Share Market Update: ಉಕ್ರೇನ್ ಮತ್ತು ರಷ್ಯಾ ನಡುವಿನ  ಉದ್ವಿಗ್ನತೆಯು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಅಂದರೆ 14 ಫೆಬ್ರವರಿ 2022 ರಂದು ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.  ಉಕ್ರೇನ್-ರಷ್ಯಾ ನಡುವಿನ  ಬಿಕ್ಕಟ್ಟು ಜಾಗತಿಕ ಮಾರುಕಟ್ಟೆಗೆ (Global Market) ಭಾರಿ ಹಾನಿಯನ್ನುಂಟು ಮಾಡಿದೆ, ಇದು ಭಾರತೀಯ ಮಾರುಕಟ್ಟೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೋಮವಾರ ಮಾರುಕಟ್ಟೆ ಆರಂಭವಾದ ಕೂಡಲೇ ಸೆನ್ಸೆಕ್ಸ್ (Sensex) 1500 ಅಂಕ ಕುಸಿದಿದ್ದು, ಹೂಡಿಕೆದಾರರು 5 ನಿಮಿಷದಲ್ಲಿ 6.50 ಲಕ್ಷ ಕೋಟಿ ರೂ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಪಿಂಚಣಿ ಬಗ್ಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಸರ್ಕಾರ, ತಿಳಿದುಕೊಳ್ಳದಿದ್ದರೆ ಆಗಲಿದೆ ನಷ್ಟ


ಹೂಡಿಕೆದಾರರಲ್ಲಿ ಯುದ್ಧದ ಆತಂಕ ಮನೆ ಮಾಡಿದೆ
ಯುದ್ಧದ ಭಯದಿಂದಾಗಿ, ಪ್ರಪಂಚದಾದ್ಯಂತ ಹೂಡಿಕೆದಾರರು ಭಯಭೀತರಾಗಿದ್ದಾರೆ ಮತ್ತು ಸುರಕ್ಷಿತ ಹೂಡಿಕೆಗಳಲ್ಲಿ ಮಾತ್ರ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದಾಗಿ ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಭಾರೀ ಮಾರಾಟ ಕಂಡುಬರುತ್ತಿದೆ. ಇದರ ಪರಿಣಾಮ ಸೋಮವಾರ ದೇಶಿಯ ಮಾರುಕಟ್ಟೆಯಲ್ಲೂ ಕಂಡುಬಂದಿದೆ. BSE ಯಿಂದ ಪಡೆದ ಅಂಕಿಅಂಶಗಳ ಪ್ರಕಾರ, ಸೆನ್ಸೆಕ್ಸ್ ಬೆಳಗ್ಗೆ 9:35 ಕ್ಕೆ 1323 ಪಾಯಿಂಟ್‌ಗಳ ಕುಸಿತದೊಂದಿಗೆ 56829 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸುತ್ತಿತ್ತು ಬಳಿಕ ಸೆನ್ಸೆಕ್ಸ್ 56612 ಅಂಕಗಳೊಂದಿಗೆ ದಿನದ ಕನಿಷ್ಠ ಮಟ್ಟಕ್ಕೆ ಹೋಗಿದೆ. ಮತ್ತೊಂದೆಡೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮುಖ್ಯ ಸೂಚ್ಯಂಕವಾದ ನಿಫ್ಟಿ (Nifty) ಶೇ.2ರಷ್ಟು  ಅಥವಾ ಸುಮಾರು 400 ಪಾಯಿಂಟ್‌ಗಳ ಕುಸಿತದೊಂದಿಗೆ 16978 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಈ  ಕುಸಿತದ ಪ್ರವೃತ್ತಿ ದಿನವಿಡೀ ಉಳಿಯುವ ಆತಂಕ ಮಾರುಕಟ್ಟೆಯಲ್ಲಿ ಎದುರಾಗಿದೆ.


ಇದನ್ನೂ ಓದಿ-14-02-2022 Today Gold Price:ಆಭರಣ ಪ್ರಿಯರಿಗೆ ಗುಡ್ ನ್ಯೂಸ್.. ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ


ಕಳೆದ ವಾರವೂ ಭಾರಿ ಹಾನಿ
ವಾರದ ಮೊದಲ ದಿನವಾದ ಇಂದು ಷೇರುಪೇಟೆ ಸಕಾರಾತ್ಮಕ ತೆರೆ ಕಂಡಿಲ್ಲ. ಆದರೆ ಇದಕ್ಕೂ ಮೊದಲು, ಹಿಂದಿನ ವಾರವೂ ದೇಶೀಯ ಮಾರುಕಟ್ಟೆ ಅಷ್ಟೊಂದು ಸರಿಯಾಗಿರಲಿಲ್ಲ. ಬಜೆಟ್‌ನಿಂದಾಗಿ (Budget 2022-23) ಬಂದ ಮಾರುಕಟ್ಟೆಯ ಉತ್ಕರ್ಷ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಆದರೆ, US ಫೆಡರಲ್  (US Federal Interest Rates) ತನ್ನ ಬಡ್ಡಿ ದರಗಳನ್ನು ಹೆಚ್ಚಿಸಲಿದೆ ಎಂಬ ಭೀತಿಯ ಹಿನ್ನೆಲೆ ಕಳೆದ ವಾರ ಮಾರುಕಟ್ಟೆ ಮತ್ತೆ ಕುಸಿದಿದೆ. ಆದೆ, ಇದೀಗ ಉಕ್ರೇನ್ ಬಿಕ್ಕಟ್ಟು ಮಾರುಕಟ್ಟೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ಉಕ್ರೇನ್ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲವು 7 ವರ್ಷಗಳ ಗರಿಷ್ಠ ಮಟ್ಟಕ್ಕೆ ಹೋಗಿದೆ. ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $ 100 ರ ಮಟ್ಟವನ್ನು ದಾಟಬಹುದು ಎಂಬ ಆತಂಕ ಎದುರಾಗಿದೆ. ಇದು ಒಂದು ವೇಳೆ ಸಂಭವಿಸಿದಲ್ಲಿ, ಅದು ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.


ಇದನ್ನೂ ಓದಿ-Royal Enfieldನ ಅತ್ಯಂತ ಅಗ್ಗದ ಮೋಟಾರ್‌ಸೈಕಲ್..! ನಿಮ್ಮ ಬಜೆಟ್‌ಗೆ ಸರಿಹೊಂದುವ ಬೈಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.