SBI Loan Offers: ಎಸ್‌ಬಿಐ ಕಾರ್, ಗೋಲ್ಡ್ ಲೋನ್ನಲ್ಲಿ ಸಿಗುತ್ತಿದೆ ಬಂಪರ್ ಕೊಡುಗೆ
SBI Loan Offers: ಹಬ್ಬದ ಋತು ಆರಂಭವಾಗಿದೆ. ನೀವು ಕಾರು ಖರೀದಿಸಲು ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ, ಎಸ್‌ಬಿಐ ನಿಮಗಾಗಿ ಕೆಲವು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದು ನಿಮ್ಮ ಹಬ್ಬದ ಮೋಜನ್ನು ಹೆಚ್ಚಿಸಬಹುದು.
ನವದೆಹಲಿ: SBI Loan Offers- ಎಸ್‌ಬಿಐ ಗ್ರಾಹಕರಿಗೆ ಸಂತಸದ ಸುದ್ದಿ ಇದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ರಿಯಾಯಿತಿ ಬಡ್ಡಿ ದರಗಳು, ಸಾಲ ಸಂಸ್ಕರಣಾ ಶುಲ್ಕ ಸೇರಿದಂತೆ ಹಲವು ಬಂಪರ್ ಕೊಡುಗೆಗಳನ್ನು ಘೋಷಿಸಿದೆ.
ಎಸ್‌ಬಿಐ ಆಟೋ ಸಾಲದ ಕೊಡುಗೆಗಳು:
ಎಸ್‌ಬಿಐ ತನ್ನ ವಾಹನ ಸಾಲ ಗ್ರಾಹಕರಿಗೆ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುವುದಿಲ್ಲ ಮತ್ತು ಕಾರು ಸಾಲಗಳ ಮೇಲೆ ಆನ್-ರೋಡ್‌ಗೆ 90% ಫೈನಾನ್ಸ್ ಒದಗಿಸುವುದಾಗಿ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಇದಷ್ಟೇ ಅಲ್ಲ, ಬ್ಯಾಂಕಿನ ಯೋನೊ ಆಪ್ (YONO App) ಮೂಲಕ ಕಾರ್ ಲೋನ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು ಬಡ್ಡಿ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳ (0.25%) ವಿಶೇಷ ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ಯೋನೊ ಬಳಕೆದಾರರಿಗೆ ವರ್ಷಕ್ಕೆ 7.5% ಬಡ್ಡಿದರದಲ್ಲಿ ಕಾರು ಸಾಲಗಳನ್ನು ಒದಗಿಸಲಾಗುವುದು ಎಂದು SBI ತಿಳಿಸಿದೆ.
ಎಸ್‌ಬಿಐ ಗೋಲ್ಡ್ ಲೋನ್ ಆಫರ್:
ಇದಲ್ಲದೇ, ಚಿನ್ನದ ಸಾಲವನ್ನು (Gold Loan) ಪಡೆಯಲು ಬಯಸುವ ಗ್ರಾಹಕರು 7.5% ಬಡ್ಡಿದರದಲ್ಲಿ 75 ಬೇಸಿಸ್ ಪಾಯಿಂಟ್‌ಗಳ (0.75%) ರಿಯಾಯಿತಿಯನ್ನು ಪಡೆಯುತ್ತಾರೆ. ಗ್ರಾಹಕರು ಯೋನೊ ಆಪ್ ಮೂಲಕ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಅವರಿಗೆ ಸಂಸ್ಕರಣಾ ಶುಲ್ಕವನ್ನು ಸಹ ಮನ್ನಾ ಮಾಡಲಾಗುತ್ತದೆ. ಇದಲ್ಲದೆ ಎಸ್‌ಬಿಐ ತನ್ನ ಗ್ರಾಹಕರಿಗೆ ಗೃಹ ಸಾಲದ (Home Loan) ಮೇಲಿನ ಶುಲ್ಕದಿಂದಲೂ ಪರಿಹಾರವನ್ನು ನೀಡುತ್ತಿದೆ. ಬ್ಯಾಂಕ್ ತನ್ನ ಗೃಹ ಸಾಲದ ಗ್ರಾಹಕರು ಸಹ ಆಗಸ್ಟ್ 31, 2021 ರವರೆಗೆ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಘೋಷಿಸಿದೆ, ಎಸ್‌ಬಿಐನ ಗೃಹ ಸಾಲದ ಬಡ್ಡಿದರಗಳು ವಾರ್ಷಿಕ 6.7% ರಿಂದ ಆರಂಭವಾಗುತ್ತವೆ.
ಇದನ್ನೂ ಓದಿ- ಭಾರತೀಯ ಬಳಕೆದಾರರಿಗೆ ತಂದಿದೆ ಹೊಸ ಪಾವತಿ ಹಿನ್ನೆಲೆ ವೈಶಿಷ್ಟ್ಯ, ವಿಶೇಷತೆ ತಿಳಿಯಿರಿ
ವೈಯಕ್ತಿಕ ಸಾಲದ ಮೇಲೆ ರಿಯಾಯಿತಿ:
ವಾಹನ ಸಾಲ, ಗೃಹ ಸಾಲ (Home Loan), ಚಿನ್ನದ ಸಾಲದ ಹೊರತಾಗಿ, ಗ್ರಾಹಕರು ವೈಯಕ್ತಿಕ ಸಾಲ ಅಥವಾ ಪಿಂಚಣಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಅವರು ಕೂಡ ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲದೆ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಎಸ್‌ಬಿಐ ವಿಶೇಷ ಕೊಡುಗೆಯನ್ನು ನೀಡಿದೆ. ಅವರು ವೈಯಕ್ತಿಕ ಸಾಲಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿ ಶೀಘ್ರದಲ್ಲೇ ಕಾರು ಸಾಲಗಳು ಮತ್ತು ಚಿನ್ನದ ಸಾಲಗಳಿಗೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಸ್‌ಬಿಐ ವಿಶೇಷ ಠೇವಣಿ ಯೋಜನೆ:
ಎಸ್‌ಬಿಐ ತನ್ನ ಗ್ರಾಹಕರಿಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ವಿಶೇಷ ಠೇವಣಿ ಯೋಜನೆ ಎಸ್‌ಬಿಐ ಪ್ಲಾಟಿನಂ ಠೇವಣಿಗಳನ್ನು (SBI Platinum Deposits) ಆರಂಭಿಸಿದೆ. ಈ ಯೋಜನೆಯು ಸೀಮಿತ ಅವಧಿಯದ್ದಾಗಿದ್ದು, ಇದು ಸೆಪ್ಟೆಂಬರ್ 14 ರಂದು ಕೊನೆಗೊಳ್ಳುತ್ತದೆ. ಈ ಯೋಜನೆಯಡಿ, ಗ್ರಾಹಕರು ಹಣವನ್ನು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ನಿಗದಿಪಡಿಸಬಹುದು. ಅಲ್ಲದೆ, NRE ಮತ್ತು NRO ಅವಧಿ ಠೇವಣಿಗಳು ಸೇರಿದಂತೆ ದೇಶೀಯ ಚಿಲ್ಲರೆ ಅವಧಿ ಠೇವಣಿಗಳು (2 ಕೋಟಿಗಿಂತ ಕಡಿಮೆ) ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದರ ಅಡಿಯಲ್ಲಿ, ಹೊಸ ಮತ್ತು ನವೀಕರಣ ಠೇವಣಿಗಳನ್ನು ಸಹ ಮಾಡಬಹುದು. ಇದನ್ನು ಹೊರತುಪಡಿಸಿ, ಕೇವಲ ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿ ಸೌಲಭ್ಯವು ಲಭ್ಯವಿರುತ್ತದೆ. NRE ಠೇವಣಿಗಳು 525 ಮತ್ತು 2250 ದಿನಗಳವರೆಗೆ ಮಾತ್ರ ಲಭ್ಯವಿರಲಿದೆ.
ಇದನ್ನೂ ಓದಿ- LIC's Superhit Policy: ಕೇವಲ 233 ರೂ. ಹೂಡಿಕೆ ಮಾಡಿ 17 ಲಕ್ಷ ಪಡೆಯಿರಿ
ಬ್ಯಾಂಕಿನ ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥಾಪಕ ನಿರ್ದೇಶಕ ಸಿಎಸ್ ಸೆಟ್ಟಿ, ಪತ್ರಿಕಾ ಪ್ರಕಟಣೆಯಲ್ಲಿ, "ಈ ಕೊಡುಗೆಗಳು ಗ್ರಾಹಕರು ತಮ್ಮ ಸಾಲದಲ್ಲಿ ಹೆಚ್ಚು ಉಳಿಸಲು ಸಹಾಯ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ಅವರ ಹಬ್ಬದ ಮೋಜನ್ನು ದ್ವಿಗುಣಗೊಳಿಸಲಿದೆ ಎಂದು ನಾವು ನಂಬುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ