ನವದೆಹಲಿ: ಕರೋನಾ (Coronavirus) ಎರಡನೇ ಅಲೆಯ ಭಯ ಇಡೀ ದೇಶವನ್ನು ಆವರಿಸಿದೆ. ಕರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಸುರಕ್ಷತೆಗಾಗಿ ನಾವು ಮನೆಯಲ್ಲಿಯೇ ಇರುವುದು ಅವಶ್ಯ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರಬೇಕಾಗಿದೆ. ಮನೆಯಿಂದ ಹೊರ ಬರುವುದು ಅಂದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. 


COMMERCIAL BREAK
SCROLL TO CONTINUE READING

ಕರೋನಾ ಯುಗದಲ್ಲಿ ಆನ್‌ಲೈನ್ ವಂಚನೆ ಹೆಚ್ಚಾಗಿದೆ :
ಕರೋನಾ (Coronavirus) ವಕ್ಕರಿಸಿದ ಮೇಲೆ ಬಹುತೇಕ ಕೆಲಸಗಳು ಸ್ಮಾರ್ಟ್ ಫೋನಿನಿಂದಲೇ  ನಡೆಯುತ್ತದೆ. ಡಿಜಿಟಲ್ (Digital) ವಹಿವಾಟು ಅಪರಿಮಿತ ವೇಗದಲ್ಲಿ ಬೆಳೆಯುತ್ತಿದೆ. ಇದು ಜನರ ಬದುಕನ್ನು ಇನ್ನಷ್ಟು ಸರಳ ಹಾಗೂ ಸುಲಭಗೊಳಿಸಿದೆ. ಇದರ ಜೊತೆಗೆ ಒಂದು ಅಪಾಯವೂ ಡಿಜಿಟಲ್ ವ್ಯವಹಾರದಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿದೆ. ಅದು ಆನ್ ಲೈನ್ ವಂಚನೆ (Online fraud). ಆನ್ ಲೈನ್ ವ್ಯವಹಾರ ಹೆಚ್ಚಾದಂತೆ ಆನ್ ಲೈನ್ ವಹಿವಾಟು ಹೆಚ್ಚಾದಂತೆ ಆನ್ ಲೈನ್ ವಂಚನೆ ಕೂಡಾ ಅದೇ ವೇಗದಲ್ಲಿ ಬೆಳೆಯುತ್ತಿದೆ. ಹಾಗಾಗಿ ಆನ್ ಲೈನ್ ಬ್ಯಾಂಕಿಂಗ್ (Online banking) ವಹಿವಾಟು ಮಾಡುವಾಗ ಹೆಚ್ಚು ಎಚ್ಚರ ಅತ್ಯಗತ್ಯ. 


ಇದನ್ನೂ ಓದಿ : Life Insurance Policy: ಸರಿಯಾದ 'ಜೀವ ವಿಮಾ ಪಾಲಿಸಿ' ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ನೋಡಿ 


ಕ್ಯೂಆರ್ ಕೋಡ್‌ ಬಗ್ಗೆ ಎಸ್ ಬಿಐ ನೀಡಿದ ಎಚ್ಚರಿಕೆ ಏನು..?
ಭಾರತೀಯ ಸ್ಟೇಟ್ ಬ್ಯಾಂಕ್ (State bank of India) ಕಾಲ ಕಾಲಕ್ಕೆ ತನ್ನ ಗ್ರಾಹಕರಿಗೆ ಆನ್ ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳುವ ವಿಧಾನಗಳ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ.  ಇತ್ತೀಚೆಗೆ ಅದು ಕ್ಯೂ ಆರ್ ಕೋಡ್ ಪೇಮೆಂಟ್ (QR Code payment) ಬಗ್ಗೆ ಎಚ್ಚರಿಕೆ ರವಾನಿಸಿದೆ. ಪೇಮೆಂಟ್ ಗಾಗಿ ಬೇರೆಯವರು ರವಾನಿಸಿದ ಕ್ಯೂ ಆರ್ ಕೋಡ್ ನ್ನು ಎಂದಿಗೂ ಸ್ಕ್ಯಾನ್ ಮಾಡಬೇಡಿ ಎಂದು ಹೇಳಿದೆ. ಕ್ಯೂ ಆರ್ ಕೋಡ್ ನಲ್ಲಿ ತಪ್ಪು ಎಮೌಂಟ್ ಸೂಚಿಸಿ ನಿಮ್ಮ ಖಾತೆಯಿಂದ ಹಣ ಲಪಟಾಯಿಸುವ ತಂತ್ರವನ್ನು ವಂಚಕರು ಬಳಸುತ್ತಾರೆ. ಹಾಗಾಗಿ, ಬೇರೆಯವರು ರವಾನಿಸಿದ ಕ್ಯೂ ಆರ್ ಕೋಡ್ ಎಂದಿಗೂ ಸ್ಕ್ಯಾನ್ ಮಾಡಬಾರದು ಎಂದು ಎಸ್ ಬಿಐ ಹೇಳಿದೆ. 


ಕ್ಯೂಆರ್ ಕೋಡ್‌ ವಂಚನೆ ಹೇಗೆ ನಡೆಯುತ್ತದೆ.?
ಎಸ್ ಬಿಐ (SBI) ಒಂದು ಇಂಟರೆಸ್ಟಿಂಗ್ ವಿಡಿಯೋ ಹಂಚಿ ಕೊಂಡಿದೆ.  ಕ್ಯೂ ಆರ್ ಕೋಡಿನಿಂದ ಕೆಲವು  ವಂಚಕರು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು ಎಂಬುದನ್ನು ಆ ವಿಡಿಯೋದಲ್ಲಿ ತೋರಿಸಲಾಗಿದೆ.  ಆ ವಿಡಿಯೋ ಒಮ್ಮೆ ನೋಡಿ. ವಂಚನೆಯ ಉದ್ದೇಶದಿಂದ ವ್ಯಕ್ತಿಯೊಬ್ಬ ತನ್ನ ಗ್ರಾಹಕನಿಗೆ ಪೇಮೆಂಟ್ ಮಾಡಲು ಕ್ಯೂಆರ ಕೋಡ್ ಸ್ಕ್ಯಾನ್ (QR Code Scan)ಮಾಡಲು ಕಳುಹಿಸುತ್ತಾನೆ. ಆ ಗ್ರಾಹಕನಿಗೆ  ಕ್ಯೂ ಆರ್ ಕೋಡ್ ಬಗ್ಗೆ ಮಾಹಿತಿ ಮೊದಲೇ ಇತ್ತು. ಕ್ಯೂ ಆರ್ ಕೋಡ್ ನ್ನು ಕೇವಲ ಪೇಮೆಂಟ್ ಮಾಡಲು ಬಳಸುತ್ತಾರೆ. ಪೇಮೆಂಟ್ ರಿಸೀವ್ ಮಾಡಲು ಅಲ್ಲ. ಅಂದರೆ ನಿಮಗೆ ದುಡ್ಡು ಕೊಡಬೇಕಿರುವ ವ್ಯಕ್ತಿ ಕ್ಯೂಆರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಿದ ಕೂಡಲೇ ನಿಮಗೆ ದುಡ್ಡು ಕಳುಹಿಸುತ್ತೇನೆ ಎಂದರೆ ಅದು ಖಂಡಿತಾ ಫ್ರಾಡ್.  ನೀವು ಅದನ್ನು ಸ್ಕ್ಯಾನ್ ಮಾಡಿದ ಕೂಡಲೇ ನಿಮ್ಮ ಬ್ಯಾಂಕ್ (Bank)ಖಾತೆಯಲ್ಲಿರುವ ದುಡ್ಡನ್ನು ಆತ ಲಪಟಾಯಿಸಿಬಿಡಬಹುದು.  ಕ್ಯೂ ಆರ್ ಕೋಡ್ ವಂಚನೆ ನಡೆಯುವುದು ಇದೇ ರೀತಿ. 


Corona Impact: ಕೊರೊನಾ ಎರಡನೇ ಅಲೆ, 5 ಲಕ್ಷ ಕೋಟಿ ರೂ. ವಾಣಿಜ್ಯ ನಷ್ಟ


ಕ್ಯೂ ಆರ್ ಕೋಡ್ ಬಳಸಿ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಬಹುದು :
ಎಸ್‌ಬಿಐ ಈಗಾಗಲೇ ಡೆಬಿಟ್ ಕಾರ್ಡ್ (Debit card) ಇಲ್ಲದೆ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದು ಅನುಕೂಲಕರ ಮತ್ತು ಸುರಕ್ಷಿತವಾಗಿದೆ. ಇದಕ್ಕಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯೋನೊ ಅಪ್ಲಿಕೇಶನ್ (Yono App) ಇರುವುದು ಅವಶ್ಯಕ. ನಿಮ್ಮ ಬಳಿ ಎಸ್‌ಬಿಐ ಡೆಬಿಟ್ ಕಾರ್ಡ್ ಇಲ್ಲದಿದ್ದರೆ ಎಟಿಎಂನಿಂದ ಹಣವನ್ನು ಹೇಗೆ ಹಿಂಪಡೆಯಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಎಟಿಎಂನಲ್ಲಿ (ATM) ಒಂದು ಆಯ್ಕೆ ಇರುತ್ತದೆ, ಅದನ್ನು ಕ್ಲಿಕ್ ಮಾಡಿ. YONO ಅಪ್ಲಿಕೇಶನ್‌ನಿಂದ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಮೊತ್ತವನ್ನು ನಮೂದಿಸಿ ಮತ್ತು ENTER ಮಾಡಿ. ಸಾಕು. ಇದಕ್ಕಾಗಿ ನಿಮಗೆ ಯಾವುದೇ ಒಟಿಪಿ ಅಗತ್ಯವಿಲ್ಲ. ಇದು ಸಾಕಷ್ಟು ಸಿಂಪಲ್.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.