SBI Guideline: ಗರ್ಭಿಣಿ ಮಹಿಳೆಯರನ್ನು `ಅನ್ ಫಿಟ್` ಎಂದು ಕರೆದ ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್
SBI New Employee Guideline - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ, ಗರ್ಭಿಣಿ ಮಹಿಳೆಯರನ್ನು `ಅನ್ ಫಿಟ್ (ಅನರ್ಹರು)` ಎಂದು ಹೇಳುವ ಗೈಡ್ ಲೈನ್ ಇದೀಗ ಭಾರಿ ಗೊಂದಲಕ್ಕೆ ಕಾರಣವಾಗಿದೆ. ಸದ್ಯ ದೆಹಲಿಯ ಮಹಿಳಾ ಆಯೋಗ ಬ್ಯಾಂಕ್ ಗೆ ನೋಟಿಸ್ ಜಾರಿಗೊಳಿಸಿ ಉತ್ತರ ಕೋರಿದೆ.
ನವದೆಹಲಿ: State Bank Of India New Guideline - ಗರ್ಭಿಣಿಯರನ್ನು 'ಅಯೋಗ್ಯ' ಎಂದು ವಿವರಿಸುವ ಮಾರ್ಗಸೂಚಿಗಳಿಗೆ ಉತ್ತರ ಕೋರಿ ದೆಹಲಿ ಮಹಿಳಾ ಆಯೋಗವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೋಟಿಸ್ ಜಾರಿ ಮಾಡಿದೆ. ತನ್ನ ಹೊಸ ಮಾರ್ಗಸೂಚಿಯಲ್ಲಿ, SBI ಮೂರು ತಿಂಗಳಿಗಿಂತ ಹೆಚ್ಚು ಅವಧಿ ಪೂರೈಸಿರುವ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ವಿವರಿಸಿದೆ. ಈ ಮಾರ್ಗಸೂಚಿಗಳ ರಚನೆಯ ಹಿಂದಿನ ಪ್ರಕ್ರಿಯೆ ಮತ್ತು ಅವುಗಳನ್ನು ಅನುಮೋದಿಸಿದ ಅಧಿಕಾರಿಗಳ ಹೆಸರುಗಳನ್ನು ವಿವರಿಸಲು ಆಯೋಗವು ಎಸ್‌ಬಿಐಗೆ ಕೇಳಿದೆ.
ಬ್ಯಾಂಕ್ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಿದೆ
ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ, ಗರ್ಭಿಣಿ ಮಹಿಳಾ (Pregnant Women) ಅಭ್ಯರ್ಥಿಗಳ ನೇಮಕಾತಿ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮಗಳ ಅಡಿಯಲ್ಲಿ, ಹೊಸ ನೇಮಕಾತಿಯ ಸಂದರ್ಭದಲ್ಲಿ, ಮೂರು ತಿಂಗಳಿಗಿಂತ ಹೆಚ್ಚು ಗರ್ಭಿಣಿಯಾಗಿರುವ ಮಹಿಳಾ ಅಭ್ಯರ್ಥಿಗಳನ್ನು (Bank Employees) ತಾತ್ಕಾಲಿಕವಾಗಿ ಅನರ್ಹರು ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಆದಾಗ್ಯೂ, ಅವರು ಡೆಲಿವರಿ ಬಳಿಕ ನಾಲ್ಕು ತಿಂಗಳೊಳಗೆ ಬ್ಯಾಂಕ್ ಸೇರಬಹುದು. SBI, ತಾಜಾ ನೇಮಕಾತಿಗಳು ಅಥವಾ ಬಡ್ತಿಗಳಿಗಾಗಿ ತನ್ನ ಇತ್ತೀಚಿನ ವೈದ್ಯಕೀಯ ಫಿಟ್‌ನೆಸ್ ಮಾರ್ಗಸೂಚಿಗಳಲ್ಲಿ, ಮೂರು ತಿಂಗಳಿಗಿಂತ ಕಡಿಮೆ ಗರ್ಭಿಣಿಯಾಗಿರುವ ಮಹಿಳಾ ಅಭ್ಯರ್ಥಿಗಳನ್ನು ಫಿಟ್ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
Mutual Fund ಗಳನ್ನು ಸ್ಥಗಿತ ಮಾಡಲು Unit Holder ಗಳ ಅನುಮತಿ ಕಡ್ಡಾಯಗೊಳಿಸಿದ SEBI
ಈ ಧೋರಣೆ ತಾರತಮ್ಯದಿಂದ ಕೂಡಿದೆ ಎಂದ ಸ್ವಾತಿ ಮಾಲಿವಾಲ್
ದೆಹಲಿ ಮಹಿಳಾ ಆಯೋಗದ (Delhi Commission For Women) ಅಧ್ಯಕ್ಷೆ ಸ್ವಾತಿ ಮಾಲಿವಾಲ್ (Swati Maliwal) ಅವರು ಕೂಡ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನ ಈ ಧೋರಣೆ ತಾರತಮ್ಯ ಮತ್ತು ಕಾನೂನುಬಾಹಿರ ಧೋರಣೆಯಾಗಿದೆ, ಏಕೆಂದರೆ ಇದು ಕಾನೂನಿನ ಅಡಿಯಲ್ಲಿ ಒದಗಿಸಲಾದ ಹೆರಿಗೆ ಪ್ರಯೋಜನಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್ 31, 2021 ರಂದು ಬ್ಯಾಂಕ್ ನೀಡಿದ ಫಿಟ್‌ನೆಸ್ ಮಾನದಂಡಗಳ ಪ್ರಕಾರ, ಮೂರು ತಿಂಗಳಿಗಿಂತ ಹೆಚ್ಚು ಅವಧಿ ಪೂರೈಸಿರುವ ಗರ್ಭಿಣಿಯಾಗಿರುವ ಮಹಿಳಾ ಅಭ್ಯರ್ಥಿಯನ್ನು ತಾತ್ಕಾಲಿಕವಾಗಿ ಅನರ್ಹರೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಮಗುವಿನ ಜನನದ ನಂತರ ನಾಲ್ಕು ತಿಂಗಳೊಳಗೆ ಮತ್ತೆ ಕೆಲಸ ಸೇರಲು ಅನುಮತಿಸಬಹುದು.
SBI ನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ನೋಟಿಸ್‌ಗೆ ಮಂಗಳವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಮಹಿಳಾ ಆಯೋಗ ಎಸ್‌ಬಿಐಗೆ ಸೂಚಿಸಿದೆ. ನೋಟಿಸ್‌ನಲ್ಲಿ, ಮಾರ್ಗಸೂಚಿಗಳು ಮತ್ತು ನಿಯಮಗಳ ಪ್ರತಿಯನ್ನು ಸಲ್ಲಿಸುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ. ಇದರೊಂದಿಗೆ, ಈ ಮಾರ್ಗಸೂಚಿಗಳ ರಚನೆಯ ಹಿಂದಿನ ಪ್ರಕ್ರಿಯೆ ಮತ್ತು ಅವುಗಳನ್ನು ಅನುಮೋದಿಸಿದ ಅಧಿಕಾರಿಗಳ ಹೆಸರನ್ನು ಸಹ ನೀಡುವಂತೆ ಕೇಳಲಾಗಿದೆ.
ಇದನ್ನೂ ಓದಿ-Bank Account Rules: ಈ ತಪ್ಪುಗಳಾಗಿದ್ದರೆ ಕ್ಲೋಸ್ ಆಗಲಿದೆ ನಿಮ್ಮ ಅಕೌಂಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.