SBI New Toll Free : ಎಸ್‌ಬಿಐ ಗ್ರಾಹಕರಿಗೆ ಸಂತಸದ ಸುದ್ದಿ.  ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ವತಿಯಿಂದ ನಿರಂತರ ಸೇವೆ ನೀಡಲಾಗುತ್ತಿದೆ. ಇದೀಗ ಎಸ್‌ಬಿಐ ತನ್ನ ಗ್ರಾಹಕರಿಗೆ ಹೊಸ ಸೇವೆಯನ್ನು ಆರಂಭಿಸಿದೆ. ಇನ್ನು ಬ್ಯಾಂಕಿಂಗ್ ಸೇವೆಗಾಗಿ ಶಾಖೆಗೆ ಹೋಗಬೇಕಾಗಿಲ್ಲ. 


COMMERCIAL BREAK
SCROLL TO CONTINUE READING

ಶನಿವಾರ ಮತ್ತು ಭಾನುವಾರವೂ ಇರಲಿದೆ ಈ ಸೌಲಭ್ಯ : 
ಬ್ಯಾಂಕ್ ಆರಂಭಿಸಿರುವ ಹೊಸ ಸೇವೆಯ ಅಡಿಯಲ್ಲಿ, ಫೋನ್‌ನಲ್ಲಿ ಅನೇಕ ಪ್ರಮುಖ ಸೌಲಭ್ಯಗಳನ್ನು ನೀಡಲಾಗಿದೆ. SBI ಇತ್ತೀಚೆಗೆ ನೀಡಿದ ಎರಡು ಹೊಸ ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಫೋನ್‌ನಲ್ಲಿ ಬ್ಯಾಂಕಿಂಗ್ ಸೇವೆಯ ಲಾಭವನ್ನು ಪಡೆಯಬಹುದು. ಅಷ್ಟೇ ಅಲ್ಲ, ಶನಿವಾರ ಮತ್ತು ಭಾನುವಾರವೂ ಈ ಸೇವೆ ಲಭ್ಯವಿರಲಿದೆ. 


ಇದನ್ನೂ ಓದಿ : Changes In Voter ID: ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಸುಲಭ ವಿಧಾನ


SBI ತನ್ನ ಅಧಿಕೃತ ಟ್ವಿಟರ್ ಖಾತೆ ಮತ್ತು ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. SBI ಸಂಪರ್ಕ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1800-1234 ಅಥವಾ 1800-2100 ಗೆ ಕರೆ ಮಾಡುವ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಪಡೆದುಕೊಳ್ಳಬಹುದು. ಈ ಟೋಲ್ ಫ್ರೀ ಸಂಖ್ಯೆಗಳು ಎಲ್ಲಾ ಸ್ಥಿರ ದೂರವಾಣಿಗಳು ಮತ್ತು ಮೊಬೈಲ್ ಫೋನ್‌ ಗಳಿಗೂ ಲಭ್ಯವಿರಲಿದೆ. 
ಈ ಸಂಖ್ಯೆಗಳಲ್ಲಿ, ಬ್ಯಾಂಕ್ ಗ್ರಾಹಕರಿಗೆ ಐದು ರೀತಿಯ ಸೇವೆಗಳನ್ನು ನೀಡುತ್ತಿದೆ.


24x7 ಸಿಗಲಿದೆ ಈ ಸೇವೆಗಳು  : 
1.ಅಕೌಂಟ್ ಬ್ಯಾಲೆನ್ಸ್ ಮತ್ತು ಕಳೆದ ಐದು ವಹಿವಾಟುಗಳ ವಿವರ 
2.ಎಟಿಎಂ ಕಾರ್ಡ್ ಬ್ಲಾಕ್ ಜೊತೆಗೆ ಡಿಸ್ಪಾಚ್ ಸ್ಟೇಟಸ್ 
3.ಚೆಕ್ ಬುಕ್ ಡಿಸ್ಪಾಚ್  ಸ್ಟೇಟಸ್ 
4. ಉಳಿತಾಯದ ಮೇಲಿನ ಬಡ್ಡಿ ಮತ್ತು ಟಿಡಿಎಸ್ ಬಗ್ಗೆ ಇ ಮೇಲ್ ನಲ್ಲಿ ಮಾಹಿತಿ 
5. ಎಟಿಎಂ ಕಾರ್ಡ್ ಬ್ಲಾಕ್  ಆಗಿದ್ದರೆ ಹೊಸ ಕಾರ್ಡ್ ಗೆ ರಿಕ್ವೆಸ್ಟ್ 


ಇದನ್ನೂ ಓದಿ : Train Ticket Booking Tips: ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಈ ಕೆಲಸ ಮಾಡಿದರೆ ಸಿಗುತ್ತೆ ಕನ್ಫರ್ಮ್ ಟಿಕೆಟ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.