Bank Locker Charges: ಲಾಕರ್ ಬಾಡಿಗೆ ಹೆಚ್ಚಿಸಿದ ಎಸ್‌ಬಿಐ, ಪಿಎನ್‌ಬಿ, ಈಗ ಎಷ್ಟು ಹಣ ಪಾವತಿಸಬೇಕು ಗೊತ್ತಾ?
Bank Locker Charges: ಬೆಲೆ ಬಾಳುವ ದಾಖಲೆ, ವಸ್ತುಗಳನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್ ಲಾಕರ್ ತುಂಬಾ ಪ್ರಯೋಜನಕಾರಿ ಆಗಿದೆ. ಬ್ಯಾಂಕ್ ಲಾಕರ್ ನೋಂದಣಿ ಮತ್ತು ಶುಲ್ಕ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು.
Bank Locker Charges: ನಿಮ್ಮ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಲು ನೀವು ಬ್ಯಾಂಕ್ ಲಾಕರ್ ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಪ್ರಮುಖವಾಗಿದೆ. ದೇಶದ ಪ್ರಸಿದ್ದ ಎಸ್‌ಬಿಐ, ಪಿಎನ್‌ಬಿ ಬ್ಯಾಂಕ್‌ಗಳು ನವೆಂಬರ್‌ನಿಂದ ಜಾರಿಗೆ ಬರುವಂತೆ ಬ್ಯಾಂಕ್ ಲಾಕರ್ ಶುಲ್ಕವನ್ನು ಪರಿಷ್ಕರಿಸಿದ್ದು, ಹೊಸ ಬದಲಾವಣೆ ನಂತರ ಬ್ಯಾಂಕ್ ಲಾಕರ್ ಬಾಡಿಗೆ ಎಷ್ಟು ಬದಲಾಗಿದೆ ಎಂದು ತಿಳಿಯಲು ಮುಂದೆ ಓದಿ.
ಬ್ಯಾಂಕ್ ಲಾಕರ್ ಶುಲ್ಕ ಹೆಚ್ಚಳ:
ನವೆಂಬರ್‌ನಿಂದ ಬ್ಯಾಂಕ್ ಲಾಕರ್ ಶುಲ್ಕವನ್ನು ಕೆಲವು ಬ್ಯಾಂಕ್‌ಗಳು ಹೆಚ್ಚಿಸಿವೆ. ಬ್ಯಾಂಕ್ ಲಾಕರ್ ನೋಂದಣಿ ಮತ್ತು ಶುಲ್ಕ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು. ಆದಾಗ್ಯೂ, ಲಾಕರ್ ನ ಗಾತ್ರ, ಶಾಖೆ (ಮೆಟ್ರೊ ನಗರ, ಅರೆ-ನಗರ, ಗ್ರಾಮೀಣ) ಸ್ಥಳವನ್ನು ಇದು ಅವಲಂಬಿಸಿರುತ್ತದೆ.
ಇದನ್ನೂ ಓದಿ- ಎಸ್‌ಬಿಐನ ಇಂತಹ ಸೇವಿಂಗ್ಸ್ ಖಾತೆಯಲ್ಲಿ Zero Balanceಗೂ ಬೀಳಲ್ಲ ದಂಡ, ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಎಸ್‌ಬಿಐ ಲಾಕರ್ ಶುಲ್ಕ:
ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಕರ್ ಶುಲ್ಕವನ್ನು ಪರಿಷ್ಕರಿಸಿದೆ.
ಲಾಕರ್ ಗಾತ್ರ | ಗ್ರಾಮೀಣ ಭಾಗಗಳಲ್ಲಿ ಶುಲ್ಕ | ಮೆಟ್ರೊ/ಅರೆನಗರಗಳಲ್ಲಿ ಶುಲ್ಕ |
ಸಣ್ಣಲಾಕರ್ | 1500 ರೂ. | 2000ರೂ. |
ಮಧ್ಯಮ ಲಾಕರ್ | 3000 ರೂ. | 4000ರೂ. |
ದೊಡ್ಡ ಲಾಕರ್ | 6000ರೂ | 8000 ರೂ. |
ಅತಿ ದೊಡ್ಡ ಲಾಕರ್ | 9000 ರೂ. | 12,000 ರೂ. |
ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಲಾಕರ್ ಶುಲ್ಕವನ್ನು ಪರಿಷ್ಕರಿಸಿದೆ.
ಲಾಕರ್ ಗಾತ್ರ | ಪರಿಷ್ಕೃತ ಶುಲ್ಕ |
ಸಣ್ಣಲಾಕರ್ | 2000 ರೂ. |
ಮೀಡಿಯಂ ಲಾಕರ್ | 3500 ರೂ. |
ಲಾರ್ಜ್ ಲಾಕರ್ | 5500 ರೂ. |
ಅತಿ ದೊಡ್ಡ ಲಾಕರ್ | 8000 ರೂ. |
ಎಕ್ಸ್ಟ್ರಾ ಲಾರ್ಜ್ ಲಾಕರ್ | 10,000 ರೂ. |
ಇದನ್ನೂ ಓದಿ- ಭಾರತದ 7 ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಬ್ಯಾಂಕ್ ಲಾಕರ್ ಕೊಳ್ಳುವ ಗ್ರಾಹಕರು ಲಾಕರ್‌ಗೆ ನೋಂದಣಿ ಶುಲ್ಕದ ಜೊತೆಗೆ 18% ಜಿಎಸ್‌ಟಿಯನ್ನು ಕೂಡ ಪಾವತಿಸಬೇಕಾಗುತ್ತದೆ. ಇದಲ್ಲದೆ, ಲಾಕರ್ ಬಳಕೆಗಾಗಿ ವರ್ಷದಲ್ಲಿ ನಿಗದಿತ ಮಿತಿಯಲ್ಲಿ ಬ್ಯಾಂಕ್ ಭೇಟಿಗೆ ಯಾವುದೇ ಶುಲ್ಕ ಇರುವುದಿಲ್ಲ. ಮಿತಿಗಿಂತ ಹೆಚ್ಚಿನ ಬಾರಿ ಲಾಕರ್ ಬಳಸಲು ಪ್ರತ್ಯೇಕ ಶುಲ್ಕ+ಜಿಎಸ್‌ಟಿ ಅನ್ನು ಪಾವತಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.