ಎಸ್‌ಬಿಐ ನೆಟ್ ಬ್ಯಾಂಕಿಂಗ್: ಇದು ಡಿಜಿಟಲ್ ಯುಗ. ಈ ಡಿಜಿಟಲ್ ಪ್ರಪಂಚದಲ್ಲಿ ಎಲ್ಲವೂ ಸಹ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಇದು ಹೆಚ್ಚಿನ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಶ್ರಮ ಕಡಿಮೆ ಮಾತ್ರವಲ್ಲ ಸಮಯವೂ ಉಳಿತಾಯವಾಗುತ್ತದೆ. ಆದರೆ, ಇಲ್ಲಿ ಮೈಯೆಲ್ಲ ಕಣ್ಣಾಗಿದ್ದು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಜನರು ಬ್ಯಾಂಕಿಂಗ್ ವಂಚನೆಗೆ ಬಲಿಯಾಗುವುದನ್ನು ಕಾಣಬಹುದು. ಜನರನ್ನು ವಂಚಿಸಲು ವಂಚಕರು ಹೊಸ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಇವುಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವಂಚನೆಯೂ ಸೇರಿದೆ. ಇದರಲ್ಲಿ ವಂಚಕರು ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಅವರ ಖಾತೆಯನ್ನು ಖಾಲಿ ಮಾಡುತ್ತಾರೆ. ಆದಾಗ್ಯೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ವಂಚನೆಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ಬ್ಯಾಂಕಿಂಗ್ ವಂಚನೆ ಕುರಿತಂತೆ ತನ್ನ ಕೋಟ್ಯಾಂತರ ಗ್ರಾಹಕರಿಗೆ ವಿಡಿಯೋ ಶೇರ್ ಮಾಡುವ ಮೂಲಕ ಎಚ್ಚರಿಕೆ ನೀಡಿರುವ ಎಸ್‌ಬಿಐ, ತಪ್ಪು ಸಂಖ್ಯೆಗಳ ಬಗ್ಗೆ ಎಚ್ಚರಿಕೆಯಿನ ಇರುವಂತೆ ಸಲಹೆ ನೀಡಿದೆ. ಇವು ನಿಮ್ಮ ವೈಯಕ್ತಿಕ/ಹಣಕಾಸಿನ ಮಾಹಿತಿಯನ್ನು ಕದಿಯುವ ವಂಚನೆಯಾಗಿರುವುದರಿಂದ ಎಂದಿಗೂ ಮರಳಿ ಕರೆ ಮಾಡಬೇಡಿ ಅಥವಾ ಅಂತಹ ಎಸ್ಎಂಎಸ್ ಗೆ ಪ್ರತಿಕ್ರಿಯಿಸಬೇಡಿ ಎಂದು ಎಸ್‌ಬಿಐ ತಿಳಿಸಿದೆ.


ರೈಲ್ವೇ ನಿಲ್ದಾಣದಲ್ಲಿ ಉಚಿತ ವೈಫೈ ಕುರಿತ ಬಿಗ್ ಅಪ್ಡೇಟ್


ಬ್ಯಾಂಕಿಂಗ್ ವಂಚನೆಯನ್ನು ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ:
ನಕಲಿ ಎಸ್‌ಎಂಎಸ್ ಮೂಲಕ ವಂಚಕರು ಜನರಿಗೆ ಹೇಗೆ ಮೋಸ ಮಾಡುತ್ತಾರೆ ಎಂಬುದನ್ನು  ವಿಡಿಯೋ ಮೂಲಕ ಎಸ್‌ಬಿಐ ಮಾಹಿತಿ ನೀಡಿದೆ. ಇದೇ ಬೆಲೆ ಯಾವುದೇ ನಕಲಿ ಸಂದೇಶ ಬಂದಾಗ ಅದರಲ್ಲಿ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸಲಹೆ ನೀಡಿರುವ ಎಸ್‌ಬಿಐ, ತಪ್ಪು ಸಂಖ್ಯೆಯಿಂದ ಸಂದೇಶವನ್ನು ಕಳುಹಿಸಿದ್ದರೆ, ಅದನ್ನು ಫೋನ್ ಸಂಖ್ಯೆಯಿಂದ ಕಳುಹಿಸಲಾಗಿದೆಯೇ ಮತ್ತು ಅಧಿಕೃತ ಐಡಿಯಿಂದ ಕಳುಹಿಸಲಾಗಿದೆಯೇ ಎಂದು ಮೊದಲು ಪರಿಶೀಲಿಸುವಂತೆ ಗ್ರಾಹಕರನ್ನು ಎಚ್ಚರಿಸಿದೆ. 


ಇದನ್ನೂ ಓದಿ- PM Kisan Big Update: ಈ ರೈತರಿಗೆ ಪಿಎಂ ಕಿಸಾನ್ 12ನೇ ಕಂತಿನ ನಯಾ ಪೈಸೆಯೂ ಸಿಗಲ್ಲ


ಇಂತಹ ವಿಷಯಗಳ ಬಗ್ಗೆ ಯಾವಾಗಲೂ ಎಚ್ಚರಿಕೆಯಿಂದ ಇರಿ:
>> ಇದಲ್ಲದೇ ಇಂತಹ ನಕಲಿ ಎಸ್ಎಂಎಸ್ ಕಳುಹಿಸಿದ ನಂತರ ಯಾರಾದರೂ ಕರೆ ಮಾಡಿ ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಕೇಳಿದರೆ ಅದರತ್ತ ಗಮನ ಹರಿಸಬೇಡಿ.
>> ಅಲ್ಲದೆ, ಎಸ್ಎಂಎಸ್ ಕಳುಹಿಸುವ ಮೂಲಕ ತ್ವರಿತ ಪಾವತಿಯನ್ನು ಮಾಡಲು ಯಾರಾದರೂ ನಿಮ್ಮನ್ನು ಕೇಳಿದರೆ, ಅಲ್ಲಿ ಜಾಗರೂಕರಾಗಿರಿ. 
>> ಅಲ್ಲದೆ, ಕಳುಹಿಸಲಾದ ಎಸ್‌ಎಂಎಸ್‌ನಲ್ಲಿ ವ್ಯಾಕರಣ ತಪ್ಪುಗಳು ಅಥವಾ ಕಾಗುಣಿತ ತಪ್ಪುಗಳು ಇದ್ದರೆ, ಇದು ತಪ್ಪು ಸಂಖ್ಯೆ ಎಂದು ಅರ್ಥಮಾಡಿಕೊಳ್ಳಿ.
ಈ ರೀತಿಯಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೀವು ಬ್ಯಾಂಕಿಂಗ್ ವಂಚನೆಗಳನ್ನು ಆದಷ್ಟು ತಪ್ಪಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.