Stock Market Closing: ಗುರುವಾರ ಬೆಳಗ್ಗೆ ಅದ್ಬುತ ಏರಿಕೆಯೊಂದಿಗೆ ಭಾರತೀಯ ಷೇರು ಮಾರುಕಟ್ಟೆ ತೆರೆದುಕೊಂಡಿತ್ತು. ಆದರೆ ದಿನವಿಡಿಯ ವಹಿವಾಟಿನಲ್ಲಿ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿನ ಕುಸಿತದ ಕಾರಣ, ಭಾರತೀಯ ಮಾರುಕಟ್ಟೆಗಳಲ್ಲಿ ಲಾಭದ ವಸೂಲಿ ಮತ್ತೆ ಮರಳಿದೆ.ನಂತರ ಮಾರುಕಟ್ಟೆಯು ಕೆಂಪು ನಿಶಾನೆಯಲ್ಲಿ ತನ್ನ ವಹಿವಾಟು ಆರಂಭಿಸಿತು. ಇಂದಿನ ವಹಿವಾಟಿನ ಅಂತ್ಯಕ್ಕೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾಗಿರುವ ಸೆನ್ಸೆಕ್ಸ್ 183 ಅಂಕಗಳ ಕುಸಿತದೊಂದಿಗೆ 56,415 ಅಂಕಗಳಲ್ಲಿ ಮುಕ್ತಾಯ ಕಂಡಿದೆ, ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡ 40 ಅಂಕಗಳ ಕುಸಿತದೊಂದಿಗೆ 16,818 ಅಂಕಗಳಿಗೆ ತಲುಪಿದೆ.


COMMERCIAL BREAK
SCROLL TO CONTINUE READING

ಇಂದು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ತಿಂಗಳ ಮಂಥಲಿ ಎಕ್ಷ್ಪೈರಿ ಆಗಿತ್ತು. ಇಂದಿನ ವಹಿವಾಟಿನಲ್ಲಿ ಫಾರ್ಮಾ, ಎಫ್‌ಎಂಸಿಜಿ, ಲೋಹ, ಮಾಧ್ಯಮ ಷೇರುಗಳು ಏರಿಕೆ ಕಂಡರೆ, ಆಟೋ, ಐಟಿ, ಇಂಧನ, ತೈಲ ಮತ್ತು ಅನಿಲ ವಲಯದ ಷೇರುಗಳು ಕುಸಿತದೊಂದಿಗೆ ಮುಕ್ತಾಯಗೊಂಡಿವೆ. ಇಂದು ಮಾರುಕಟ್ಟೆಯಲ್ಲಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಏರಿಕೆ ಕಂಡಿವೆ. ನಿಫ್ಟಿ ಸೂಚ್ಯಂಕದ 50 ಷೇರುಗಳಲ್ಲಿ 25 ಶೇರುಗಳು ಕೆಂಪು ನಿಶಾನೆಯಲ್ಲಿ ಮತ್ತು 25 ಶೇರುಗಳು ಹಸಿರು ನಿಶಾನೆಯಲ್ಲಿ ವಹಿವಾಟು ನಿಲ್ಲಿಸಿವೆ. 30 ಸೆನ್ಸೆಕ್ಸ್ ಷೇರುಗಳ ಪೈಕಿ 12 ಷೇರುಗಳು ಹಸಿರು ನಿಶಾನೆಯಲ್ಲಿ ಮತ್ತು 18 ಷೇರುಗಳು ಕುಸಿತದೊಂದಿಗೆ ವಹಿವಾಟು ನಿಲ್ಲಿಸಿವೆ.


ಇದನ್ನೂ ಓದಿ-Gold Price Today : ಇಂದಿನ ಬಂಗಾರದ ಬೆಲೆ ಎಷ್ಟಿದೆ ತಿಳಿಯಿರಿ


ಏರಿಕೆ ಕಂಡ ಷೇರುಗಳು
ಇಂದು ಏರಿಕೆ ಕಂಡ ಷೇರುಗಳನ್ನು ಗಮನಿಸಿದರೆ, ಐಟಿಸಿ ಶೇ.2.51, ಡಾ.ರೆಡ್ಡಿ ಶೇ.2.16, ಟಾಟಾ ಸ್ಟೀಲ್ ಶೇ.1.68, ಸನ್ ಫಾರ್ಮಾ ಶೇ.1.38, ನೆಸ್ಲೆ ಶೇ.1.17, ಮಹೀಂದ್ರ ಶೇ.1.13, ಭಾರ್ತಿ ಏರ್‌ಟೆಲ್ ಶೇ.0.80, ಎನ್‌ಟಿಪಿಸಿ ಶೇ.0.66ರಷ್ಟು ಏರಿಕೆ ಕಂಡಿವೆ. 


ಇದನ್ನೂ ಓದಿ-Cabinet Meeting : ಕ್ಯಾಬಿನೆಟ್ ಸಭೆಯಲ್ಲಿ DA ಹೆಚ್ಚಳ, ಉಚಿತ ಪಡಿತರ ಸೇರಿದಂತೆ, ರೈಲ್ವೆ ನೌಕರರಿಗೆ ಬಿಗ್ ಗಿಫ್ಟ್!


ಕುಸಿತ ದಾಖಲಿಸಿದ ಷೇರುಗಳು
ಕುಸಿತ ದಾಖಲಿಸಿರುವ ಷೇರುಗಳ ಕುರಿತು ಹೇಳುವುದಾದರೆ. ಏಷ್ಯನ್ ಪೇಂಟ್ಸ್ ಶೇ.4.99, ಟೆಕ್ ಮಹೀಂದ್ರ ಶೇ.1.86, ಟೈಟಾನ್ ಕಂಪನಿ ಶೇ.1.53, ಕೋಟಕ್ ಮಹೀಂದ್ರ ಶೇ.1.49, ಬಜಾಜ್ ಫೈನಾನ್ಸ್ ಶೇ.1.53, ಟಿಸಿಎಸ್ ಶೇ.1.20, ವಿಪ್ರೋ ಶೇ.1.14, ಮಾರುತಿ ಸುಜುಕಿ ಶೇ.1.05 ಷೇರುಗಳು ಇದರಲ್ಲಿ ಶಾಮೀಲಾಗಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.