SBI New Rule: ಒಂದು ವೇಳೆ ನೀವೂ ಕೂಡ ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗಾಗಿ. ಗ್ರಾಹಕರ ಖಾತೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ತನ್ನ ಮಹತ್ವದ ನಿಯಮವೊಂದರಲ್ಲಿ ಬದಲಾವಣೆ ಮಾಡಿದೆ. ಈ ಬದಲಾವಣೆಯ ಅಡಿಯಲ್ಲಿ SBI YONO ಅಪ್ಲಿಕೇಶನ್‌ನಲ್ಲಿ (SBI YONO), ಇನ್ಮುಂದೆ ಗ್ರಾಹಕರು ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಫೋನ್‌ನಿಂದ ಮಾತ್ರ ಲಾಗ್ ಇನ್ ಮಾಡಲು ಸಾಧ್ಯವಾಗಲಿದೆ. ಅಂದರೆ, ಇನ್ಮುಂದೆ ಇತರ ಯಾವುದೇ ಮೊಬೈಲ್ ಸಂಖ್ಯೆಯನ್ನು ಹೊದಿರುವ ಮೊಬೈಲ್ ಫೋನ್ ನಿಂದ ಈ ಸೇವೆಯನ್ನು ಬಳಸಲು ಸಾಧ್ಯವಿಲ್ಲ. ಆನ್ಲೈನ್ ಬ್ಯಾಂಕಿಂಗ್ ಫ್ರಾಡ್ ನಿಂದ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ಬ್ಯಾಂಕ್ ಈ ಹೆಜ್ಜೆಯನ್ನಿಟ್ಟಿದೆ. ಈ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

ಆನ್ಲೈನ್ ಬ್ಯಾಂಕಿಂಗ್ ಫ್ರಾಡ್ ನಿಂದ ರಕ್ಷಣೆ
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹಲವು ಸೌಲಭ್ಯಗಳನ್ನು ಒದಗಿಸುತ್ತಲೇ ಇರುತ್ತದೆ. ಹೆಚ್ಚುತ್ತಿರುವ ಆನ್‌ಲೈನ್ ವಂಚನೆಯ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕ್ ಈ ಹೊಸ ಅಪ್‌ಗ್ರೇಡ್ ಅನ್ನು YONO ಅಪ್ಲಿಕೇಶನ್‌ನಲ್ಲಿ ಮಾಡಿದೆ. ಇದರೊಂದಿಗೆ, ಗ್ರಾಹಕರು ಸುರಕ್ಷಿತ ಬ್ಯಾಂಕಿಂಗ್ ಅನುಭವವನ್ನು ಪಡೆಯಲಿದ್ದಾರೆ ಮತ್ತು ಆನ್ಲೈನ್ ವಂಚನೆಯಿಂದ ಪಾರಾಗಲಿದ್ದಾರೆ. ಅಷ್ಟೇ ಅಲ್ಲ ಗ್ರಾಹಕರ ಖಾತೆಯ ಭದ್ರತೆಯೂ ಕೂಡ ಇದರಿಂದ ಹೆಚ್ಚಾಗಲಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಖಾತೆಗೆ ಬಂತು ಡಿಎ ಬಾಕಿ ಹಣ, ಈಗಲೇ ಖಾತೆ ಪರಿಶೀಲಿಸಿ

ಬ್ಯಾಂಕ್ ನೀಡಿದ ಮಾಹಿತಿ ಇದು
ಈ ಕುರಿತು ಈ ಮೊದಲೇ ಮಾಹಿತಿಯನ್ನು ನೀಡಿದ್ದ ಬ್ಯಾಂಕ್, ಹೊಸ ನೋಂದಣಿಗಾಗಿ ಗ್ರಾಹಕರು ಕೇವಲ ಬ್ಯಾಂಕ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಮಾತ್ರ ಬಳಸಬೇಕು ಎಂಬ ಮಾಹಿತಿಯನ್ನು ನೀಡಿತ್ತು. ಅಂದರೆ, ಎಸ್ಬಿಐ ಯೋನೋ ಖಾತೆದಾರರು ಬೇರೆ ಯಾವುದೇ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಲು ಪ್ರಯತ್ನ ನಡೆಸಿದರೆ, ಯಾವುದೇ ವಹಿವಾಟನ್ನು ನಡೆಸಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿತ್ತು. ಅಂದರೆ, ಅಪ್ಪಿ-ತಪ್ಪಿಯೂ ಕೂಡ ಇನ್ಮುಂದೆ ಯಾರು ನಿಮ್ಮ ಖಾತೆಗೆ ಕನ್ನಹಾಕುವ ಪ್ರಯತ್ನ ನಡೆಸುವಂತಿಲ್ಲ ಎಂದರ್ಥ. 


ಇದನ್ನೂ ಓದಿ-Good News: ಬ್ಯಾಂಕ್ ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಫೋನ್ ನಂಬರ್ ಗೂ ಕೂಡ ನಿಯಮ ಮಾಡಿದ ಬ್ಯಾಂಕ್
ಇದಲ್ಲದೆ ಫೋನ್ ನಂಬರ್ ಗೂ ಕೂಡ ಬ್ಯಾಂಕ್ ಹೊಸ ನಿಯಮವನ್ನು ರೂಪಿಸಿದೆ. ಈ ಹೊಸ ನಿಯಮದ ಅಡಿ ನೀವು ಯಾವುದೇ ಫೋನ್ ನಂಬರ್ ಮೂಲಕ ಲಾಗಿನ್ ಮಾಡುವಂತಿಲ್ಲ. ಈ ಮೊದಲು ಗ್ರಾಹಕರು ಯಾವುದೇ ಫೋನ್ ನಿಂದ ಲಾಗಿನ್ ಮಾಡಬಹುದಾಗಿತ್ತು. ಇನ್ಮುಂದೆ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆ ಯಾವ ಮೊಬೈಲ್ ನಲ್ಲಿರಲಿದೆಯೋ, ಅದೇ ಮೊಬೈಲ್ ನಿಂದ ನೀವು ಲಾಗಿನ್ ಮಾಡಿ ಸೇವೆಗಳನ್ನು ಪಡೆಯಬಹುದು. ತನ್ಮೂಲಕ ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುವ ಕುರಿತು ಬ್ಯಾಂಕ್ ಹೇಳಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.