KIA SBI YONO Offer: ನೀವೂ ಕೂಡ ಕಿಯಾ (KIA) ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಿಂದ ಅಗ್ಗದ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ನೀವು ಎಸ್‌ಬಿಐ ಯೋನೊ (SBI YONO) ಮೂಲಕ ಕಾರನ್ನು ಬುಕ್ ಮಾಡಿದರೆ, ಆದ್ಯತೆಯ ವಿತರಣೆಯನ್ನು ಸಹ ಮಾಡಲಾಗುತ್ತದೆ ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. ಇದಲ್ಲದೇ, ಎಸ್‌ಬಿಐ ಕಾರ್ ಲೋನ್‌ಗೆ ಪ್ರಿನ್ಸಿಪಲ್ ಅಪ್ರೂವಲ್ ವೇಳೆಯೇ ಬಡ್ಡಿದರದಲ್ಲಿ 0.25% ತ್ವರಿತ ರಿಯಾಯಿತಿ ಲಭ್ಯವಾಗಲಿದೆ.


COMMERCIAL BREAK
SCROLL TO CONTINUE READING

ಬುಕಿಂಗ್ ಮಾಡುವ ವಿಧಾನ:
KIA ಕಾರುಗಳನ್ನು ಬುಕ್ ಮಾಡಲು, ಮೊದಲು ನೀವು ಎಸ್‌ಬಿಐ ಯೋನೊ (SBI YONO) ಆಪ್‌ಗೆ ಲಾಗಿನ್ ಆಗಬೇಕು. ಇಲ್ಲಿ ನೀವು ಶಾಪ್ ಮತ್ತು ಆರ್ಡರ್ ವಿಭಾಗದಲ್ಲಿ ಕ್ಲಿಕ್ ಮಾಡಿ. ಇದರ ನಂತರ ನೀವು ಆಟೋಮೊಬೈಲ್ ವಿಭಾಗವನ್ನು ಇಲ್ಲಿ ಕಾಣಬಹುದು. ನೀವು ಕಿಯಾ ಕಾರುಗಳನ್ನು ಇಲ್ಲಿಂದ ಬುಕ್ ಮಾಡಬಹುದು. ಇದರೊಂದಿಗೆ, ನೀವು ಎಸ್‌ಬಿಐ ಕಾರ್ ಲೋನ್‌ಗೆ (SBI Car Loan) ಯೋನೊ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಬಡ್ಡಿದರದಲ್ಲಿ ರಿಯಾಯಿತಿಯೊಂದಿಗೆ, ಇತರ ಹಲವು ಪ್ರಯೋಜನಗಳು ಸಹ ಲಭ್ಯವಿರುತ್ತವೆ.


ಇದನ್ನೂ ಓದಿ-  SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ


ಯೊನೊದಿಂದ ಕೆಐಎ ಕಾರ್ ಬುಕಿಂಗ್‌ನಲ್ಲಿಯೂ ಆದ್ಯತೆಯ ವಿತರಣೆ ಲಭ್ಯವಿದೆ. ಆದಾಗ್ಯೂ, ಬ್ಯಾಂಕಿನ ಪರವಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಬುಕ್ಕಿಂಗ್ ಮಾಡುವ ಮೊದಲು ದಯವಿಟ್ಟು ಇವುಗಳನ್ನು ನೆನಪಿನಲ್ಲಿಡಿ. ಕಾರಿನ ಮಾರಾಟ, ಗುಣಮಟ್ಟ, ವೈಶಿಷ್ಟ್ಯಗಳ ಪೂರೈಕೆಗೆ ತಾನು ಹೊಣೆಯಲ್ಲ. ಸಹ ಪಾಲುದಾರ ವ್ಯಾಪಾರಿಗಳಿಂದ ಸೇವೆಗಳನ್ನು ಒದಗಿಸಲಾಗುವುದು  ಎಂದು ಎಸ್‌ಬಿಐ ತನ್ನ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದೆ.


SBI Car Loan) ಅರ್ಜಿ ಸಲ್ಲಿಸಬಹುದು. ಇದರಲ್ಲಿ ಮರುಪಾವತಿಯ ಅವಧಿ 7 ವರ್ಷಗಳು. ಅಂದರೆ, ನೀವು 7 ವರ್ಷಗಳಲ್ಲಿ ಸಾಲವನ್ನು ಮರುಪಾವತಿಸಬೇಕು. ಇದರಲ್ಲಿಆನ್-ರೋಡ್ ಬೆಲೆಯ 90% ವರೆಗೆ ಸಾಲವನ್ನು ಪಡೆಯಬಹುದು. ಆನ್ ರೋಡ್ ಬೆಲೆ ವಿಮೆ ಮತ್ತು ನೋಂದಣಿಯನ್ನು ಒಳಗೊಂಡಿದೆ.


ಇದನ್ನೂ ಓದಿ-  Home Insurance Scheme: ಪ್ರವಾಹ, ಭೂಕಂಪದಿಂದ ಮನೆ ಹಾನಿಗೊಳಗಾದರೆ ಸಿಗಲಿದೆ 3 ಲಕ್ಷ ರೂಪಾಯಿ!


ಎಸ್‌ಬಿಐ ಕಾರು ಸಾಲದ ಬಡ್ಡಿ ದರಗಳು:
ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಕಾರು ಸಾಲಗಳ ಬಡ್ಡಿದರಗಳು ವಾರ್ಷಿಕ ಶೇ .7.75 ರಿಂದ ಆರಂಭವಾಗುತ್ತವೆ. ಇದು ಒಂದು ವರ್ಷದ MCLR ಜೊತೆಗೆ ಮಾರ್ಜಿನ್ ಅನ್ನು ಹೊಂದಿದೆ. ನೀವು ಹೊಸ ಕಾರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ನೀವು ಅದನ್ನು ವಾರ್ಷಿಕ 7.75 ರಿಂದ 8.45 ಶೇಕಡಾ ದರದಲ್ಲಿ ಪಡೆಯಬಹುದು. ಆದಾಗ್ಯೂ, ಇದು ಗ್ರಾಹಕರ ಸಿವಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ. ಎಸ್‌ಬಿಐನ ಸರಾಸರಿ ಕಾರು ಸಾಲದ  ಕುರಿತು ಹೇಳುವುದಾದರೆ, ಇದು 9.52 % ಆಗಿದೆ. ಕಿಯಾ ಕಾರುಗಳಿಗಾಗಿ ಯೋನೊದಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಬಡ್ಡಿ ದರದಲ್ಲಿ 0.25% ರಿಯಾಯಿತಿ ಇರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ