SBI Zero Balance Account: ಇತ್ತೀಚಿಗೆ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿರುತ್ತಾರೆ, ಆದರೆ ಕೆಲವರಿಗಾದರೂ ಏನೇನೋ ಕಾರಣಕ್ಕೆ ಮಿನಿಮಮ್ ಬ್ಯಾಲೆನ್ಸ್ ಮೈಂಟೈನ್ ಮಾಡಲು ಸಾಧ್ಯ ಆಗಿರಲ್ಲ. ಅಕೌನ್ಟ್ ಚೆಕ್ ಮಾಡಿಕೊಳ್ಳದಿರುವ ಕಾರಣಕ್ಕೆ ಮಿನಿಮಮ್ ಬ್ಯಾಲೆನ್ಸ್ ಮೈಂಟೈನ್ ಮಾಡಲು ಆಗಿರುವುದಿಲ್ಲ. ಇದರಿಂದ ಸುಮ್ಮ ಸುಮ್ಮನೆ ದಂಡ ಕಟ್ಟುತ್ತಿರುತ್ತಾರೆ. ಇದಕ್ಕೆ ಸದ್ಯಕ್ಕೆ ಸಿಕ್ಕಿರುವ ಪರಿಹಾರ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA) ತೆರೆಯುವುದು.


COMMERCIAL BREAK
SCROLL TO CONTINUE READING

ಕಡ್ಡಾಯವಾಗಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಎಲ್ಲಾ ಬ್ಯಾಂಕ್ ಗಳಲ್ಲೂ ಇದೆ. ಜೊತೆಗೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ದಂಡ ಹಾಕುವ ಪದ್ಧತಿ ಕೂಡ  ಎಲ್ಲಾ ಬ್ಯಾಂಕ್ ಗಳಲ್ಲೂ ಇದೆ. ಆದರೀಗ ಎಸ್‌ಬಿಐನಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA) ಓಪನ್ ಮಾಡಿದರೆ ಇನ್ನು ಮುಂದೆ ನಿಮ್ಮ ಖಾತೆಗಳಲ್ಲಿ ನೀವು  ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಇರುವುದಿಲ್ಲ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ದಂಡವನ್ನು ಕಟ್ಟ ಬೇಕಾಗಿಲ್ಲ.  


ಬ್ಯಾಂಕಿಂಗ್ ಭಾಷೆಯಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA) ಎಂದು ಕರೆಯಲಾಗುವ ಖಾತೆಯನ್ನು ಸಾಮಾನ್ಯ ಭಾಷೆಯಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ಎಂದು ಹೇಳಲಾಗುತ್ತದೆ. ಈ ಶೂನ್ಯ ಬ್ಯಾಲೆನ್ಸ್ ಖಾತೆಯಿಂದ ಏನೇನು ಪ್ರಯೋಜನ ಆಗುತ್ತದೆ ಎನ್ನುವುದನ್ನು ನೋಡಬಹುದು. 


ಇದನ್ನೂ ಓದಿ- ವೇತನ ವರ್ಗಕ್ಕೆ ಹೊಸ ನಿಯಮ ಜಾರಿ! ಟ್ಯಾಕ್ಸ್ ಕಡಿತ ಮಾಡಿ ವಿತ್ತ ಸಚಿವರ ಘೋಷಣೆ!


ಎಸ್‌ಬಿ‌ಐ ಶೂನ್ಯ ಬ್ಯಾಲೆನ್ಸ್ ಖಾತೆಯ ಪ್ರಯೋಜನಗಳು: 
ಮೊದಲನೆಯದಾಗಿ ಶೂನ್ಯ ಬ್ಯಾಲೆನ್ಸ್ ಖಾತೆಗಳಲ್ಲಿ ಕನಿಷ್ಠ ಹಣ ಮಾಡಬೇಕಾದ ಅಗತ್ಯ ಇಲ್ಲ. ಖಾತೆಯಲ್ಲಿ ಕನಿಷ್ಠ ಹಣ ಇಲ್ಲದಿದ್ದರೂ ಅದಕ್ಕಾಗಿ ದಂಡ ಕಟ್ಟಬೇಕಾದ ಅಗತ್ಯ ಇರುವುದಿಲ್ಲ. ವಾಸ್ತವವಾಗಿ ಶೂನ್ಯ ಬ್ಯಾಲೆನ್ಸ್ ಖಾತೆಯಿಂದ ಆಗುವ ಅತಿದೊಡ್ಡ ಪ್ರಯೋಜನ ಇದು. 


ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ  ಕನಿಷ್ಠ ಹಣ ನಿರ್ವಹಿಸುವ ವಿಷಯದಲ್ಲಿ ಮಾತ್ರ ಉಪಯೋಗ ಆಗುವುದಿಲ್ಲ. ಎಷ್ಟು ಬೇಕಾದರೂ ಗರಿಷ್ಠ ಹಣವನ್ನೂ ಇಡಬಹುದು. ಖಾತೆಯಲ್ಲಿ ಗರಿಷ್ಠ ಮೊತ್ತ ಇಡಲು ಯಾವುದೇ ಮಿತಿ ಇರುವುದಿಲ್ಲ.
 
ಶೂನ್ಯ ಬ್ಯಾಲೆನ್ಸ್ ಖಾತೆ ತೆರೆದರೆ ಬ್ಯಾಂಕ್ ಪಾಸ್‌ಬುಕ್,ಎಟಿಎಂ-ಕಮ್-ಡೆಬಿಟ್ ಕಾರ್ಡ್ ಕೊಡಲಾಗುತ್ತದೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಆದರೆ ಚೆಕ್ ಬುಕ್ ಅನ್ನು ಮಾತ್ರ ಉಚಿತವಾಗಿ ಕೊಡಲಾಗುವುದಿಲ್ಲ. 


ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆದರೆ ಸಾಮಾನ್ಯ ಉಳಿತಾಯ ಖಾತೆಯ ಮಾದರಿಯಲ್ಲಿ ಆಧಾರ್ ಕಾರ್ಡ್‌ ಸಹಾಯದಿಂದ ಹಣ ಪಡೆಯಬಹುದು ಮತ್ತು ಬೇರೆ ಖಾತೆಗಳಿಗೆ ವರ್ಗಾ ಕೂಡ ಮಾಡಬಹುದು. ಶೂನ್ಯ ಬ್ಯಾಲೆನ್ಸ್ ಖಾತೆಯಿಂದ UPI ಅಪ್ಲಿಕೇಶನ್‌ ಮೂಲಕ ಹಣ ತೆಗೆದುಕೊಳ್ಳಬಹುದು ಜೊತೆಗೆ ಬೇರೆಯವರಿಗೆ ಹಣವನ್ನು ವರ್ಗಾವಣೆ ಮಾಡಬಹುದು. 


ಇದನ್ನೂ ಓದಿ- ಕೇಂದ್ರ ಸರ್ಕಾರದ ಬೆನ್ನಲೇ ಸರ್ಕಾರಿ ನೌಕರರ ವೇತನ ಹೆಚ್ಚಿಸಿದ ರಾಜ್ಯ ಸರ್ಕಾರ !ದೀಪಾವಳಿ ಹೊತ್ತಲ್ಲಿ ಸಿಕ್ಕಿತು ಭರ್ಜರಿ ಗಿಫ್ಟ್


ಶೂನ್ಯ ಬ್ಯಾಲೆನ್ಸ್ ಖಾತೆ ತೆರೆದರೆ NEFT/RTGS ನಂತಹ ಎಲೆಕ್ಟ್ರಾನಿಕ್ ಚಾನೆಲ್‌ಗಳ ಮೂಲಕ ನಡೆಸುವ ಹಣದ ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಜೊತೆಗೆ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಸಕ್ರಿಯಗೊಳಿಸಿದರೆ ಅದಕ್ಕಾಗಿ ಕೂಡ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿದ ಅಗತ್ಯ ಇರುವುದಿಲ್ಲ. ಅಲ್ಲದೆ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಅಂತ್ಯಗೊಳಿಸಿದರೆ ಅದಕ್ಕೂ ಕೂಡ ಯಾವುದೇ ರೀತಿಯ ಶುಲ್ಕ ಕಟ್ಟಬೇಕಾಗಿರುವುದಿಲ್ಲ. 


ಯಾರು ಈ ಖಾತೆಯನ್ನು ತೆರೆಯಬಹುದು?
ಯಾರು ಬೇಕಾದರೂ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಬಹುದು. ಆದರೆ ನೀವು KYC ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಬೇಕು. ನೀವು ಆಧಾರ್ ಕಾರ್ಡ್ ಹಾಗು ಪ್ಯಾನ್ ಕಾರ್ಡ್ ಹೊಂದಿದ್ದರೆ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆಯಲು ಸುಲಭವಾಗುತ್ತದೆ.  ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ ಜಂಟಿ ಖಾತೆಯನ್ನು ತೆರೆಯುವಂತಹ ಸೌಲಭ್ಯವನ್ನು ಕೂಡ ನೀಡಲಾಗಿದೆ. ಜಂಟಿ ಖಾತೆ ತೆರೆಯಲು ಇದಕ್ಕೆ ಸಂಬಂಧಿಸಿದ ಎಲ್ಲಾ ಖಾತೆದಾರರು ತಮ್ಮ ದಾಖಲೆಗಳನ್ನು ಅಗತ್ಯವಾಗಿ ಸಲ್ಲಿಸಬೇಕು.


ಇನ್ನೊಂದು ಮುಖ್ಯ ವಿಷಯ ಏನು ಎಂದರೆ ನೀವು ಬ್ಯಾಂಕಿನಲ್ಲಿ ಯಾವುದೇ ಉಳಿತಾಯ ಅಥವಾ ಇತರೆ ಖಾತೆಯನ್ನು ಹೊಂದಿಲ್ಲದಿದ್ದರೆ ಮಾತ್ರ ನೀವು ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಓಪನ್ ಮಾಡಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಪ್ರಕಾರ, ಒಂದೊಮ್ಮೆ ನೀವು ಈಗಾಗಲೇ ಉಳಿತಾಯ ಖಾತೆಯನ್ನು ಹೊಂದಿದ್ದರೆ ಮತ್ತು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ತೆಗೆದಿದ್ದರೆ ಅಂತಹ ಬ್ಯಾಂಕ್ ಖಾತೆಗಳನ್ನು 30 ದಿನಗಳಲ್ಲಿ ಮುಚ್ಚಬೇಕು. ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆದಾರರು ಎಟಿಎಂ ಅಥವಾ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ಗಳ ಶಾಖೆ ಚಾನಲ್‌ನಿಂದ ತಿಂಗಳಿಗೆ 4 ಬಾರಿ ಮಾತ್ರ ಹಣವನ್ನು ತೆಗೆಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.