SBI Home Loan - ಒಂದು ವೇಳೆ ನೀವು ಅಗ್ಗದ ಗೃಹ ಸಾಲದ ಹುಡುಕಾಟದಲ್ಲಿದ್ದರೆ,  ನೀವು ಎಸ್‌ಬಿಐನಲ್ಲಿ ಉತ್ತಮ ಡೀಲ್ ಲಾಭ ಪಡೆಯಬಹುದು. ವಾಸ್ತವವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊಸ ಗ್ರಾಹಕರಿಗೆ ಗೃಹ ಸಾಲವನ್ನು ಶೇಕಡಾ 6.8 ರಷ್ಟು ಆರಂಭಿಕ ಬಡ್ಡಿದರದಲ್ಲಿ ನೀಡುತ್ತಿದೆ. ಎಸ್‌ಬಿಐ ಬ್ಯಾಂಕ್ ಅನುಮೋದಿಸಿದ ಯೋಜನೆಗಳಲ್ಲಿ, ಗ್ರಾಹಕರು ಯಾವುದೇ ಸಂಸ್ಕರಣಾ ಶುಲ್ಕವಿಲ್ಲದೆ (Processing Fees) ಮಾರ್ಚ್ 2021 ರವರೆಗೆ ಆರಂಭಿಕ  ಶೇಕಡಾ 6.8 ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದೆ. ಇದಕ್ಕಾಗಿ ಬ್ಯಾಂಕ್ 7208933140 ಮೊಬೈಲ್ ಸಂಖ್ಯೆಯನ್ನು ಜಾರಿಗೊಳಿಸಿದೆ. ಈ ನಂಬರ್ಗೆ ಮಿಸ್ಡ್ ಕಾಲ್ ನೀಡುವ ಮೂಲಕ, ಹೊಸ ಗ್ರಾಹಕರು ಗೃಹ ಸಾಲಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಕೊರೊನಾ ಮಹಾಮಾರಿಯ ಹಿನ್ನೆಲೆ ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್ ಡೌನ್ ಹೊರತಾಗಿಯೂ ಗೃಹಸಾಲ (Home Loan) ಕ್ಷೇತ್ರ ಬೆಳವಣಿಗೆ ಕಂಡಿದ್ದು, ಇನ್ನೊಂದೆಡೆ ಲಾಕ್ ಡೌನ್ ಕಾರಣ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದು SBI ಹೇಳಿದೆ. ಡಿಸೆಂಬರ್ 2020ರ ಹೋಲಿಕೆಯಲ್ಲಿ ಈ ತಿಂಗಳು SBI ಹೆಚ್ಚಿನ ಗೃಹಸಾಲಕ್ಕೆ ಆಮೊಡನೆ ನೀಡಿ, ಸಾಲ ಇತರಿಸಿದೆ ಮತ್ತು ಗ್ರೋಥ್ ಕೂಡ ಅತ್ಯಧಿಕವಾಗಿದೆ ಎಂದು ಬ್ಯಾಂಕ್ ಹೇಳಿದೆ.


5 ಲಕ್ಷ ಕೋಟಿ ಗುರಿದಾಟಿದ ಹೋಂ ಲೋನ್ ವ್ಯವಹಾರ
ಗೃಹ ಸಾಲ ವಿಭಾಗದಲ್ಲಿ ತನ್ನ ಮಾರುಕಟ್ಟೆ ಪಾಲು ಶೇ 34ರಷ್ಟಿದೆ  ಎಂದು ಎಸ್‌ಬಿಐ ಹೇಳಿದೆ. ಪ್ರತಿದಿನ ಸರಾಸರಿ 1000 ಗ್ರಾಹಕರು ಎಸ್‌ಬಿಐ ಸಾಲ ಪಡೆಯುತ್ತಿದ್ದಾರೆ. ಗೃಹ ಸಾಲ ವಿಭಾಗದಲ್ಲಿ ಎಸ್‌ಬಿಐ ಉನ್ನತ ಸ್ಥಾನವನ್ನು ಮುಂದುವರಿಸಿದೆ. ಬ್ಯಾಂಕಿನ ಗೃಹ ಸಾಲ ವ್ಯವಹಾರವು 5 ಲಕ್ಷ ಕೋಟಿ ರೂ. ಗಡಿ ದಾಟಿದೆ. ಆದರೆ, FY 2024 ರ ವೇಳೆಗೆ ಈ ಸಂಖ್ಯೆ 7 ಲಕ್ಷ ಕೋಟಿ ತಲುಪುವ ನಿರೀಕ್ಷೆ ಬ್ಯಾಂಕ್ ಹೊಂದಿದೆ. ಕಳೆದ 10 ವರ್ಷಗಳಲ್ಲಿ ಎಸ್‌ಬಿಐನ ರಿಯಲ್ ಎಸ್ಟೇಟ್ ಮತ್ತು ವಸತಿ ವ್ಯವಹಾರವು ಐದು ಪಟ್ಟು ಹೆಚ್ಚಾಗಿದೆ ಎಂದು ಬ್ಯಾಂಕ್ ಹೇಳಿದೆ. 2011 ರಲ್ಲಿ ವ್ಯಾಪಾರ 89,000 ಕೋಟಿ ರೂ. ಆಗಿದ್ದು, ಇದು 2021 ರಲ್ಲಿ 5 ಲಕ್ಷ ಕೋಟಿ ತಲುಪಿದೆ.


ಇದನ್ನು ಓದಿ- Home Loan : ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಟೈಮ್ ಸಿಗಲಿಕ್ಕಿಲ್ಲ.! ಯಾಕೆ ಗೊತ್ತಾ..?


ಕೈಗೆಟಕುವ ವಸತಿ ವಿಭಾಗದ ಮೇಲೆ ಗಮನ ಕೇಂದ್ರೀಕರಿಸಿದ ಬ್ಯಾಂಕ್
ಎಸ್‌ಬಿಐ ಕೈಗೆಟುಕುವ ವಸತಿ ವಿಭಾಗದ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ, ಅಂದರೆ ಗ್ರಾಹಕರು ಅಗ್ಗದ ಮನೆ ಹುಡುಕುತ್ತಿದ್ದಾರೆ. ಇದರ ಅಡಿಯಲ್ಲಿ, ಬ್ಯಾಂಕ್ ಗ್ರಾಹಕರಿಗೆ ಕಸ್ಟಮೈಸ್ ಮಾಡಿದ ಗೃಹ ಸಾಲವನ್ನು ಜನರ ಅಗತ್ಯಗಳಿಗೆ ಅನುಗುಣವಾಗಿ ಸಾಮಾನ್ಯ ಗೃಹ ಸಾಲವಾಗಿ ನೀಡುತ್ತಿದೆ. ಸರ್ಕಾರಿ ನೌಕರರಿಗೆ ಆದ್ಯತೆಯ ಗೃಹ ಸಾಲ, ಸೈನ್ಯ ಮತ್ತು ಭದ್ರತಾ ಪಡೆಗಳಿಗಾಗಿ ಎಸ್‌ಬಿಐ ಶೌರ್ಯ ಗೃಹ ಸಾಲ, ಎಸ್‌ಬಿಐ ಮ್ಯಾಕ್ಸ್‌ಜೆನ್ ಗೃಹ ಸಾಲ, ಎಸ್‌ಬಿಐಸ್ಮಾರ್ಟ್ ಮನೆ, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಟಾಪ್ಅಪ್ ಸಾಲ, ಎಸ್‌ಬಿಐ ಎನ್‌ಆರ್‌ಐ ಗೃಹ ಸಾಲ, ಹೆಚ್ಚಿನ ಮೊತ್ತದ ಸಾಲಕ್ಕಾಗಿ ಎಸ್‌ಬಿಐ ಫ್ಲೆಕ್ಸಿಪೇ ಗೃಹ ಸಾಲ ಮತ್ತು ಮಹಿಳೆಯರಿಗಾಗಿ ಎಸ್‌ಬಿಐ ಹರ್ ಘರ್ ಗೃಹ ಸಾಲ ಇತ್ಯಾದಿ ಇದರಲ್ಲಿ ಶಾಮೀಲಾಗಿವೆ. ಬ್ಯಾಂಕಿನ ಸ್ಥಿರ ಗಮನವು ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಸುಲಭ ಸಾಲ ಒದಗಿಸುವುದು ಮತ್ತು ಹೆಚ್ಚು ಹೆಚ್ಚು ಆಕರ್ಷಿಸುವುದು ಆಗಿದೆ.


ಇದನ್ನು ಓದಿ- ಇನ್ಮುಂದೆ ಗೃಹ ಸಾಲಕ್ಕೂ ಸಿಗಲಿದೆ Discount, ಈ ಕಂಪನಿ ಜೊತೆ SBI ಒಡಂಬಡಿಕೆ


PMAY ಗೆ ಸಿಗುತ್ತಿದೆ ಹೆಚ್ಚಿನ ಒತ್ತು
ಪ್ರಧಾನಿ ವಸತಿ ಯೋಜನೆ (PMAY) ಅಡಿಯಲ್ಲಿ ಎಸ್‌ಬಿಐ ಹೆಚ್ಚು ಹೆಚ್ಚು ಸಾಲಗಳನ್ನು ಮಂಜೂರು ಮಾಡುತ್ತಿದೆ. 2020 ರ ಡಿಸೆಂಬರ್ ವೇಳೆಗೆ ಪಿಎಂಎವೈ ಅಡಿಯಲ್ಲಿ 1,94,582 ಗೃಹ ಸಾಲಗಳನ್ನು ಮಂಜೂರು ಮಾಡಲಾಗಿದೆ. ಪಿಎಂಎವೈ ಸಬ್ಸಿಡಿ ಪಡೆಯಲು ಕೇಂದ್ರೀಯ ನೋಡಲ್ ಏಜೆನ್ಸಿಯಾಗಿ ನಗರ ವಸತಿ ಅಭಿವೃದ್ಧಿ ಸಚಿವಾಲಯ (MoHUA) ವಿನ್ಯಾಸಗೊಳಿಸಿದ ಏಕೈಕ ಬ್ಯಾಂಕ್ ಎಸ್‌ಬಿಐ ಆಗಿದೆ. ಎಸ್‌ಬಿಐನ ಗಮನವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು. ಎಐ, ಕ್ಲೌಡ್, ಬ್ಲಾಕ್‌ಚೇನ್, ಯಂತ್ರ ಕಲಿಕೆಯಂತಹ ತಂತ್ರಜ್ಞಾನವನ್ನು ಗೃಹ ಸಾಲ ವ್ಯವಹಾರಕ್ಕೆ ಬಳಸುವುದು ಮಾತ್ರವಲ್ಲದೆ ಇತರ ವ್ಯವಹಾರಗಳಿಗೂ ಅನ್ವಯಿಸುವ ಸಾಧ್ಯತೆಗಳನ್ನು ಬ್ಯಾಂಕ್ ಗಮನಿಸುತ್ತಿದೆ. 


ಇದನ್ನು ಓದಿ-SBIನ ಅಗ್ಗದ Home Loan ಜೊತೆಗೆ ಪಡೆಯಿರಿ ದುಪ್ಪಟ್ಟು ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.