Adani Hindenburg Case: ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉತ್ತರವನ್ನು ದಾಖಲಿಸಿದೆ. ಈ ಕುರಿತು ಸೆಬಿ ಸಲ್ಲಿಸಿದ ಅಫಿಡವಿಟ್‌ನಲ್ಲಿ, 2016 ರಿಂದ ಅದಾನಿ ಸಮೂಹದ ಕಂಪನಿಗಳ ಕುರಿತು ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪಗಳನ್ನು ನಿರಾಧಾರ ಎಂದು ಸೆಬಿ ಹೇಳಿದೆ. 2016 ರ ನಂತರ ಯಾವುದೇ ಅದಾನಿ ಕಂಪನಿಯನ್ನು ತನಿಖೆಗೆ ಒಳಪಡಿಸಲಾಗಿಲ್ಲ ಎಂದು ಸೆಬಿ ಹೇಳಿದೆ. ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠವು ಅದಾನಿ ಗ್ರೂಪ್ ವಿರುದ್ಧದ ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳನ್ನು ತನಿಖೆ ಮಾಡಲು ಆರು ತಿಂಗಳ ಕಾಲ ವಿಸ್ತರಣೆಯ ಬೇಡಿಕೆಯನ್ನು ಪರಿಗಣಿಸುತ್ತಿದೆ.


COMMERCIAL BREAK
SCROLL TO CONTINUE READING

3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ
ಸೋಮವಾರ ನೀಡಿದ ಉತ್ತರದಲ್ಲಿ, ತನಿಖೆಯನ್ನು ಪೂರ್ಣಗೊಳಿಸಲು ತನಗೆ ಹೆಚ್ಚಿನ ಸಮಯವಕಾಶವನ್ನು ನೀಡಬೇಕ್ದು ಎಂದು ಸೆಬಿ ಪುನರುಚ್ಚರಿಸಿದೆ. ತನಿಖೆಯನ್ನು ಪೂರ್ಣಗೊಳಿಸಲು ಸೆಬಿಯಿಂದ ಆರು ತಿಂಗಳ ಕಾಲಾವಕಾಶ ಕೋರಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಆದರೆ 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದಕ್ಕೂ ಮುನ್ನ ಮೇ 12 ರಂದು ಸೋಮವಾರ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಲಾಗಿತ್ತು.


ಆಗಸ್ಟ್ 14 ರ ಸುಮಾರಿಗೆ ಮತ್ತೆ ವಿಚಾರಣೆ ನಡೆಯಲಿದೆ
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತನಿಖೆಗೆ 6 ತಿಂಗಳುಗಳ ಕಾಲಾವಕಾಶ ತುಂಬಾ ಹೆಚ್ಚಾಗಿದೆ. ಹೀಗಾಗಿ, ಆಗಸ್ಟ್ 14 ರ ಸುಮಾರಿಗೆ ನಾವು ಈ ಪ್ರಕರಣವನ್ನು ಆಲಿಸಲಿದ್ದೇವೆ ಎಂದು ಹೇಳಿದ್ದರು. ಅದಾನಿ-ಹಿಂಡೆನ್‌ಬರ್ಗ್ ವರದಿಯ ವಿಚಾರಣೆಯ ಸಂದರ್ಭದಲ್ಲಿ, 'ನಾವು ತನಿಖೆಗೆ ಸಮಯವನ್ನು ವಿಸ್ತರಿಸುತ್ತೇವೆ, ಆದರೆ ಆರು ತಿಂಗಳವರೆಗೆ ಅಲ್ಲ' ಎಂದು ಸೆಬಿಗೆ ತಿಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ನಾವು ಮೂರು ತಿಂಗಳ ಕಾಲ ಸಮಯವನ್ನು ವಿಸ್ತರಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ-Maharashtra Politics: ಶರದ್ ಪವಾರ್ ಮನೆಯಲ್ಲಿ ಎಂವಿಎ ಸಭೆ, 2024ರ ಸ್ಥಾನ ಹಂಚಿಕೆ ಕುರಿತು ಚರ್ಚೆ


ಮಾರ್ಚ್ 2ರಂದು ತನಿಖೆಗೆ ಆದೇಶ ನೀಡಲಾಗಿತ್ತು
ಹಿಂಡೆನ್‌ಬರ್ಗ್ ವರದಿಯಲ್ಲಿ ಅದಾನಿ ಗ್ರೂಪ್‌ನಿಂದ ಯಾವುದೇ ಭದ್ರತಾ ಕಾನೂನು ಉಲ್ಲಂಘನೆಯ ಕುರಿತು ತನಿಖೆ ನಡೆಸುವಂತೆ ಮಾರ್ಚ್ 2 ರಂದು ಸುಪ್ರೀಂ ಕೋರ್ಟ್ SEBI ಗೆ ನಿರ್ದೇಶನ ನೀಡಿದೆ ಎಂಬುದು ಇಲ್ಲಿ ಗಮನಾರ್ಹ. ಆ ಸಮಯದಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ US $ 140 ಶತಕೋಟಿಗಿಂತ ಹೆಚ್ಚಿನ ನಷ್ಟವನ್ನು ಅನುಭವಿಸಿತ್ತು.


ಇದನ್ನೂ ಓದಿ-Maharashtra Violence: ಅಕೋಲಾ ಬಳಿಕ ಇದೀಗ ಅಹ್ಮದ್ ನಗರದಲ್ಲಿ ಭುಗಿಲೆದ್ದ ಹಿಂಸಾಚಾರ


ಸಮಿತಿಯಲ್ಲಿ ಯಾರನ್ನು ಸೇರಿಸಲಾಗಿದೆ?
ತಜ್ಞರ ಸಮಿತಿಯ ನೇತೃತ್ವವನ್ನು ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ವಹಿಸಿಕೊಂಡಿದ್ದಾರೆ, ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಇತರ ಐದು ಸದಸ್ಯರು - ನಿವೃತ್ತ ನ್ಯಾಯಮೂರ್ತಿಗಳಾದ ಜೆಪಿ ದೇವಧರ್, ಒಪಿ ಭಟ್, ಕೆವಿ ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಸಮಿತಿಯ ಭಾಗವಾಗಿರಲಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ