SBI Update! ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದ ಎಸ್ಬಿಐ
State Bank of India: ಒಂದು ವೇಳೆ ನೀವೂ ಕೂಡ ಸಾಲ ಪಡೆದುಕೊಂಡಿದ್ದರೆ ಅಥವಾ ಸಾಲ ಪಡೆಯಲು ಯೋಜನೆ ರೂಪಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಏಕೆಂದರೆ, ಸಾಲದ ಮೇಲಿನ ನಿಮ್ಮ ಮಾಸಿಕ ಕಂತು ಹೆಚ್ಚಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಮ್ಮೆ ತನ್ನ ಎಂಸಿಎಲ್ಆರ್ ದರವನ್ನು ಹೆಚ್ಚಿಸಿದೆ.
State Bank of India MCLR Rates: ಸಾರ್ವಜನಿಕ ವಲಯದ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮತ್ತೊಮ್ಮೆ ದೊಡ್ಡ ಶಾಕ್ ನೀಡಿದೆ. ಹೌದು, ನೀವೂ ಸಾಲವನ್ನು ತೆಗೆದುಕೊಂಡಿದ್ದರೆ ಅಥವಾ ಅದನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ನಿಮ್ಮ EMI ಮತ್ತಷ್ಟು ದುಬಾರಿಯಾಗಲಿದೆ. ಏಕೆಂದರೆ, ಬ್ಯಾಂಕ್ ಮತ್ತೊಮ್ಮೆ ಎಂಸಿಎಲ್ಆರ್ ದರವನ್ನು ಹೆಚ್ಚಿಸಿದೆ. ಹೊಸ ದರಗಳು ಮೇ 15 ರಿಂದ ಅಂದರೆ ಭಾನುವಾರದಿಂದ ಜಾರಿಗೆ ಬಂದಿವೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
10 ಬೇಸಿಸ್ ಪಾಯಿಂಟ್ ಹೆಚ್ಚಳ
ಸತತ ಎರಡನೇ ಬಾರಿಗೆ ಬ್ಯಾಂಕ್ ತನ್ನ MCLR ಅನ್ನು ಹೆಚ್ಚಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಬಾರಿ ಬ್ಯಾಂಕ್ ತನ್ನ ಎಂಸಿಎಲ್ಆರ್ ನಲ್ಲಿ 10 ಬೇಸಿಸ್ ಪಾಯಿಂಟ್ ಅಂದರೆ ಶೇ.0.10ರಷ್ಟು ವೃದ್ಧಿಮಾಡಿದೆ. ಎಲ್ಲಾ ಅವಧಿಯ ಸಾಲಗಳಿಗೆ ಈ ಹೆಚ್ಚಳ ಅನ್ವಯಿಸಲಿದೆ.
ಹೊಸ ದರಗಳು ಇಂತಿವೆ
>> ಎಸ್‌ಬಿಐನ ಒಂದು ರಾತ್ರಿಯ, ಒಂದು ತಿಂಗಳು, 3 ತಿಂಗಳ ಸಾಲಕ್ಕೆ ಎಂಸಿಎಲ್‌ಆರ್ ಶೇಕಡಾ 6.75 ರಿಂದ ಶೇಕಡಾ 6.85 ಕ್ಕೆ ಏರಿಕೆಯಾಗಿದೆ.
>> 6 ತಿಂಗಳ ಸಾಲಕ್ಕೆ ಎಂಸಿಎಲ್‌ಆರ್ ಶೇ 7.15ಕ್ಕೆ ಏರಿಕೆಯಾಗಿದೆ.
>> ಇದಲ್ಲದೇ 1 ವರ್ಷದ ಸಾಲದ ಮೇಲೆ ಎಂಸಿಎಲ್‌ಆರ್ ಶೇ.7.20ಕ್ಕೆ ಏರಿಕೆಯಾಗಿದೆ.
>> 2 ವರ್ಷಗಳ ಅವಧಿಯ ಸಾಲದ ಮೇಲೆ ಎಂಸಿಎಲ್ಆರ್ ಶೇಕಡಾ 7.40 ಆಗಿದೆ.
>> ಇದೇ ವೇಳೆ 3 ವರ್ಷಗಳ ಅವಧಿಯ ಸಾಲದ ಮೇಲೆ ಎಂಸಿಎಲ್ಆರ್ ಶೇಕಡಾ 7.50 ಕ್ಕೆ ಏರಿಕೆಯಾಗಿದೆ.
ಯಾವ ಗ್ರಾಹಕರು ಇದು ಪರಿಣಾಮ ಬೀರಲಿದೆ?
ಬ್ಯಾಂಕ್ ತೆಗೆದುಕೊಂಡ ಈ ನಿರ್ಧಾರವು ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆದಿರುವ ಎಲ್ಲ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ. ನೀವೂ ಸಾಲ ಪಡೆದಿದ್ದರೆ ಇಂದಿನಿಂದ ನೀವು ಹೆಚ್ಚಿನ ಇಎಂಐ ಕಟ್ಟಬೇಕಾಗಲಿದೆ.
ಇದನ್ನೂ ಓದಿ-ಎಸಿಯಂತೆ ಗೋಡೆಯ ಮೇಲೆ ಅಳವಡಿಸಬಹುದಾದ ಕೂಲರ್; ಕಡಿಮೆ ವಿದ್ಯುತ್ ನಲ್ಲಿ ಮಾಡುತ್ತದೆ ಸೂಪರ್ ಕೂಲಿಂಗ್
ಏಪ್ರಿಲ್ ಮೊದಲ ತಿಂಗಳಲ್ಲೂ ಏರಿಕೆಯಾಗಿದೆ
ಈ ಹಿಂದೆ ಬ್ಯಾಂಕ್ ಏಪ್ರಿಲ್ ತಿಂಗಳಲ್ಲಿ ತನ್ನ MCLR ದರಗಳನ್ನು ಹೆಚ್ಚಿಸಿತ್ತುಎಂಬುದು ಇಲ್ಲಿ ಗಮನಾರ್ಹ. 2019 ರಿಂದ, ಗೃಹ ಸಾಲಗಳ ಸಾಲದ ದರಗಳು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಇತ್ತೀಚೆಗೆ, ಮೇ 4 ರಂದು, ಆರ್‌ಬಿಐ ಇದ್ದಕ್ಕಿದ್ದಂತೆ ತನ್ನ ರೆಪೊ ದರಗಳನ್ನು ಹೆಚ್ಚಿಸಿದೆ, ನಂತರ ಎಲ್ಲಾ ಬ್ಯಾಂಕ್‌ಗಳ ಸಾಲಗಳು ದುಬಾರಿಯಾಗಿವೆ. ಆರ್‌ಬಿಐ ರೆಪೊ ದರಗಳನ್ನು ಹೆಚ್ಚಿಸಿದ ನಂತರ, ಎಲ್ಲಾ ರೀತಿಯ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ.
ಇದನ್ನೂ ಓದಿ-Vegetable Price: ಗ್ರಾಹಕರೇ ಗಮನಿಸಿ...ಇಲ್ಲಿದೆ ಇಂದಿನ ತರಕಾರಿ ಬೆಲೆ
ಎಂಸಿಎಲ್ಆರ್ ದರ ಎಂದರೇನು?
RBIನ ನೂತನ ಮಾರ್ಗಸೂಚಿಗಳ ಪ್ರಕಾರ, ಈಗ ಮೂಲ ದರಕ್ಕೆ ಬದಲಾಗಿ, ವಾಣಿಜ್ಯ ಬ್ಯಾಂಕುಗಳು MCLR ಆಧಾರದ ಮೇಲೆ ನಿಧಿಗಳ ಕನಿಷ್ಠ ವೆಚ್ಚವನ್ನು ಪಾವತಿಸುತ್ತವೆ. MCLR ಅನ್ನು ನಿರ್ಧರಿಸುವಲ್ಲಿ ನಿಧಿಗಳ ಮಾರ್ಜಿನಲ್ ವೆಚ್ಚವು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರೆಪೊ ದರದಲ್ಲಿನ ಯಾವುದೇ ಬದಲಾವಣೆಯು ಫಂಡ್‌ಗಳ ಮಾರ್ಜಿನಲ್ ಕಾಸ್ಟ್‌ನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಹೋಮ್ ಲೋನ್ ಗ್ರಾಹಕರು ತಮ್ಮ ಗೃಹ ಸಾಲದ ಬಡ್ಡಿ ದರಗಳನ್ನು ಪರಿಶೀಲಿಸುವ ಸಮಯ ಬಂದಾಗ, MCLR ಹೆಚ್ಚಳದಿಂದಾಗಿ ಅವರ EMI ಗಳು ದುಬಾರಿಯಾಗಲಿವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.