SBI FD Rates 2022: ದುಬಾರಿಯಾಗುತಿರುವ ಬ್ಯಾಂಕ್ ಸಾಲಗಳ ಜೊತೆಗೆ ಇದೀಗ ಬ್ಯಾಂಕ್‌ಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿದರವನ್ನೂ ಹೆಚ್ಚಿಸುತ್ತಿವೆ. ಇತ್ತೀಚಿಗೆ, ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, 211 ದಿನಗಳಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ  ವಿವಿಧ ಮೆಚ್ಯೂರಿಟಿ ಹೊಂದಿರುವ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದರಿಂದ, ಮಾರುಕಟ್ಟೆಯಲ್ಲಿ ಮುಂದುವರೆದಿರುವ ಅನಿಶ್ಚಿತತ ವಾತಾವರಣದ ಈ ಕಾಲದಲ್ಲಿ ಲ್ಲಿ ಹೂಡಿಕೆದಾರರಿಗೆ FD ಗಳಲ್ಲಿ ಹೂಡಿಕೆ ಮಾಡುವುದು ಎಂದಿಗಿಂತಲೂ ಹೆಚ್ಚು ಆಕರ್ಷಕವಾಗಲಿದೆ. ದೊಡ್ಡ ವಾಣಿಜ್ಯ ಬ್ಯಾಂಕ್ ಎಸ್‌ಬಿಐನಲ್ಲಿ ವಿವಿಧ ಮೆಚ್ಯೂರಿಟಿ ಅವಧಿಯ ಠೇವಣಿಗಳ ಮೇಲೆ ಎಷ್ಟು ಬಡ್ಡಿ ಲಾಭ ನೀಡುತ್ತಿದೆ  ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

SBI FD: 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  211 ದಿನಗಳು ಮತ್ತು 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವಾರ್ಷಿಕ ಶೇ.4.40ರಿಂದ ಶೇ.4.60ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇ.4.90ರಿಂದ ಶೇ.5.10ಕ್ಕೆ ಹೆಚ್ಚಿಸಿದೆ. ಈ ರೀತಿಯಾಗಿ, ಬ್ಯಾಂಕ್ ಗ್ರಾಹಕರು ಇದೀಗ ಈ ಮೆಚ್ಯೂರಿಟಿ ಅವಧಿಯ ಫಿಕ್ಸೆಡ್ ಡಿಪಾಸಿಟ್ ಮೇಲೆ 20 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. 


ಇದನ್ನೂ ಓದಿ-Nitin Gadkari Master Plan: ತಪ್ಪಾದ ಜಾಗಗಳಲ್ಲಿ ಪಾರ್ಕ್ ಆದ ವಾಹನಗಳ ಫೋಟೋ ಕಳುಹಿಸುವವರಿಗೆ 500 ರೂ. ಬಹುಮಾನ !


SBI FD: 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ
ಎಸ್‌ಬಿಐ 1 ವರ್ಷದ ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವಾರ್ಷಿಕ ಶೇ.5.10ರಿಂದ ಶೇ.5.30ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇ.5.60ರಿಂದ ಶೇ.5.80ಕ್ಕೆ ಹೆಚ್ಚಿಸಲಾಗಿದೆ. ಈ ರೀತಿಯಾಗಿ, ಗ್ರಾಹಕರು ಇನ್ಮುಂದೆ ಈ ಮೆಚ್ಯೂರಿಟಿ ಅವಧಿಯ FD ಮೇಲೆ 20 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿಯನ್ನು ಪಡೆಯಲಿದ್ದಾರೆ. 


ಇದನ್ನೂ ಓದಿ-RBI Mastercard Onboarding: ಮಾಸ್ಟರ್‌ಕಾರ್ಡ್ ಮೇಲಿನ ನಿಷೇಧವನ್ನು ತೆಗೆದುಹಾಕಿದ ಆರ್‌ಬಿಐ


SBI FD: 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ
ಎಸ್‌ಬಿಐ 2 ವರ್ಷ ಪೂರ್ಣಗೊಂಡ ಮತ್ತು 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ವಾರ್ಷಿಕ ಶೇ.5.20ರಿಂದ ಶೇ.5.35ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇ.5.70ರಿಂದ ಶೇ.5.85ಕ್ಕೆ ಹೆಚ್ಚಿಸಲಾಗಿದೆ. ಈ ರೀತಿಯಾಗಿ, ಗ್ರಾಹಕರು ಇದೀಗ ಈ ಮೆಚ್ಯೂರಿಟಿ ಅವಧಿಯ ಸ್ಥಿರ ಠೇವಣಿ ಮೇಲೆ 15 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿಯನ್ನು ಪಡೆಯಲಿದ್ದಾರೆ. ಹೊಸ ದರಗಳು ಜೂನ್ 14, 2022 ರಿಂದ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಅನ್ವಯಿಸಲಿವೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.