SBIನಲ್ಲಿ ಖಾತೆ ಇದ್ದರೆ ಕೇವಲ ರೂ.342 ಡಿಪಾಸಿಟ್ ಮಾಡಿ, 4 ಲಕ್ಷ ರೂ.ಗಳ ಬಂಪರ್ ಲಾಭ ಪಡೆಯಿರಿ
Life And Accidental Insurance Schemes - ಉಳಿತಾಯ ಬ್ಯಾಂಕ್ ಖಾತೆದಾರರಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಪ್ರೀಮಿಯಂ ಕಡಿತಗೊಳಿಸಲಾಗುವುದು ಎಂದು ಎಸ್‌ಬಿಐ ಹೇಳಿದೆ. ಒಬ್ಬ ವ್ಯಕ್ತಿಯು ಕೇವಲ ಒಂದು ಉಳಿತಾಯ ಬ್ಯಾಂಕ್ ಖಾತೆಯ ಮೂಲಕ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ.
ನವದೆಹಲಿ: Life And Accidental Insurance Schemes - ಕರೋನಾ ವೈರಸ್‌ನ ನಂತರ, ಜನರು ವಿಮೆಯ ಬಗ್ಗೆ ಹೆಚ್ಚಿನ ಆಸಕ್ತಿ ತೊತೊರುತ್ತಿದ್ದಾರೆ. ಜೀವನದ ಅಸ್ಥಿರತೆಯಲ್ಲಿ ವಿಮೆಯ ಮಹತ್ವವನ್ನು ಜನರು ಈಗ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಸಮಾಜದ ಪ್ರತಿಯೊಂದು ವಿಭಾಗವನ್ನು ತಲುಪಲು ಸರ್ಕಾರವು ಕಡಿಮೆ ಹಣಕ್ಕೆ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಈ ಅನುಕ್ರಮಣಿಕೆಯಲ್ಲಿ, ಸರ್ಕಾರದ ಯೋಜನೆಗಳು, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY)ಗಳು ಇವೆ. ಇವುಗಳಲ್ಲಿ ನಿಮಗೆ 4 ಲಕ್ಷ ರೂ. ವರೆಗೆ ವಿಮಾ ರಕ್ಷಣೆ ಸಿಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದಕ್ಕಾಗಿ ನೀವು ಕೇವಲ 342 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಅಷ್ಟೇ.
SBI) ಈ ಎರಡು ಯೋಜನೆಗಳ ಬಗ್ಗೆ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಈ ಟ್ವೀಟ್‌ನಲ್ಲಿ ಎಸ್‌ಬಿಐ, 'ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿಮೆ ಮಾಡಿಸಿ ಮತ್ತು ಚಿಂತೆಯಿಲ್ಲದ ಜೀವನ ನಡೆಸಿ. ಉಳಿತಾಯ ಬ್ಯಾಂಕ್ ಖಾತೆದಾರರಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಪ್ರೀಮಿಯಂ ಕಡಿತಗೊಳ್ಳುತ್ತದೆ. ವ್ಯಕ್ತಿಯು ಕೇವಲ ಒಂದೇ ಉಳಿತಾಯ ಬ್ಯಾಂಕ್ ಖಾತೆಯ ಮೂಲಕ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ' ಎಂದು ಹೇಳಿದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY)
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, ಅಪಘಾತದಲ್ಲಿ ವಿಮೆ ಮಾಡಿದವರ ಸಾವು ಅಥವಾ ಸಂಪೂರ್ಣವಾಗಿ ಅಂಗವಿಕಲರಾದರೆ, ರೂ 2 ಲಕ್ಷ ಪರಿಹಾರ ಲಭ್ಯವಿದೆ ಎಂಬುದು ಇಲ್ಲಿ ವಿಶೇಷ. ಈ ಯೋಜನೆಯಡಿಯಲ್ಲಿ, ವಿಮಾದಾರರು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ, ಅವರು 1 ಲಕ್ಷ ರೂ. ಸಿಗುತ್ತದೆ. ಇದರಲ್ಲಿ, 18 ರಿಂದ 70 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ರಕ್ಷಣೆ ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೂಡ ಕೇವಲ 12 ರೂ. ಆಗಿದೆ.
ಇದನ್ನೂ ಓದಿ-PPF ಖಾತೆಯಲ್ಲಿ ಲಭ್ಯವಿದೆ ಹೆಚ್ಚಿನ ಬಡ್ಡಿ : ಅನುಸರಿಸಿ ಈ ಸಿಂಪಲ್ ಟ್ರಿಕ್ಸ್
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ (PMJJBY)
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿಯೂ ಕೂಡ ನಾಮಿನಿಗೆ ವಿಮಾದಾರನ ಸಾವಿನ ನಂತರ 2 ಲಕ್ಷ ರೂ. ರಕ್ಷಣೆ ಸಿಗುತ್ತದೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಗೆ ನೀವು ಕೇವಲ ರೂ .330 ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಇವೆರಡೂ ಪಾಲಸಿಗಳು ಟರ್ಮ್ ಪಾಲಸಿಗಳಾಗಿವೆ (Term Policy).
ಇದನ್ನೂ ಓದಿ - LICಯ ಈ ಯೋಜನೆಯಲ್ಲಿ ಕೇವಲ 1 ರೂ.ಗೆ ಒಂದು ಕೋಟಿ ಲಾಭ!: ಸಂಪೂರ್ಣ ವಿವರ ಇಲ್ಲಿದೆ
ಜೂನ್ 1 ರಿಂದ ಮೇ 31ರವರೆಗೆ ವಿಮಾ ರಕ್ಷಣೆ
ಈ ವಿಮಾ ರಕ್ಷಣೆಯು ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ. ಇದಕ್ಕಾಗಿ ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಪ್ರೀಮಿಯಂ ಕಡಿತದ ಸಮಯದಲ್ಲಿ ಬ್ಯಾಂಕ್ ಖಾತೆ ಬಂದ್ ಆಗಿರುವುದು ಅಥವಾ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು, ವಿಮೆಯನ್ನು ಸಹ ರದ್ದುಗೊಳಿಸಬಹುದು. ಆದ್ದರಿಂದ, ವಿಮೆಯನ್ನು ತೆಗೆದುಕೊಳ್ಳುವ ಮೊದಲು, ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವುದು ತುಂಬಾ ಮುಖ್ಯ.
ಇದನ್ನೂ ಓದಿ-Xpulse 200 4V Teaser: ಶೀಘ್ರದಲ್ಲಿಯೇ Hero ಬಿಡುಗಡೆ ಮಾಡಲಿದೆ Adventure Touring Motorcycle
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.