Share Market Update: ಇಂದು ಷೇರು ಮಾರುಕಟ್ಟೆ ಭಾರಿ ಗೂಳಿ ಜಿಗಿತಕ್ಕೆ ಸಾಕ್ಷಿಯಾಗಿದೆ. ಹೌದು ಸೆನ್ಸೆಕ್ಸ್ ಇಂದು ತನ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ. ಮಧ್ಯಾಹ್ನ 3.30 ಕ್ಕೆ ವಹಿವಾಟು ಅಂತ್ಯಗೊಳ್ಳುವ ಮೊದಲು, ಸೆನ್ಸೆಕ್ಸ್ (ಬಿಎಸ್‌ಇ ಸೆನ್ಸೆಕ್ಸ್) 803.14 ಪಾಯಿಂಟ್‌ಗಳನ್ನು ಅಥವಾ ಶೇ.1.26 ಗಳಿಕೆ ಮಾಡಿ 64,718.56 ಮಟ್ಟವನ್ನು ತಲುಪಿದೆ. ಇದುವರೆಗೆ ಸೆನ್ಸೆಕ್ಸ್‌ನ ಅತ್ಯಧಿಕ ದಾಖಲೆ ಮಟ್ಟ 64,768.58 ಆಗಿತ್ತು. ಇಂದು ಸೆನ್ಸೆಕ್ಸ್ ಹೊಸ ದಾಖಲೆಯ ಮಟ್ಟವನ್ನು ಮುಟ್ಟಿದೆ, ನಂತರ ಹೂಡಿಕೆದಾರರ ಸಂಪತ್ತಿನಲ್ಲಿ ಬಂಪರ್ ಹೆಚ್ಚಳವಾಗಿದೆ.


COMMERCIAL BREAK
SCROLL TO CONTINUE READING

ನಿಫ್ಟಿ 19,201.70 ದಾಖಲೆಯ ಮಟ್ಟಕ್ಕೆ ತಲುಪಿದೆ
ಇದಲ್ಲದೇ ಇಂದು ಮಾರುಕಟ್ಟೆಯಲ್ಲಿ ನಿಫ್ಟಿ ಕೂಡ ಹೊಸ ದಾಖಲೆಯ ಮಟ್ಟವನ್ನು ತಲುಪಿದೆ. ನಿಫ್ಟಿ ಇಂದು 216.95 ಪಾಯಿಂಟ್ ಅಂದರೆ ಶೇಕಡಾ 1.14 ರಷ್ಟು ಏರಿಕೆಯೊಂದಿಗೆ ಅದು 19,189.05 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ. ಇಂದು ಮಾರುಕಟ್ಟೆಯಲ್ಲಿ ನಿಫ್ಟಿಯ ದಾಖಲೆಯ ಮಟ್ಟ 19,201.70 ಆಗಿದೆ. ಹೀಗಾಗಿ ಜುಲೈ ತಿಂಗಳ ಆರಂಭಕ್ಕೂ ಮುನ್ನವೇ ಸೆನ್ಸೆಕ್ಸ್-ನಿಫ್ಟಿ ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ಬರೆದಿವೆ. 

ಮಾರುಕಟ್ಟೆ ಮೌಲ್ಯ 295.72 ಲಕ್ಷ ಕೋಟಿ ತಲುಪಿದೆ
ಇಂದಿನ ಲಾಭದ ನಂತರ ಸೆನ್ಸೆಕ್ಸ್‌ನ ಮಾರುಕಟ್ಟೆ ಮೌಲ್ಯ 295.72 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.  ನಾವು ಸೆನ್ಸೆಕ್ಸ್‌ನ ಲಾಭದಾಯಕ ಷೇರುಗಳ ಬಗ್ಗೆ ಹೇಳುವುದಾದರೆ, ಇಂದು ಐಸಿಐಸಿಐ ಬ್ಯಾಂಕ್ ಮತ್ತು ಎನ್‌ಟಿಪಿಸಿ ಷೇರುಗಳು ಹಸಿರು ಅಂಕಗಳಲ್ಲಿ ತನ್ನ ವಹಿವಾಟನ್ನು ನಡೆಸಿವೆ. ಇದಲ್ಲದೇ ಎಲ್ಲಾ ಶೇರುಗಳಲ್ಲೂ ಭರ್ಜರಿ ಬೂಮ್ ಕಂಡುಬಂದಿದೆ.


ಇದನ್ನೂ ಓದಿ-July 2023 Changes: ಕೇವಲ ಮೂರೇ ದಿನಗಳು ಬಾಕಿ, ಜುಲೈ ತಿಂಗಳ ಈ ಬದಲಾವಣೆಗಳು ನಿಮ್ಮ ಮೇಲೂ ಪ್ರಭಾವ ಬೀರಲಿವೆ!


ಯಾವ ಷೇರುಗಳು ವೇಗವನ್ನು ಪಡೆದುಕೊಂಡವು?
ಇಂದು M&M ಷೇರುಗಳು ಶೇ.4 ರಷ್ಟು ಏರಿಕೆಯೊಂದಿಗೆ ದಾಖಲೆ ಮಟ್ಟದಲ್ಲಿವೆ. ಇದಲ್ಲದೇ ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಟಿಸಿಎಸ್, ಮಾರುತಿ, ಎಲ್ ಆಂಡ್ ಟಿ, ಟೆಕ್ ಮಹೀಂದ್ರಾ, ವಿಪ್ರೋ, ಪವರ್ ಗ್ರಿಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಟಾಟಾ ಮೋಟಾರ್ಸ್, ರಿಲಯನ್ಸ್, ಭಾರ್ತಿ ಏರ್‌ಟೆಲ್ ಸೇರಿದಂತೆ ಹಲವು ಕಂಪನಿಗಳ ಷೇರುಗಳಲ್ಲಿ ಉತ್ತಮ ಖರೀದಿ ನಡೆದಿದೆ. ಅದರ ನಂತರ ಈ ಎಲ್ಲಾ ಷೇರುಗಳು ಹಸಿರು ಮಾರ್ಕ್‌ನಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿವೆ.


ಇದನ್ನೂ ಓದಿ-Indian Economy: ವೇಗದಲ್ಲಿ ಚೀನಾಗಿಂತ ಮುಂದೆ ಇರಲಿದೆ ಭಾರತೀಯ ಅರ್ಥವ್ಯವಸ್ಥೆ, ಅಂದಾಜು ವ್ಯಕ್ತಪಡಿಸಿದ ಎಸ್ ಅಂಡ್ ಪಿ


ಜೂನ್ 21 ರಂದು ದಾಖಲೆ ಬರೆದಿತ್ತು
ಷೇರುಗಳ ಏರಿಕೆಯೊಂದಿಗೆ, ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳವು 2,95,72,338.05 ಕೋಟಿ ರೂ.ಗೆ ಜಂಪ್ ಆಗಿದೆ. ಇದಕ್ಕೂ ಮುನ್ನ ಜೂನ್ 21 ರಂದು ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳ 2,94,36,594.50 ಕೋಟಿ ರೂ.ಗೆ ತಲುಪಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.