SBI Customers Alert: SBI ಗ್ರಾಹಕರಿಗೊಂದು ಮಹತ್ವದ ಸುದ್ದಿ, ಈ ದಿನ ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳು ಸ್ಥಗಿತವಿರಲಿವೆ
SBI Customers Alert - ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಜುಲೈ 16 ಮತ್ತು ಜುಲೈ 17ರಂದು ಅಲ್ಪಾವಧಿಗೆ ಬ್ಯಾಂಕ್ ನ ಕೆಲ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಿದೆ.
SBI Customers Alert - ಎಸ್‌ಬಿಐ (State Bank Of India) ತನ್ನ ಗ್ರಾಹಕರಿಗೆ ಒಂದು ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಿದೆ. ನೀವೂ ಕೂಡ ಒಂದು ವೇಳೆ SBIನಲ್ಲಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಜುಲೈ 16 ಮತ್ತು ಜುಲೈ 17 ರಂದು ಬ್ಯಾಂಕ್ ನ ಕೆಲವು ಸೇವೆಗಳನ್ನು ಅಲ್ಪಾವಧಿಗೆ ಮುಚ್ಚಲಾಗುವುದು ಎಂದು ಎಸ್‌ಬಿಐ (SBI) ಟ್ವೀಟ್ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರಿಗೆ ಕೆಲವು ಸಮಯದವರೆಗೆ ನೆಟ್ ಬ್ಯಾಂಕಿಂಗ್ ಸೇವೆಗಳನ್ನು (Net Banking Services) ಬಳಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮಗೆ ಯಾವುದೇ ಪ್ರಮುಖ ವಹಿವಾಟು ನಡೆಸಬೇಕಿದ್ದರೆ ಅದನ್ನು ನೀವು ತಕ್ಷಣವೇ ಇತ್ಯರ್ಥಪಡಿಸಬೇಕು ಎಂದು ಎಸ್‌ಬಿಐ (SBI Services Affected) ತನ್ನ ಟ್ವೀಟ್ ನಲ್ಲಿ ಮಾಹಿತಿ ನೀಡಿದೆ.
SBI ವತಿಯಿಂದ ಜಾರಿಗೊಳಿಸಲಾಗಿರುವ ಸಮಯದಲ್ಲಿ ಮೆಂಟೆನೆನ್ಸ್ ಆಕ್ಟಿವಿಟಿ (Maintenance Activity) ಕಾರಣ ಬ್ಯಾಂಕ್ ನ ಹಲವು ಸೇವೆಗಳು ಬಂದ್ ಇರಲಿವೆ. ಇವುಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ (Internet Banking), ಯೋನೋ (YONO), ಯುಪಿಐ (UPI), ಯೋನೋ ಲೈಟ್ (YONO Lite) ಸೇವೆಗಳು ಶಾಮೀಲಾಗಿವೆ. ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ನಲ್ಲಿ (Digital Payment) ಯಾವುದೇ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಬ್ಯಾಂಕ್ ಅಪ್ಗ್ರೇಡ್ ಕೆಲಸ ಕೈಗೆತ್ತಿಕೊಂಡಿದೆ. ಒಂದು ವೇಳೆ ನೀವೂ ಕೂಡ SBI ಗ್ರಾಹಕರಾಗಿದ್ದರೆ ಈ ದಿನಾಂಕಗಳನ್ನು ಹಾಗೂ ಸಮಯವನ್ನು ನೆನಪಿನಲ್ಲಿಟ್ಟುಕೊಳ್ಳಿ.
ಅಡುಗೆ ಮನೆ ಅಲಂಕರಿಸಲಿದೆ ಸ್ಮಾರ್ಟ್ ಎಲ್ ಪಿಜಿ ಸಿಲಿಂಡರ್ , ಹಳೆ ಸಿಲಿಂಡರ್ ನೊಂದಿಗೆ ಎಕ್ಸ್ಚೇಂಜ್ ಮಾಡುವುದು ಹೇಗೆ ತಿಳಿಯಿರಿಎಲ್ಲಿಯವರೆಗೆ ಸೇವೆಗಳು ಸ್ಥಗಿತ ಇರಲಿವೆ
ಟ್ವೀಟ್ ನಲ್ಲಿ ಮಾಹಿತಿ ನೀಡಿರುವ SBI, ಜುಲೈ 16ರ ರಾತ್ರಿ 10.45 ರಿಂದ ಜುಲೈ17 ಬೆಳಗಿನ ಜಾವ 1.15 ರವರೆಗೆ ಈ ಮೆಂಟೆನೆನ್ಸ್ ಚಟುವಟಿಕೆ ನಡೆಯಲಿದೆ. ಈ ಅವಧಿಯಲ್ಲಿ 2 ಗಂಟೆ 30 ನಿಮಿಷದವರೆಗೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಲಭ್ಯವಿರುವುದಿಲ್ಲ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ
SBI YONO ಸೇವೆ
ಭಾರತೀಯ ಸ್ಟೇಟ್ ಬ್ಯಾಂಕ್ ನ YONO ಸೇವೆ ಒಂದು ಇಂಟಿಗ್ರೇಟೆಡ್ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಆಗಿದೆ. ಇದರಲ್ಲಿ ಬಳಕೆದಾರರಿಗೆ ಹಣಕಾಸಿನ ಸೇವೆಗಳ ಜೊತೆಗೆ ಫ್ಲೈಟ್, ಟ್ರೈನ್, ಬಸ್ ಹಾಗೂ ಟ್ಯಾಕ್ಸಿ ಬುಕಿಂಗ್, ಆನ್ಲೈನ್ ಶಾಪಿಂಗ್ ಅಥವಾ ಮೆಡಿಕಲ್ ಬಿಲ್ ಪಾವತಿಗಳಂತಹ ಇತರ ಸೇವೆಗಳು ಕೂಡ ಸಿಗುತ್ತವೆ. Android ಹಾಗೂ iOS ಎರಡೂ ಸ್ಮಾರ್ಟ್ ಫೋನ್ ಗಳಲ್ಲಿ YONO ಸೇವೆ ಸುಲಭವಾಗಿ ಬಳಸಬಹುದು.
ಇದನ್ನೂ ಓದಿ-EPFO : ಮನೆಯಲ್ಲಿ ಕುಳಿತು ನಿಮ್ಮ PF ಖಾತೆಯ ಬ್ಯಾಂಕ್ ಅಕೌಂಟ್ ನವೀಕರಿಸಬಹುದು ; ಹೇಗೆ ಇಲ್ಲಿ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.