SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಗಳ ಲಾಭ
Jan Dhan Yojana: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರುಪೇ ಡೆಬಿಟ್ ಕಾರ್ಡ್ ಬಳಸುವ ಎಲ್ಲ ಜನ ಧನ್ ಖಾತೆದಾರರಿಗೆ ಅಪಾರ ಸೌಲಭ್ಯವನ್ನು ಒದಗಿಸುತ್ತಿದೆ. ವಾಸ್ತವವಾಗಿ, ಈ ಗ್ರಾಹಕರು ಎಸ್‌ಬಿಐನಿಂದ 2 ಲಕ್ಷ ರೂ.ವರೆಗೆ ಉಚಿತ ಆಕಸ್ಮಿಕ ವಿಮಾ ರಕ್ಷಣೆಯ ಲಾಭವನ್ನು ಪಡೆಯಬಹುದು.
ನವದೆಹಲಿ : Jan Dhan Yojana: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರುಪೇ ಡೆಬಿಟ್ ಕಾರ್ಡ್ ಬಳಸುವ ಎಲ್ಲ ಜನ ಧನ್ ಖಾತೆದಾರರಿಗೆ ಅಪಾರ ಸೌಲಭ್ಯವನ್ನು ಒದಗಿಸುತ್ತಿದೆ. ವಾಸ್ತವವಾಗಿ, ಈ ಗ್ರಾಹಕರು ಎಸ್‌ಬಿಐನಿಂದ (SBI) 2 ಲಕ್ಷ ರೂ.ವರೆಗೆ ಉಚಿತ ಆಕಸ್ಮಿಕ ವಿಮಾ ರಕ್ಷಣೆಯ ಲಾಭವನ್ನು ಪಡೆಯಬಹುದು. ಜನ ಧನ್ ಖಾತೆ ಹೊಂದಿರುವ ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ.
ಈ ಆಧಾರದ ಮೇಲೆ ಮೊತ್ತವನ್ನು ನಿರ್ಧರಿಸಲಾಗುತ್ತದೆ :
ಗ್ರಾಹಕರು ತಮ್ಮ ಜನ ಧನ್ ಖಾತೆ (Jan Dhan Yojana) ತೆರೆಯುವ ಅವಧಿಗೆ ಅನುಗುಣವಾಗಿ ವಿಮೆಯ ಮೊತ್ತವನ್ನು ಎಸ್‌ಬಿಐ (SBI) ನಿರ್ಧರಿಸುತ್ತದೆ. ಪಿಎಮ್‌ಜೆಡಿವೈ ಖಾತೆಯನ್ನು ಆಗಸ್ಟ್ 28, 2018 ರವರೆಗೆ ತೆರೆಯಲಾದ ಗ್ರಾಹಕರಿಗೆ ಅವರಿಗೆ ನೀಡಲಾದ RuPay PMJDY ಕಾರ್ಡ್‌ನಲ್ಲಿ ಒಂದು ಲಕ್ಷ ರೂ.ಗಳವರೆಗೆ ವಿಮೆ ನೀಡಲಾಗುತ್ತದೆ. ಆದರೆ ಆಗಸ್ಟ್ 28, 2018 ರ ನಂತರ ನೀಡಲಾದ ರುಪೇ ಕಾರ್ಡ್‌ಗಳಲ್ಲಿ, ಆಕ್ಸಿ ಡೆಂಟಲ್ ಕವರ್ ಲಾಭವು 2 ಲಕ್ಷ ರೂಗಳವರೆಗೆ ಇರಲಿದೆ.
ಇದನ್ನೂ ಓದಿ : EPFO Alert: ನೌಕರರೇ ಗಮನಿಸಿ, ಪಿಎಫ್ ಖಾತೆಗೆ ಸಂಬಂಧಿಸಿದಂತೆ ಎಂದಿಗೂ ಈ 5 ತಪ್ಪುಗಳನ್ನು ಮಾಡದಿರಿ
ಯಾರಿಗಾಗಿ ಈ ಯೋಜನೆ :
ಪ್ರಧಾನ್ ಮಂತ್ರಿ ಜನ ಧನ್ ಯೋಜನೆ (Pradhan Mantri Jan Dhan Yojana) ಮೂಲಕ ದೇಶದ ಬಡ ಜನರಿಗಾಗಿ ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಿರೋ ಬ್ಯಾಲೆನ್ಸ್ ಖಾತೆಯನ್ನು ತೆರೆಯಲಾಗುವುದು. ಪ್ರಧಾನ್ ಮಂತ್ರಿ ಜನ ಧನ್ ಯೋಜನೆ (PMJDY) ಅಡಿಯಲ್ಲಿ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಲ್ಲಿ, ಯಾವುದೇ ವ್ಯಕ್ತಿಯು ದಾಖಲೆಗಳನ್ನು ಒದಗಿಸುವ ಮೂಲಕ Onlineನಲ್ಲಿ ಅಥವಾ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಜನ ಧನ್ ಖಾತೆಯನ್ನು ತೆರೆಯಬಹುದು. ಉಳಿತಾಯ ಖಾತೆಯನ್ನು ಕೂಡಾ ಜನ ಧನ್ ಖಾತೆಯಾಗಿ ಪರಿವರ್ತಿಸಬಹುದು. ಇದರಲ್ಲಿ ರುಪೇ ಕಾರ್ಡ್ ಅನ್ನು ನೀಡಲಾಗುವುದು.
ಈ ಯೋಜನೆಗೆ ಯಾರು ಅರ್ಹರು ? :
ಅಪಘಾತದ ದಿನಾಂಕದ 90 ದಿನಗಳ ಒಳಗೆ ಬಳಕೆದಾರರು ಇಂಟ್ರಾ ಅಥವಾ ಇಂಟರ್ ಬ್ಯಾಂಕ್‌ನಲ್ಲಿ ಯಾವುದೇ ಯಶಸ್ವಿ ಹಣಕಾಸು ಅಥವಾ ಹಣಕಾಸೇತರ ವಹಿವಾಟು ನಡೆಸಿದ್ದಾಗ ಮಾತ್ರ ಜನ ಧನ್ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್(Rupay debit card) ಅಡಿಯಲ್ಲಿ ಅಪಘಾತ ವಿಮೆಯ ಲಾಭ ಸಿಗಲಿದೆ.
ಇದನ್ನೂ ಓದಿ : LPG Price: ಅಕ್ಟೋಬರ್ 1 ರಿಂದ ಎಲ್‌ಪಿಜಿ ಬೆಲೆಯಲ್ಲಿ ಭಾರಿ ಏರಿಕೆ ಸಾಧ್ಯತೆ
ಅಗತ್ಯ ದಾಖಲೆಗಳು :
1. ಇನ್ಶುರೆನ್ಸ್ ಕ್ಲೈಂ ಫಾರ್ಮ್
2. ಮರಣ ಪ್ರಮಾಣಪತ್ರದ ಪ್ರತಿ.
3. ಕಾರ್ಡ್ ಹೋಲ್ಡರ್ ಮತ್ತು ನಾಮಿನಿಯ ಆಧಾರ್ ಪ್ರತಿ.
4. ಅನ್ಯ ಕಾರಣಗಳಿಂದ ಮರಣ ಸಂಭವಿಸಿದ್ದರೆ, ಎಫ್‌ಎಸ್‌ಎಲ್ ವರದಿಯೊಂದಿಗೆ ಮರನೋತ್ತರ ಪರೀಕ್ಷೆ ಪ್ರತಿ
5. ಅಪಘಾತದ ವಿವರಗಳನ್ನು ನೀಡುವ ಎಫ್‌ಐಆರ್ (FIR) ಅಥವಾ ಪೊಲೀಸ್ ವರದಿಯ ಮೂಲ ಅಥವಾ ಪ್ರಮಾಣೀಕೃತ ಪ್ರತಿ.
6. ಕಾರ್ಡ್ ನೀಡುವ ಬ್ಯಾಂಕಿನ ಪರವಾಗಿ ಅಧಿಕೃತ ಸಹಿ ಮತ್ತು ಬ್ಯಾಂಕ್ ಸ್ಟಾಂಪ್ ಮೂಲಕ ಸಹಿ ಮಾಡಿದ ಘೋಷಣಾ ಪತ್ರ
7. ಇದರಲ್ಲಿ ಬ್ಯಾಂಕ್ ಅಧಿಕಾರಿಯ ಹೆಸರು ಮತ್ತು ಇಮೇಲ್ ಐಡಿಯೊಂದಿಗೆ ಸಂಪರ್ಕ ವಿವರಗಳನ್ನು ನೀಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.