ನವದೆಹಲಿ: Mutual Funds Rule Change - ಯಾವುದೇ ಒಂದು ಮ್ಯೂಚವಲ್ ಫಂಡ್ ಯೋಜನೆಯನ್ನು ಸ್ಥಗಿತಗೊಳಿಸುವಾಗ ಆ ಮ್ಯೂಚವಲ್ ಫಂಡ್ (Mutual Funds) ಟ್ರಸ್ಟಿಗಳು ಯುನಿಟ್ ಖರೀದಿಸಿರುವವರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಮಾರುಕಟ್ಟೆ ನಿಯಂತ್ರಕ ಸೇಬಿ ಆದೇಶ ಹೊರಡಿಸಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ಸೆಬಿ ಈ ನಿರ್ಧಾರ ಕೈಗೊಂಡಿದೆ. ಹೊಸ ನಿಯಮಗಳ ಅಡಿಯಲ್ಲಿ, ಮ್ಯೂಚುವಲ್ ಫಂಡ್ ಟ್ರಸ್ಟಿಗಳು ಸ್ಕೀಮ್ (Mutual Funds Scheme) ಅನ್ನು ಮುಚ್ಚಲು ಅಥವಾ ಕ್ಲೋಸ್ಡ್-ಎಂಡೆಡ್ ಪ್ಲಾನ್‌ನ ಯುನಿಟ್‌ಗಳನ್ನು ಅಕಾಲಿಕವಾಗಿ ಎನ್‌ಕ್ಯಾಶ್ ಮಾಡಲು ನಿರ್ಧರಿಸಿದಾಗ ಬಹುಪಾಲು ಯೂನಿಟ್ ಹೋಲ್ಡರ್‌ಗಳ (Mutual Fund Unit Holders) ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ ಎಂದು ಸೆಬಿ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಂಗಳವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಟ್ರಸ್ಟಿಗಳು ಸಾಮಾನ್ಯ ಮತದಾನದ ಮೂಲಕ ಪ್ರತಿ ಯೂನಿಟ್ ಆಧಾರದ ಮೇಲೆ ಒಂದು ಮತಕ್ಕೆ ಹಾಜರಾಗುವ ಮತ್ತು ಮತದಾನ ಮಾಡುವ ಘಟಕದ ಮಾಲೀಕರ ಒಪ್ಪಿಗೆಯನ್ನು ಪಡೆಯಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಒಪ್ಪಿಗೆಯ ಆಧಾರವನ್ನು ಬಹುಮತವೆಂದು ಪರಿಗಣಿಸಲಾಗುತ್ತದೆ. ಯೋಜನೆಯ ಮುಚ್ಚುವಿಕೆಯ ಸಂದರ್ಭಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಪ್ರಕಟಿಸಿದ 45 ದಿನಗಳ ಒಳಗಾಗಿ ಮತದಾನದ ಫಲಿತಾಂಶವನ್ನು ಸಾರ್ವಜನಿಕಗೊಳಿಸಬೇಕು. ಈ ಅವಧಿಯಲ್ಲಿ ಟ್ರಸ್ಟಿಗಳು ಒಪ್ಪಿಗೆಯನ್ನು ಪಡೆಯಲು ವಿಫಲವಾದಲ್ಲಿ, ಸಮೀಕ್ಷೆಯ ಫಲಿತಾಂಶದ ಪ್ರಕಟಣೆಯ ನಂತರ ತಕ್ಷಣವೇ ವ್ಯವಹಾರದ ದಿನದಿಂದ ಆಯಾ ಯೋಜನೆಯು ವಹಿವಾಟು ಚಟುವಟಿಕೆಗಳಿಗೆ ಎಂದಿನಂತೆ ತೆರೆದಿರಲಿದೆ.


ಇದನ್ನೂ ಓದಿ-PAN ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸುವ ಸುಲಭ ಪ್ರಕ್ರಿಯೆ


ಮ್ಯೂಚವಲ್ ಫಂಡ್ ನಿಯಮಗಳಲ್ಲಿ ಬದಲಾವಣೆ
ಇದಕ್ಕಾಗಿ ನ್ಯೂಚವಲ್ ಫಂಡ್ ನಿಯಮಗಳಲ್ಲಿ ತಿದ್ದುಪಡಿ ಮಾಡಿರುವ SEBI, ಟ್ರಸ್ಟಿಗಳು ತಮ್ಮ ನಿರ್ಧಾರ ಪ್ರಕಟಿಸಿದ ಒಂದು ದಿನಗಳೊಳಗೆ ನಿಯಂತ್ರಕಕ್ಕೆ ಈ ಕುರಿತು ಮಾಹಿತಿ ನೀಡಬೇಕು ಮತ್ತು ಈ ಮಾಹಿತಿ ಯಾವ ಪರಿಸ್ಥಿತಿಯಲ್ಲಿ ಮ್ಯೂಚವಲ್ ಫಂಡ್ ಸ್ಥಗಿತಗೊಳಿಸಲಾಗುತ್ತಿದೆ ಎಂಬುದರ ಮಾಹಿತಿ ಒಳಗೊಂಡಿರಬೇಕು. ಜೊತೆಗೆ ಅಷ್ಟೆ ಅಲ್ಲ ಎಲ್ಲಿ ಆ ಮ್ಯೂಚವಲ್ ಫಂಡ್ ನಿರ್ಮಾಣಗೊಂಡಿದೆಯೋ, ಅಲ್ಲಿನ ಎರಡು ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ಭಾಷೆಯಲ್ಲಿ ಈ ಕುರಿತು ಮಾಹಿತಿ ನೀಡಬೇಕು ಎಂದು ನಿಯಂತ್ರಕ ಹೇಳಿದೆ.


ಇದನ್ನೂ ಓದಿ-Budget 2022 : ಬಜೆಟ್ ನಲ್ಲಿ ಪಿಂಚಣಿದಾರರಿಗೆ ಸಂತಸದ ಸುದ್ದಿ! ಭಾರೀ ಹೆಚ್ಚಾಗಬಹುದು ಪಿಂಚಣಿ


ಸುಪ್ರೀಂ ಕೋರ್ಟ್ ನಿರ್ಧಾರದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ
ಮ್ಯೂಚವಲ್ ಫಂಡ್ ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಆದೇಶದ ಬಳಿಕ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರ ಕುರಿತು ತೀರ್ಪು ಪ್ರಕಟಿಸಿದ್ದ ಸರ್ವೋಚ್ಛ ನ್ಯಾಯಾಲಯ, ಯೋಜನೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕಾರಣಗಳನ್ನು ಬಹಿರಂಗಪಡಿಸಲು ನೋಟಿಸ್ ಪ್ರಕಟಿಸಿದ ನಂತರ ಟ್ರಸ್ಟಿಗಳು ಹೆಚ್ಚಿನ ಯೂನಿಟ್ಹೋಲ್ಡರ್‌ಗಳ ಒಪ್ಪಿಗೆಯನ್ನು ಪಡೆಯಬೇಕು ಎಂದು ಹೇಳಿತ್ತು. ನ್ಯಾಯಾಲಯದ (Supreme Court) ಈ ನಿರ್ಧಾರವು ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುಯಲ್ ಫಂಡ್‌ನ 6 ಯೋಜನೆಗಳನ್ನು ಮುಚ್ಚುವ ಸಂದರ್ಭದಲ್ಲಿ ಬಂದಿತ್ತು ಎಂಬುದು ಇಲ್ಲಿ ಗಮನಾರ್ಹ


ಇದನ್ನೂ ಓದಿ-Driving License ಕಳೆದು ಹೋಗಿದೆಯೇ? ಗಾಬರಿಯಾಗಬೇಡಿ, ಹೊಸ ಡಿಎಲ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.