SBI vs Post Office: ನೀವು ಸಹ ಒಂದು ವೇಳೆ ನಿಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಿ ಉಳಿತಾಯ ಮಾಡಲು ಬಯಸುತ್ತಿದ್ದರೆ, ಇಂದು ನಾವು ನಿಮಗೆ ಅಂತಹ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.ತನ್ಮೂಲಕ  ನೀವು ದೊಡ್ಡ ಲಾಭವನ್ನೇ ಗಳಿಸಬಹುದು. ಹಣವನ್ನು ಹೂಡಿಕೆ ಮಾಡುವ ಮೊದಲು ನಮ್ಮ ಮನಸ್ಸಿನಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಅಥವಾ ಎಸ್‌ಬಿಐ, ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂಬ ಗೊಂದಲ ನಿಮ್ಮ ಮನದಲ್ಲಿಯೂ ಇದ್ದರೆ, ನಿಮ್ಮ ಗೊಂದಲಕ್ಕೆ ಈಗಲೇ ಫುಲ್ ಸ್ಟಾಪ್ ನೀಡಿ.  ಏಕೆಂದರೆ ನೀವು ಎಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ. 

COMMERCIAL BREAK
SCROLL TO CONTINUE READING

ಎಸ್ಬಿಐ ಸ್ಥಿರ ಠೇವಣಿ ದರಗಳು
ದೇಶದ ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗ್ರಾಹಕರಿಗೆ ಸ್ಥಿರ ಠೇವಣಿ ಹೂಡಿಕೆಯ ಆಯ್ಕೆಯನ್ನು ನೀಡಲಾಗುತ್ತದೆ. ಎಸ್ಬಿಐ ಇತ್ತೀಚೆಗಷ್ಟೇ ತನ್ನ ಸ್ಥಿರ ಠೇವಣಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಆಗಸ್ಟ್ 13 ರಂದು ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ ಬಡ್ಡಿದರದಲ್ಲಿ ಹೆಚ್ಚಳ ಮಾಡಿದೆ. ಇದರಿಂದ 7 ದಿನಗಳ ಅವಧಿಯಿಂದ ಹಿಡಿದು 10 ವರ್ಷಗಳ ಸ್ಥಿರ ಠೇವಣಿಗಳಿಗೆ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇ.2.90 ರಿಂದ ಶೇ.5.65 ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಹಿರಿಯ ನಾಗರಿಕರ ಕುರಿತು ಹೇಳುವುದಾದರೆ, ಅವರಿಗೆ ಈ ಬಡ್ಡಿ ದರ ಶೇ.3.4 ರಿಂದ ಶೇ.6.45ರಷ್ಟಿದೆ.


ಇದನ್ನೂ ಓದಿ-ರೈತರಿಗೆ ಸಿಹಿ ಸುದ್ದಿ! ಅನ್ನದಾತನ ಸಂಕಷ್ಟ ಪರಿಹಾರಕ್ಕೆ ಮತ್ತೊಂದು ಸೌಲಭ್ಯ ಒದಗಿಸಿದ ಸರ್ಕಾರ


ಪೋಸ್ಟ್ ಆಫೀಸ್ ನಲ್ಲಿಯೂ ಕೂಡ ದೊಡ್ಡ ಗಳಿಕೆ
ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಹಲವು ರೆತಿಯ ಸೌಕರ್ಯಗಳನ್ನು ಒದಗಿಸುತ್ತದೆ. ಪೋಸ್ಟ್ ಆಫೀಸ್ ಎಫ್ ಡಿ ಯೋಜನೆಯ ಕುರಿತು ಹೇಳುವುದಾದರೆ, ಅಂಚೆ ಕಚೇರಿ ಇತ್ತೀಚೆಗಷ್ಟೇ 2 ವರ್ಷಗಳ ಅವಧಿಯ ಸ್ಥಿರ ಠೇವಣಿ ಯೋಜನೆಯ ಮೇಲಿನ ಬಡ್ಡಿ ದರದಲ್ಲಿ 20 ಬೇಸಿಸ್ ಪಾಯಿಂಟ್ ಹೆಚ್ಚಿಸಿದೆ. ಇದರಿಂದ ಇದೀಗ ಗ್ರಾಹಕರಿಗೆ ಶೇ.5.7ರಷ್ಟು ಬಡ್ಡಿ ಸಿಗುತ್ತಿದೆ. 3 ವರ್ಷಗಳ ಸ್ಥಿರ ಠೇವಣಿಗೆ ಶೇ.5.8ರಷ್ಟು ಬಡ್ಡಿ ಸಿಗುತ್ತದೆ. 5 ವರ್ಷಗಳ ಅವಧಿಯ ಟರ್ಮ್ ಡಿಪಾಸಿಟ್ ಕುರಿತು ಹೇಳುವುದಾದರೆ, ಇದರಲ್ಲಿ ಘ್ರಾಹಕರಿಗೆ ಶೇ.6.7 ರಷ್ಟು ಬಡ್ಡಿಯ ಲಾಭ ಸಿಗುತ್ತಿದೆ.


ಇದನ್ನೂ ಓದಿ-7th Pay Commission : ಹಬ್ಬದ ದಿನವೆ ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಡಿಎ ಹೆಚ್ಚಳಕ್ಕೆ ಅಧಿಸೂಚನೆ ಬಿಡುಗಡೆ


ಕಿಸಾನ್ ವಿಕಾಸ್ ಪತ್ರ
ಕಿಸಾನ್ ವಿಕಾಸ್ ಪತ್ರದ ಎರಡೂ ಸಮಯಗಳಲ್ಲಿ ಸರ್ಕಾರವು ಬದಲಾವಣೆಗಳನ್ನು ಮಾಡಿದೆ. ಇದೀಗ ಸರ್ಕಾರ ಕಿಸಾನ್ ವಿಕಾಸ್ ಪತ್ರದ 123 ತಿಂಗಳ ಠೇವಣಿಗಳಿಗೆ ಶೇ.7ರಷ್ಟು ಬಡ್ಡಿಯನ್ನು ನೀಡುತ್ತದೆ. ಆದರೆ ಕಿಸಾನ್ ವಿಕಾಸ್ ಪತ್ರವು 124 ತಿಂಗಳ ಠೇವಣಿಗಳ ಮೇಲೆ 6.9% ಬಡ್ಡಿಯನ್ನು ನೀಡುತ್ತಿದೆ. ಕೊನೆಯದಾಗಿ, ನಾವು ಈ ಮೂರು ಠೇವಣಿಗಳನ್ನು ಹೋಲಿಸಿದರೆ, ನಂತರ ಪೋಸ್ಟ್ ಆಫೀಸ್ FD ಇವೆರಡಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಅದರಲ್ಲಿ ನಿಮಗೆ ಕೇಂದ್ರ ಸರ್ಕಾರದ ಸಾವೆರಿನ್ ಗ್ಯಾರಂಟಿ ಕೂಡ ಸಿಗ್ಗುತ್ತದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.