿ ಗ್ರಾಹಕರಿಗೆ ಸೂಚಿಸಿದೆ. ಸ್ಟೇಟ್ ಬ್ಯಾಂಕ್ (SBI Alert) ಪ್ರಕಾರ, ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಸ್ಟೇಟ್ ಬ್ಯಾಂಕ್ ಕಸ್ಟಮರ್ ಕೇರ್ ಹೆಸರಿನ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ವಂಚನೆಗೆ ಬಲಿಯಾಗಬಹುದು ಎಂದು ಎಚ್ಚರಿಸಿದೆ.


COMMERCIAL BREAK
SCROLL TO CONTINUE READING

ಬ್ಯಾಂಕಿನ ವೆಬ್‌ಸೈಟ್‌ನಲ್ಲಿನ ಟೋಲ್ ಫ್ರೀ ಸಂಖ್ಯೆಯನ್ನು ಬಳಸಿ (SBI Latest News)
ಯಾವುದೇ ಸಾಲದ ಸಂಬಂಧಿತ ಮಾಹಿತಿಗಾಗಿ, ಬ್ಯಾಂಕಿನ ವೆಬ್‌ಸೈಟ್‌ನಲ್ಲಿರುವ ಟೋಲ್ ಫ್ರೀ ಸಂಖ್ಯೆಯನ್ನು ಬಳಸಿ ಮತ್ತು ಯಾವುದೇ ಸಂದರ್ಭದಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ಯಾರಿಗೂ ನೀಡಬೇಡಿ ಎಂದು ಬ್ಯಾಂಕ್ (SBI) ಸುತ್ತೋಲೆ ಹೊರಡಿಸಿದೆ. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳುವುದು ವಂಚನೆಗೆ ಕಾರಣವಾಗಬಹುದು ಎಂದು ಬ್ಯಾಂಕ್ ಎಚ್ಚರಿಸಿದೆ.


OTP ನಮೂದಿಸಿದ ಮೇಲೆಯೇ  ATM ನಿಂದ ಹಣ ಬರಲಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ ನಕಲಿ ಇಮೇಲ್ ಐಡಿಗಳನ್ನು ತಪ್ಪಿಸುವಂತೆ ಸೂಚನೆ ನೀಡಿದೆ. ಎಟಿಎಂನಿಂದ ಹಣ ಡ್ರಾ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿರುವುದಾಗಿ ಬ್ಯಾಂಕ್ ತಿಳಿಸಿದೆ. ಈಗ ಎಸ್‌ಬಿಐ ಎಟಿಎಂನಿಂದ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡುವಾಗ ಬ್ಯಾಂಕ್‌ಗೆ ಸಂಬಂಧಿಸಿದ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಎಟಿಎಂನಲ್ಲಿ ಈ ಒಟಿಪಿ ನಮೂದಿಸಿದ ನಂತರವೇ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.


SBI ವತಿಯಿಂದ ಜಾರಿಗೊಳಿಸಲಾಗಿರುವ ಎಚ್ಚರಿಕೆ (SBI Alert)
- Google ನಲ್ಲಿ ನಕಲಿ ಗ್ರಾಹಕ ಸೇವೆ ಸಂಖ್ಯೆಗಳ ಬಗ್ಗೆ ಎಚ್ಚರದಿಂದಿರಿ
- Google ನಲ್ಲಿ SBI ಗ್ರಾಹಕ ಸೇವೆ ಸಂಖ್ಯೆ ಸರಿಯಾಗಿಲ್ಲ
- ನಕಲಿ ಗ್ರಾಹಕ ಸೇವೆ ಸಂಖ್ಯೆ ವಂಚನೆಗೆ  ದಾರಿ ಮಾಡಿಕೊಡುತ್ತದೆ.
- ಗ್ರಾಹಕರು ಬ್ಯಾಂಕ್ ಹೆಸರಿನಲ್ಲಿ ನಕಲಿ ಇಮೇಲ್ ಐಡಿಯಿಂದ ಪಾರಾಗಬೇಕು.
- ಗ್ರಾಹಕ ಕೇರ್ ಅವರೊಂದಿಗೆ ಖಾತೆ ವಿವರಗಳು, ಕಾರ್ಡ್ ಸಂಖ್ಯೆಗಳನ್ನು ಹಂಚಿಕೊಳ್ಳಬೇಡಿ.
- ನಕಲಿ ಗ್ರಾಹಕ  ಕಸ್ಟಮರ್ ಕೆಯರ್ ಸಂಖ್ಯೆಯಿಂದ ಸೈಬರ್ ಭದ್ರತೆ ಅಪಾಯ
- ಸೈಬರ್ ವಂಚನೆಯ ಬಗ್ಗೆ ತಕ್ಷಣ ಸಹಾಯವಾಣಿ ಸಂಖ್ಯೆ 155260 ಗೆ ದೂರು ನೀಡಿ
- ಎಟಿಎಂನಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಒಟಿಪಿ ಸಂಖ್ಯೆ ಅಗತ್ಯವಿದೆ


ಇದನ್ನೂ ಓದಿ-SBI Alert: 40 ಕೋಟಿ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ! ನಿಮ್ಮ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳಬಹುದು, ಕಾರಣ ತಿಳಿಯಿರಿ


ಸೈಬರ್ ಅಪರಾಧಿಗಳಿಗೆ (Cyber Crime) ಇಂಟರ್ನೆಟ್ ವಂಚನೆಯ ವೇದಿಕೆಯಾಗಿದೆ
SBI, PNB, Axis, Canara ಸೇರಿದಂತೆ ವಿವಿಧ ಬ್ಯಾಂಕ್‌ಗಳ ಹೆಸರಿನಲ್ಲಿ ಸೈಬರ್ ಅಪರಾಧಿಗಳು ಗೂಗಲ್‌ನಲ್ಲಿ ನಕಲಿ ಗ್ರಾಹಕ ಸೇವಾ ಸಂಖ್ಯೆಗಳನ್ನು ಹರಿಬಿಟ್ಟಿದ್ದಾರೆ. ಜನರು ಗೂಗಲ್‌ನಲ್ಲಿ ಬ್ಯಾಂಕಿನ ಕಸ್ಟಮರ್ ಕೇರ್ ಸಂಖ್ಯೆಯ ಹುಡುಕಾಟ ನಡೆಸಿದಾಗ. ಅವರು ಗೊತ್ತಿಲ್ಲದೆಯೇ ಈ ಸೈಬರ್ ವಂಚಕರ ಬಲೆಗೆ ಬೀಳುತ್ತಾರೆ. ಇದಾದ ನಂತರ, ಸೈಬರ್ ದರೋಡೆಕೋರರು (Cyber Criminals) ಬ್ಯಾಂಕ್ ಅಧಿಕಾರಿಯ ಸೋಗು ಧರಿಸಿ ಗ್ರಾಹಕರಿಂದ ಗ್ರಾಹಕರ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಡೆಬಿಟ್-ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ಇದರ ನಂತರ, ಅವರು ಕರೆ ಮಾಡಿದ ವ್ಯಕ್ತಿಯ ಖಾತೆಯನ್ನು ಹ್ಯಾಕ್ ಮಾಡುತ್ತಾರೆ ಮತ್ತು ಎಲ್ಲಾ ಠೇವಣಿಗಳನ್ನು ಹಿಂಪಡೆಯುತ್ತಾರೆ.


ಇದನ್ನೂ ಓದಿ-SBI Latest New: SBI ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್, ಡಿಸೆಂಬರ್ 1 ರಿಂದ ವಹಿವಾಟಿಗೆ ಈ ಹೊಸ ಶುಲ್ಕಗಳು ಅನ್ವಯ


ತಪ್ಪಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಿ
ಈ ಸೈಬರ್ ಅಪರಾಧಿಗಳನ್ನು ತಪ್ಪಿಸಲು, ನೇರವಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ಬ್ಯಾಂಕಿನ ಕಸ್ಟಮರ್ ಕೇರ್ ಸಂಖ್ಯೆ ಪಡೆದುಕೊಳ್ಳಿ. ಕೇವಲ ಆ ಸಂಖ್ಯೆಗಳಿಗೆ ಮಾತ್ರ ಕರೆ ಮಾಡಿ ಮತ್ತು ನಿಮಗೆ ಬೇಕಾದ ವಿವರ ಪಡೆದುಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಅವರು ಕೇಳಿದರೆ ಅದನ್ನು ನೀಡಬೇಡಿ. ಇನ್ನೊಂದು ಬದಿಯಲ್ಲಿ ಕೆಲವು ಪುಂಡರು ಇರಬಹುದು. ಇದರ ನಂತರ, ನೇರವಾಗಿ ಬ್ಯಾಂಕ್‌ಗೆ ಹೋಗಿ ಮತ್ತು ನಿಮ್ಮ ದೂರನ್ನು ಪರಿಹರಿಸಿಕೊಳ್ಳಿ ಮತ್ತು ಕೇಂದ್ರ ಸರ್ಕಾರದ ವಿಶೇಷ ಆಂಟಿ-ಸೈಬರ್ ಕ್ರೈಮ್ ದೂರು ಸಂಖ್ಯೆ 155260 ಗೆ ಕರೆ ಮಾಡಲು ಮರೆಯಬೇಡಿ.


ಇದನ್ನೂ ಓದಿ-SBI Festive Card Offer : SBI ಗ್ರಾಹಕರಿಗೆ ಭರ್ಜರಿ ಆಫರ್! ನಾಳೆಯಿಂದ ಶಾಪಿಂಗ್‌ನಲ್ಲಿ ಸಿಗಲಿದೆ ಬಂಪರ್ ಕ್ಯಾಶ್‌ಬ್ಯಾಕ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.