SBI Alert : ನಿಮಿಷದಲ್ಲಿ ಸಾಲ ಪಡೆಯುವ ಆಸೆಗೆ ಖಾತೆ ಖಾಲಿ ಮಾಡಿಕೊಳ್ಳದಿರಿ.. ಎಚ್ಚರ..!
ತ್ವರಿತ ಸಾಲ (Instant loan) ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಟ್ವಿಟರ್ ನಲ್ಲಿ ತನ್ನ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ನವದೆಹಲಿ: ತ್ವರಿತ ಸಾಲ (Instant loan) ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಟ್ವಿಟರ್ ನಲ್ಲಿ ತನ್ನ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಯಾವುದೇ ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ತನ್ನ ಕೋಟ್ಯಂತರ ಗ್ರಾಹಕಲ್ಲಿ ಎಸ್ ಬಿಐ ಮನವಿ ಮಾಡಿದೆ. ಜೊತೆಗೆ ತ್ವರಿತ ಸಾಲಗಳನ್ನು ನೀಡವುದಾಗಿ ಹೇಳುವ ಲಿಂಕ್ ಗಳಿಂದ ದೂರವಿರಬೇಕಾಗಿ ಮನವಿ ಮಾಡಿದೆ.
ಕೇವಲ ಒಂದು ಕ್ಲಿಕ್ ಖಾತೆಯನ್ನು ಖಾಲಿ ಮಾಡಿ ಬಿಡಬಹುದು:
5 ನಿಮಿಷಗಳಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ಮುಂತಾದ ಸಂದೇಶಗಳು (Message)ಬಂದರೆ ಎಚ್ಚರಿಕೆಯಿಂದಿರುವಂತೆ ಎಸ್ ಬಿಐ (SBI) ಹೇಳಿದೆ. ಇಂಥಹ ಸಂದೇಶಗಳಿಗೆಪ್ರತಿಕ್ರಿಯಿಸದಂತೆ ಅದು ಗ್ರಾಹಕರಲ್ಲಿ ಮನವಿ ಮಾಡಿದೆ. ಒಂದು ವೇಳೆ ಆ ಲಿಂಕನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆ (Account) ಸಂಪೂರ್ಣವಾಗಿ ಖಾಲಿಯಾಗಿ ಬಿಡಬಹುದುಎಂದು ಎಸ್ ಬಿಐ ಎಚ್ಚರಿಕೆ ರವಾನಿಸಿದೆ. ಎಸ್ ಬಿಐ ಅಥವಾ ಯಾವುದೇ ಬ್ಯಾಂಕಿನ ಸೋಗಿನಲ್ಲಿ ನಿಮ್ಮ ವಿವರಗಳನ್ನು ಪಡೆಯಲು ಯತ್ನಿಸುವ ಸಂದೇಶಗಳಿಂದ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ. ಅಗತ್ಯ ಮಾಹಿತಿಗಳಿಗಾಗಿ https://bank.sbi ಗೆ ಭೇಟಿ ನೀಡಿ ಪಡೆದುಕೊಳ್ಳುವಂತೆ ಸಲಹೆ ನೀಡಿದೆ. ತ್ವರಿತ ಸಾಲ (Instant loan) ನೀಡಿಕೆ ಆಪ್ಲಿಕೇಶನ್ ಗಳು ಮೋಸದ ಜಾಲವಾಗಿರಬಹುದು ಎಂದು ಅದು ಗ್ರಾಹಕರನ್ನು ಎಚ್ಚರಿಸಿದೆ.
SBI Alert : ಡೆಬಿಟ್ ಕಾರ್ಡ್ ಗ್ರಾಹಕರೇ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ
ತ್ವರಿತ ಲೋನ್ ನೀಡುವ ಆಪ್ ಗಳಿಂದ ದೂರವಿರಿ:
ಇನ್ ಸ್ಟಂಟ್ ಲೋನ್ ಅಪ್ಲಿಕೇಶನ್‌ಗಳ ಮೂಲಕ ಯಾವುದೇ ಕಾಗದ ಪತ್ರಗಳಿಲ್ಲದೆ 2 ನಿಮಿಷಗಳಲ್ಲಿ ಸಾಲ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ನಂತರ ಪಡೆದ ಸಾಲಕ್ಕೆ ದೊಡ್ಡ ಪ್ರಮಾಣದ ಬಡ್ಡಿಯನ್ನು (Interest) ವಿಧಿಸಲಾಗುತ್ತದೆ. ಪಡೆದಿರುವ ಸಾಲ ಸಾವಿರಗಳಲ್ಲಿದ್ದರೆ ಬಡ್ಡಿ ಸೇರಿ ಅದು ಲಕ್ಷಗಳನ್ನು ತಲುಪಬಹುದು. ಇದಾದ ನಂತರ ಸಾಲ ಮರುಪಾವತಿಗಾಗಿ ಜೀವ ಬೆದರಿಕೆಯನ್ನು ಕೂಡಾ ಹಾಕಲಾಗುತ್ತದೆ. ಅದೆಷ್ಟೋ ಜನ ಈ ಸುಳಿಯಲ್ಲಿ ಸಿಲುಕಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈಗಾಗಲೇ ಇಂತಹ ತ್ವರಿತ ಲೋನ್ ಅಪ್ಲಿಕೇಶನ್‌ಗಳಿಂದ ದೂರವಿರುವಂತೆ ರಿಸರ್ವ್ ಬ್ಯಾಂಕ್ (RBI) ಕೂಡಾ ಜನತೆಯಲ್ಲಿ ಮನವಿ ಮಾಡಿದೆ.
ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಎಸ್‌ಬಿಐ ಹೇಳಿದೆ :
ಇಂಥಹ ಮೋಸದ ಜಾಲಕ್ಕೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಎಸ್ ಬಿಐ ತನ್ನ ಗ್ರಾಹಕರಿಗೆ ಕೆಲವು ಸಲಹೆಗಳನ್ನು ನೀಡಿದೆ.
1. ಸಾಲ ತೆಗೆದುಕೊಳ್ಳುವ ಮೊದಲು ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಪರಿಶೀಲಿಸಿ.
2. ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
3. ಡೌನ್‌ಲೋಡ್ (Download) ಮಾಡುವ ಮೊದಲು ಅಪ್ಲಿಕೇಶನ್‌ನ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
4. ಪ್ರಸ್ತಾಪದ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಿ.
5. ನಿಮ್ಮ ಎಲ್ಲಾ ಮಾಹಿತಿಗಾಗಿ : https://bank.sbiಗೆ ಭೇಟಿ ಕೊಡಿ..
ಇದನ್ನೂ ಓದಿ :SBIಯಿಂದ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ : FDಯಲ್ಲಿ ಸಿಗಲಿದೆ 6.2ರಷ್ಟು ಬಡ್ಡಿ
ಫೋನ್‌ನಲ್ಲಿ ಯಾವ ಮಾಹಿತಿಯನ್ನೂ ನೀಡಬೇಡಿ:
ಎಸ್‌ಬಿಐ ಹೆಸರಿನಲ್ಲಿ ಫೋನ್ (Phone) ಮಾಡಿ, ವೈಯಕ್ತಿಕ ವಿವರಗಳನ್ನು ಕೇಳುತ್ತಾರೆ ಎಂಬ ಬಗ್ಗೆ ಮಾಹಿತಿಯಿದ್ದು, ಎಸ್ ಬಿಐ ಯಾವುದೇ ಕಾರಣಕ್ಕೂ ನಿಮ್ಮ ಖಾತೆ ಸಂಖ್ಯೆ ಅಥವಾ ಒಟಿಪಿಯನ್ನು (OTP) ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂಥಹ ಬೋಗಸ್ ಕರೆಗಳ ಬಗ್ಗೆ ಜಾಗರೂಕರಾಗಿರುವಂತೆ ಅದು ಮನವಿ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.