ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಲು ಸುಪ್ರೀಂ ನಕಾರ
Adani Hindenburg Latest News:ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸೆಬಿ ತನಿಖೆಯಲ್ಲಿ ಯಾವುದೇ ಲೋಪ ಇಲ್ಲ ಎಂದು ಹೇಳಿದೆ.
Adani Hindenburg Latest News : ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗೆ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ತನಿಖೆಯನ್ನು ಸೆಬಿ ಮುಂದುವರಿಸುತ್ತದೆ ಎನ್ನುವುದು ಕೋರ್ಟ್ ಒತ್ತಿ ಹೇಳಿದೆ. SEBI ಕಾರ್ಯವೈಖರಿತಿಯಲ್ಲಿ ಯಾವುದೇ ರೀತಿಯ ಲೋಪ ಇಲ್ಲ ಎನ್ನುವುದನ್ನು ನ್ಯಾಯಾಲಯ ಹೇಳಿದೆ. ಸೆಬಿ ಮೂರು ತಿಂಗಳೊಳಗೆ ತನ್ನ ತನಿಖೆಯನ್ನು ಮುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಸೆಬಿಗೆ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಿದೆ.ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಸೆಬಿ ಇಡೀ ಪ್ರಕರಣವನ್ನು ತನಿಖೆ ಮಾಡುತ್ತದೆ ಎಂದು ಹೇಳಿದೆ. SEBI ಬದಲಿಗೆ SIT ಗೆ ತನಿಖೆಯನ್ನು ಹಸ್ತಾಂತರಿಸಲು ನ್ಯಾಯಾಲಯ ನಿರಾಕರಿಸಿದೆ. 22 ತನಿಖೆಗಳು ಪೂರ್ಣಗೊಂಡಿದ್ದು, ಎರಡು ಉಳಿದಿವೆ ಎಂದು ಸೆಬಿ ನ್ಯಾಯಾಲಯಕ್ಕೆ ತಿಳಿಸಿದೆ. ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಬೇಕೆಂಬ ಅರ್ಜಿದಾರರ ಬೇಡಿಕೆಯನ್ನೂ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇದನ್ನೂ ಓದಿ : Voter ID ಕಾರ್ಡ್ ನಲ್ಲಿ ಹೆಸರು ತಪ್ಪಾಗಿದ್ದರೆ ಆನ್ ಲೈನ್ ನಲ್ಲಿಯೇ ಸರಿ ಮಾಡಿಕೊಳ್ಳಿ ! ಪ್ರಕ್ರಿಯೆ ಬಹಳ ಸರಳ
ಸೆಬಿಯ ತನಿಖೆಯನ್ನು ಅನುಮಾನಿಸುವುದು ಸರಿಯಲ್ಲ :
ಸೆಬಿಯ ಕಾರ್ಯವೈಖರಿಯಲ್ಲಿ ಯಾವುದೇ ರೀತಿಯ ಲೋಪ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಈಗಾಗಲೇ CESTAT ಮತ್ತು SC ತಿರಸ್ಕರಿಸಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿರುವ ತಜ್ಞರ ಗುಂಪಿಗೆ ಸೆಬಿಯ ವೈಖರಿಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ದೃಢವಾದ ಆಧಾರಗಳಿಲ್ಲದೆ ಸೆಬಿಯಿಂದ ತನಿಖೆಯನ್ನು ವರ್ಗಾಯಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಮಾಧ್ಯಮ ವರದಿಗಳ ಆಧಾರದ ಮೇಲೆ ಸೆಬಿಯ ತನಿಖೆಯನ್ನು ಅನುಮಾನಿಸುವುದು ಅಥವಾ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ತಜ್ಞರ ಸಮಿತಿಯ ಸದಸ್ಯರ ಮೇಲೆ ಎತ್ತಿರುವ ಪ್ರಶ್ನೆಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಶಾರ್ಟ್ ಶೇರಿಂಗ್ ಕಂಪನಿ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ತಿಳಿಸುವಂತೆ ಸೆಬಿಗೆ ಸೂಚಿಸಿದೆ. ಅರ್ಜಿದಾರರ ಹಿತಾಸಕ್ತಿ ಸಂಘರ್ಷದ ವಾದ ಅರ್ಥಹೀನವಾಗಿದೆ ಎಂದು ಹೇಳಿದೆ. ಇದಕ್ಕೂ ಮೊದಲು, ಇಡೀ ವಿಷಯದ ಬಗ್ಗೆ ಸೆಬಿ ಮತ್ತು ತಜ್ಞರ ಸಮಿತಿಯ ತನಿಖಾ ವರದಿಯ ನಿಷ್ಪಕ್ಷಪಾತದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಎಸ್‌ಸಿ ಹೇಳಿತ್ತು.
ಇದನ್ನೂ ಓದಿ : Gold Price Today : ಚಿನ್ನ ಖರೀದಿ ಅಲ್ಲ, ಅದರತ್ತ ಮುಖ ಮಾಡುವುದೂ ಕಷ್ಟ : ಇಲ್ಲಿ ಚೆಕ್ ಮಾಡಿಕೊಳ್ಳಿ ಇಂದಿನ ದರ
60 ಬಿಲಿಯನ್ ಡಾಲರ್‌ಗಳಷ್ಟು ಕಡಿಮೆಯಾದ ಆಸ್ತಿ :
ಹಿಂಡೆನ್‌ಬರ್ಗ್ ಮಾಡಿದ ಆರೋಪಗಳನ್ನು ಅದಾನಿ ಗ್ರೂಪ್ ಈಗಾಗಲೇ ತಿರಸ್ಕರಿಸಿತ್ತು . ಇದರೊಂದಿಗೆ ಗ್ರೂಪ್ ಹಣ ಸಂಗ್ರಹಿಸುವ ತಂತ್ರವನ್ನೂ ಬದಲಾಯಿಸಿತ್ತು. ಕೇವಲ 2023 ರಲ್ಲಿ, ಅದಾನಿ ಗ್ರೂಪ್ ಈಕ್ವಿಟಿ ಮೂಲಕ 41,500 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಮತ್ತು ಡೆಪ್ತ್ ಮಾರುಕಟ್ಟೆಯಿಂದ ಈ ಮೊತ್ತವನ್ನು ದ್ವಿಗುಣಗೊಳಿಸಿದೆ. ಜನವರಿ 2023 ರಲ್ಲಿ, ಅಮೇರಿಕನ್ ಶಾರ್ಟ್ ಸೇಲ್ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ಕಂಪನಿಗಳ ಅಕ್ರಮಗಳ ಆರೋಪ ಮಾಡಿತ್ತು. ಇದಾದ ನಂತರ ಅದಾನಿ ಗ್ರೂಪ್‌ನ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಷೇರುಗಳ ಕುಸಿತದಿಂದಾಗಿ, ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು 60 ಡಾಲರ್ ಬಿಲಿಯನ್ ಕಡಿಮೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.