ನವದೆಹಲಿ: ವೃದ್ಧಾಪ್ಯದಲ್ಲಿ ಜೀವನದ ಭದ್ರತೆ ಅತಿ ಅವಶ್ಯಕ. ಈ ಹಿನ್ನಲೆಯಲ್ಲಿ ನಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ನಾವು ನಮ್ಮ ನಿವೃತ್ತಿ ನಂತರದ ಜೀವನಕ್ಕಾಗಿ ಕೂಡಿಡುತ್ತೇವೆ. ಅಂತೆಯೇ ಬ್ಯಾಂಕುಗಳು ಕೂಡ ಆಗಾಗ್ಗೆ ಹಿರಿಯ ನಾಗರೀಕರಿಗಾಗಿ ಕೆಲವು ಕೊಡುಗೆಗಳನ್ನು ನೀಡುತ್ತವೆ. ಇದರ ಭಾಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಳೆದ ವರ್ಷ ಮೇ ತಿಂಗಳಲ್ಲಿ 'ವಿ ಕೇರ್ ಸೀನಿಯರ್ ಸಿಟಿಜನ್' ಯೋಜನೆಯನ್ನು ಪ್ರಾರಂಭಿಸಿತು, ಆ ಸಮಯದಲ್ಲಿ ಈ ಯೋಜನೆಯ ಲಾಭ ಪಡೆಯಲು 31 ಮಾರ್ಚ್ 2021  ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಆದರೆ ಈಗ ಎಸ್‌ಬಿಐ ಈ ಯೋಜನೆಯನ್ನು ವಿಸ್ತರಿಸಿದೆ.


COMMERCIAL BREAK
SCROLL TO CONTINUE READING

ಯೋಜನೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ :
ಯೋಜನೆಯ ಕೊನೆಯ ದಿನಾಂಕವನ್ನು ಈ ಮೊದಲು ಹಲವು ಬಾರಿ ವಿಸ್ತರಿಸಲಾಗಿದೆ. ಯೋಜನೆ ಪ್ರಾರಂಭಿಸುವ ಸಮಯದಲ್ಲಿ, ಇದನ್ನು ಸೆಪ್ಟೆಂಬರ್ 2020 ರವರೆಗೆ ನಿಗದಿ ಪಡಿಸಲಾಗಿತ್ತು. ಆದರೆ ನಂತರ ಇದನ್ನು ಮೊದಲ ಬಾರಿಗೆ 2020 ರ ಡಿಸೆಂಬರ್ ವರೆಗೆ, ಎರಡನೇ ಬಾರಿಗೆ 2021 ಮಾರ್ಚ್ 31 ರವರೆಗೆ ಮತ್ತು ಈಗ ಮೂರನೇ ಬಾರಿಗೆ 30 ಜೂನ್ 2021 ರವರೆಗೆ ವಿಸ್ತರಿಸಲಾಗಿದೆ.


We care senior citizen ಯೋಜನೆಯಲ್ಲಿ ಸಿಗಲಿದೆ ಅಧಿಕ ಬಡ್ಡಿ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ವೃದ್ಧರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಬ್ಯಾಂಕ್ ಸಾಮಾನ್ಯವಾಗಿ 5 ವರ್ಷದ ಸ್ಥಿರ ಠೇವಣಿಗಳಿಗೆ (ಎಫ್‌ಡಿ) 5.4 ಶೇಕಡಾ ಬಡ್ಡಿಯನ್ನು ಪಾವತಿಸುತ್ತದೆ. ಆದರೆ ವಿ ಕೇರ್ ಸೀನಿಯರ್ ಸಿಟಿಜನ್ ಯೋಜನೆಯಲ್ಲಿ 6.20 ಶೇಕಡಾ ಬಡ್ಡಿಯನ್ನು ನೀಡಲಾಗುತ್ತಿದೆ. ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಸ್ಥಿರ ಠೇವಣಿಗಳ ಮೇಲೆ ಬ್ಯಾಂಕ್ ಶೇ .2.9 ರಿಂದ ಶೇ 5.4 ರವರೆಗೆ ಬಡ್ಡಿಯನ್ನು ನೀಡುತ್ತದೆ, ಆದರೆ ವೃದ್ಧರಿಗೆ ಶೇಕಡಾ 1ರಷ್ಟು ಅಂದರೆ 6.20 ರಷ್ಟು ಬಡ್ಡಿ ನೀಡಲಾಗುತ್ತಿದೆ.


ಇದನ್ನೂ ಓದಿ - 'ನೈಟ್ ಟೈಮ್ ATMನಿಂದ ಹಣ ಡ್ರಾ' ಮಾಡುವವರೇ ನಿಮಗೆ ತಿಳಿದಿರಲಿ ಈ ನಿಯಮ!


ಏನಿದು ಎಸ್‌ಬಿಐ ಡೋರ್‌ಸ್ಟೆಪ್ ಬ್ಯಾಂಕಿಂಗ್ ?
ಎಸ್‌ಬಿಐ ಡೋರ್‌ಸ್ಟೆಪ್ ಬ್ಯಾಂಕಿಂಗ್ (SBI Doorstep Banking) ಮೂಲಕ ಬ್ಯಾಂಕ್ ಗ್ರಾಹಕರು 10 ಕ್ಕೂ ಹೆಚ್ಚು ಸೌಲಭ್ಯಗಳಿಗಾಗಿ ಬ್ಯಾಂಕ್ ಉದ್ಯೋಗಿಗಳನ್ನು ಮನೆಗೆ ಕರೆಯಬಹುದು. ನಗದು ಠೇವಣಿ ಮತ್ತು ವಾಪಸಾತಿ, ಚೆಕ್ ಠೇವಣಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀವು ಮನೆಯಲ್ಲಿ ಕುಳಿತು ಪಡೆಯಬಹುದಾಗಿದೆ. ವೃದ್ಧರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಕೂಡ ಸಂಪೂರ್ಣ ಕಾಳಜಿ ವಹಿಸಲಾಗಿದೆ. ಪಿಂಚಣಿದಾರರು ಜೀವ ಪ್ರಮಾಣಪತ್ರಕ್ಕಾಗಿ ಬ್ಯಾಂಕಿಗೆ ಹೋಗಬೇಕಾಗಿಲ್ಲ. ಬದಲಿಗೆ ಬ್ಯಾಂಕೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಅರ್ಥಾತ್ ಬ್ಯಾಂಕಿನ ಉದ್ಯೋಗಿ ಒಬ್ಬರು ನಿಮ್ಮ ಮನೆಗೇ ಬಂದು ಈ ಕೆಳಗಿನ ಸೇವೆ ಒದಗಿಸಲಿದ್ದಾರೆ.


1-ನಗದು ಠೇವಣಿ
2-ನಗದು ಹಿಂತೆಗೆದುಕೊಳ್ಳುವಿಕೆ
3-ಚೆಕ್ ಠೇವಣಿ
4-ಚೆಕ್ ಪುಸ್ತಕ ಅಪ್ಲಿಕೇಶನ್
5-ಡ್ರಾಫ್ಟ್ ಹೋಂ ಡೆಲಿವರಿ
6-ಅವಧಿಯ ಠೇವಣಿಗಾಗಿ ಸಲಹೆ
7- ಮನೆಯಿಂದಲೇ ಕೆವೈಸಿ  ನವೀಕರಣ
8- ಯಾವುದೇ ಸಾಲಕ್ಕೆ ಸಂಬಂದಿಸಿದ ಮಾಹಿತಿ
9-ಆದಾಯ ತೆರಿಗೆ ಚಲನ್
10-ಮನೆಯಲ್ಲಿ ಪಿಂಚಣಿದಾರರಿಗೆ ಜೀವ ಪ್ರಮಾಣಪತ್ರ


ಇದನ್ನೂ ಓದಿ - Home Loan: ನೀವು ಕೂಡ ಮನೆ ಖರೀದಿಸಲು ಯೋಚಿಸುತ್ತಿದ್ದರೆ ತಡ ಮಾಡದಿರಿ, ಕೊನೆಗೊಳ್ಳಲಿದೆ ಈ ಕೊಡುಗೆ


ಡೋರ್‌ಸ್ಟೆಪ್ ಬ್ಯಾಂಕಿಂಗ್‌ಗೆ ನೋಂದಣಿ ಅಗತ್ಯವಿದೆ:
ನೀವು ಎಸ್‌ಬಿಐನ ಡೋರ್‌ಸ್ಟೆಪ್ ಬ್ಯಾಂಕಿಂಗ್‌ನ ಲಾಭವನ್ನು ಪಡೆಯಲು ಬಯಸಿದರೆ, ಮೊದಲು ನೀವು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಟೋಲ್ ಫ್ರೀ ಸಂಖ್ಯೆಗಳಾದ 1800-1037-188 ಮತ್ತು 1800-1213-721 ಕ್ಕೆ ಕರೆ ಮಾಡಬೇಕಾಗುತ್ತದೆ. ಕೆಲವು ಮೂಲಭೂತ ಮಾಹಿತಿಯನ್ನು ನಿಮ್ಮಿಂದ ಫೋನ್‌ನಲ್ಲಿ ತೆಗೆದುಕೊಳ್ಳಲಾಗುವುದು, ನಂತರ ನಿಮ್ಮನ್ನು ಡೋರ್‌ಸ್ಟೆಪ್ ಬ್ಯಾಂಕಿಂಗ್‌ಗೆ ನೋಂದಾಯಿಸಲಾಗುತ್ತದೆ.


ಡಿಎಸ್‌ಬಿ ಅಪ್ಲಿಕೇಶನ್ ಮೂಲಕವೂ ಅಪ್ಲೈ ಮಾಡಬಹುದು:
ಟೋಲ್-ಫ್ರೀ ಸಂಖ್ಯೆಯ ಹೊರತಾಗಿ, ಡೋರ್‌ಸ್ಟೆಪ್ ಬ್ಯಾಂಕಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಗ್ರಾಹಕರು ತಮ್ಮನ್ನು ಡಿಎಸ್‌ಬಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಅಪ್ಲಿಕೇಶನ್ ಅನ್ನು Google ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಇದಲ್ಲದೆ, www.psbdsb.in ಗೆ ಸಹ ಭೇಟಿ ನೀಡಬಹುದು. ಕೋಟ್ಯಂತರ ಎಸ್‌ಬಿಐ ಗ್ರಾಹಕರು ಈ ಸೌಲಭ್ಯದ ಮೂಲಕ ಮನೆಯಲ್ಲಿ ಕುಳಿತುಕೊಳ್ಳುವ ಕೆಲಸವನ್ನು ನಿಭಾಯಿಸಬಹುದು. ಇದು ಸಾಕಷ್ಟು ಸುರಕ್ಷಿತವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.