Covishield ಲಸಿಕೆಯ ಬೆಲೆ ಕುರಿತು ಮಹತ್ವದ ಹೇಳಿಕೆ ನೀಡಿದ Adar Poonawalla
COVID-19 Vaccine Update:ಆಕ್ಸ್ಫರ್ಡ್ -ಅಸ್ಟ್ರಾಜೆನೆಕಾದ ಲಸಿಕೆಯಾಗಿರುವ ಕೋವಿಶೀಲ್ಡ್ ಅನ್ನು ಪುಣೆಯ ಸೀರಮ್ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿದೆ. ವಿಶೇಷವೆಂದರೆ, ಭಾರತದ ಔಷಧ ಮಹಾನಿರ್ದೇಶನಾಲಯ ಭಾನುವಾರ ಕೋವಿ ಶೀಲ್ಡ್ ತುರ್ತು ಬಳಕೆಗೆ ಅನುಮತಿ ನೀಡಿದೆ.
ನವದೆಹಲಿ: COVID-19 Vaccine Update - ಕೊರೊನಾ ವೈರಸ್ ವ್ಯಾಕಿನ್ ನ ಬೆಲೆ ಕುರಿತು ಕಳೆದ ಹಲವು ದಿನಗಳಿಂದ ಊಹಾಪೋಹಗಳು ಕೇಳಿಬರುತ್ತಿದ್ದವು. ಆದರೆ, ಭಾನುವಾರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ವ್ಯಾಕ್ಸಿನ್ ಬೆಲೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಭಾರತ ಸರ್ಕಾರಕ್ಕೆ ಈ ವ್ಯಾಕ್ಸಿನ್ ಅನ್ನು ರೂ.200 ಕ್ಕೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಇದಲ್ಲದೆ ದೇಶದ ನಾಗರಿಕರಿಗೆ ಈ ವ್ಯಾಕ್ಸಿನ್ ಅನ್ನು 1000 ರೂ.ಗಳಿಗೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಆಕ್ಸ್ಫರ್ಡ್-ಅಸ್ಟ್ರಾಜೇನಿಕಾ ವ್ಯಾಕ್ಸಿನ್ ಆಗಿರುವ ಕೋವಿಶೀಲ್ಡ್ ಉತ್ಪಾದನೆಯಲ್ಲಿ ನಿರತವಾಗಿದೆ. ಭಾರತದ ಔಷಧ ಮಹಾನಿರ್ದೇಶನಾಲಯ ಭಾನುವಾರ ಕೋವಿಶೀಲ್ಡ್ ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ನೀಡಿರುವುದು ಇಲ್ಲಿ ಗಮನಾರ್ಹ.
ಇದನ್ನು ಓದಿ- Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ
ಭಾರತದಲ್ಲಿ ಶೀಘ್ರದಲ್ಲಿಯೇ ವ್ಯಾಕ್ಸಿನ್ ವಿತರಣಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಕೂಡ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಶನಿವಾರ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಣಕು ಲಸಿಕೆ ವಿತರಣೆ ಕಾರ್ಯಕ್ರಮ ನಡೆಸಲಾಗಿದೆ. ಭಾರತ ಸರ್ಕಾರ ಸೇರಿದಂತೆ ಯುರೋಪಿಯನ್ ಒಕ್ಕೂಟಗಳು ವ್ಯಾಕ್ಸಿನ್ ಉತ್ಪಾದಕರಿಗೆ ಈ ನಿಟ್ಟಿನಲ್ಲಿ ತಮ್ಮ ಸಹಕಾರ ನೀಡುತ್ತಿವೆ. ವ್ಯಾಕ್ಸಿನ್ ಉತ್ಪಾದನೆ ಹಾಗೂ ವಿತರಣೆಯನ್ನು ಉತ್ತೇಜಿಸಲು EU ಈ ಸಹಕಾರ ನೀಡುತ್ತಿದೆ.
ಇದನ್ನು ಓದಿ- Side Effect ಆರೋಪ, Serum Instituteನಿಂದ 100 ಕೋಟಿ ರೂ.ಮಾನಹಾನಿ ಬೆದರಿಕೆ
ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಕಂಪನಿಯಾಗಿರುವ ಸೀರಮ್ ಇನ್ಸ್ಟಿಟ್ಯೂಟ್ (SII) ಪ್ರತಿ ತಿಂಗಳು 50-60 ಮಿಲಿಯನ್ ಡೋಸ್ ಆಆಕ್ಸ್ಫರ್ಡ್-ಅಸ್ಟ್ರಾಜೇನಿಕಾ ಲಸಿಕೆಯನ್ನು ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಇದು ಫೈಜರ್-ಬಯೋನೋಟೆಕ್ ಲಸಿಕೆಗಿಂತ ಅಗ್ಗದ ದರದಲ್ಲಿ ಸಿಗಲಿದ್ದು, ಇದರ ಸಾಗಾಣಿಕೆ ಕೂಡ ಸುಲಭ ಎಂದು ಕಂಪನಿ ಹೇಳಿದೆ. 2021 ರ ಮಧ್ಯಭಾಗದಲ್ಲಿ 130 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡುವ ಗುರಿ ಭಾರತ ಹೊಂದಿದೆ ಎಂಬುದು ಇಲ್ಲಿ ವಿಶೇಷ.
ಇದನ್ನು ಓದಿ- ಇಂದು 3 ಕರೋನಾ ಲಸಿಕೆ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಈ ಕುರಿತು ಹೇಳಿಕೆ ನೀಡಿರುವ SII CEO ಅದರ್ ಪೂನಾವಾಲಾ, ಈಗಾಗಲೇ ತಮ್ಮ ಕಂಪನಿ ವ್ಯಾಕ್ಸಿನ್ ನ 40-50 ಮಿಲಿಯನ್ ಪ್ರಮಾಣಗಳನ್ನು ಉತ್ಪಾದಿಸಲಾಗಿದೆ ಎಂದಿದ್ದು, ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ. ಪ್ರಸ್ತುತ ಸರ್ಕಾರ ತಮ್ಮ ಕಂಪನಿಗೆ ವ್ಯಾಕ್ಸಿನ್ ರಫ್ತಿಗೆ ಅನುಮತಿ ನೀಡಿಲ್ಲ. ಸೌದಿ ಅರಬ್ ಹಾಗೂ ಇತರೆ ಕೆಲ ದೇಶಗಳ ಜೊತೆಗೆ ನಾವು ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿದ್ದೇವೆ. ಮುಂದಿನ ಕೆಲ ವಾರಗಳಲ್ಲಿ ಸರ್ಕಾರದಿಂದ ಈ ಅನುಮತಿ ಕೋರಲಾಗುವುದು ಹಾಗೂ ಇತರೆ 68 ದೇಶಗಳಿಗೂ ಕೂಡ ವ್ಯಾಕ್ಸಿನ್ ಅನ್ನು ತಲುಪಿಸಲಾಗುವುದು ಎಂದು ಪೂನಾವಾಲಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.