Share Market News: ಭಾರತೀಯ ಷೇರು ಮಾರುಕಟ್ಟೆ ಇಂದು ಇತಿಹಾಸ ಸೃಷ್ಟಿಸಿದೆ. ಇಂದು ಷೇರುಪೇಟೆಯಲ್ಲಿ ಭಾರಿ ವಹಿವಾಟು ನಡೆದಿದ್ದು, ಇದರೊಂದಿಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ನಿಫ್ಟಿ ಇದೇ ಮೊದಲ ಬಾರಿಗೆ 19 ಸಾವಿರದ ಮಟ್ಟವನ್ನು ದಾಟಿದೆ. ಇದಲ್ಲದೇ ಸೆನ್ಸೆಕ್ಸ್ ಕೂಡ ತನ್ನ ಕೈಚಳಕ ತೋರಿದೆ. ಸೆನ್ಸೆಕ್ಸ್ ಇಂದು ಮೊದಲ ಬಾರಿಗೆ 64 ಸಾವಿರದ ಗಡಿ ದಾಟಿದೆ. ಪ್ರಸ್ತುತ, ಎರಡೂ ಸೂಚ್ಯಂಕಗಳು ಹಸಿರು ಮಾರ್ಕ್‌ನಲ್ಲಿ ವಹಿವಾಟು ನಡೆಸುತ್ತಿವೆ.


COMMERCIAL BREAK
SCROLL TO CONTINUE READING

ನಿಫ್ಟಿ 19 ಸಾವಿರ ದಾಟಿದೆ
28 ಜೂನ್ 2023, ಭಾರತೀಯ ಷೇರು ಮಾರುಕಟ್ಟೆಗೆ ಪಾಲಿಗೆ ಅತ್ಯುತ್ತಮ ದಿನ ಸಾಬೀತಾಗುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿಗಳು ತಮ್ಮ ಗರಿಷ್ಠ ಮಟ್ಟವನ್ನು ದಾಟುವ ಮೂಲಕ ಈ ದಿನವನ್ನು ಅವಿಸ್ಮರಣೀಯಗೊಳಿಸಿವೆ. ನಿಫ್ಟಿ ಇಂದು ಮೊದಲ ಬಾರಿಗೆ 19 ಸಾವಿರದ ಗಡಿ ದಾಟಿದೆ. ನಿಫ್ಟಿ ಇಂದು 18908.15 ಮಟ್ಟದಲ್ಲಿ ತನ್ನ ವಹಿವಾಟನ್ನು ಆರಂಭಿಸಿತ್ತು. ನಿಫ್ಟಿಯ ಕನಿಷ್ಠ 18861.35 ಆಗಿತ್ತು. ಇದರೊಂದಿಗೆ ನಿಫ್ಟಿ ಇಂದು ಮಧ್ಯಾಹ್ನ 2 ಗಂಟೆಯವರೆಗೆ 19011.25 ಗರಿಷ್ಠ ಮಟ್ಟವನ್ನು ತಲುಪಿದೆ. ಇದರಿಂದ ನಿಫ್ಟಿ ಇತಿಹಾಸದಲ್ಲೇ ಪ್ರಥಮ ಬಾರಿಗೆ 19 ಸಾವಿರದ ಗಡಿ ದಾಟಿದೆ.


ಇದನ್ನೂ ಓದಿ-Indian Economy: ವೇಗದಲ್ಲಿ ಚೀನಾಗಿಂತ ಮುಂದೆ ಇರಲಿದೆ ಭಾರತೀಯ ಅರ್ಥವ್ಯವಸ್ಥೆ, ಅಂದಾಜು ವ್ಯಕ್ತಪಡಿಸಿದ ಎಸ್ ಅಂಡ್ ಪಿ


64 ಸಾವಿರ ದಾಟಿದ ಸೆನ್ಸೆಕ್ಸ್
ಇದೇ ವೇಳೆ ಸೆನ್ಸೆಕ್ಸ್ ಕೂಡ ಇಂದು ಪ್ರಚಂಡ ಉತ್ಕರ್ಷವನ್ನು ದಾಖಲಿಸಿದೆ. ಇಂದು ಸೆನ್ಸೆಕ್ಸ್ 63701.78 ಮಟ್ಟದಲ್ಲಿ ತನ್ನ ದಿನದಾರಂಭ ಮಾಡಿತ್ತು. ಆದರೆ ಸೆನ್ಸೆಕ್ಸ್ ಕನಿಷ್ಠ 63554.82 ಆಗಿತ್ತು. ಇದರೊಂದಿಗೆ ಸೆನ್ಸೆಕ್ಸ್ ಕೂಡ ಇಂದು ಮೊದಲ ಬಾರಿಗೆ 64 ಸಾವಿರದ ಗಡಿ ದಾಟಿದೆ. ಇಂದು ಮಧ್ಯಾಹ್ನ 2 ಗಂಟೆಯವರೆಗೆ ಸೆನ್ಸೆಕ್ಸ್ 64037.10 ಗರಿಷ್ಠ ಮಟ್ಟವನ್ನು ತಲುಪಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸೆನ್ಸೆಕ್ಸ್ ಈ ಮಟ್ಟಕ್ಕೆ ತಲುಪಿದೆ.


ಇದನ್ನೂ ಓದಿ-July 2023 Changes: ಕೇವಲ ಮೂರೇ ದಿನಗಳು ಬಾಕಿ, ಜುಲೈ ತಿಂಗಳ ಈ ಬದಲಾವಣೆಗಳು ನಿಮ್ಮ ಮೇಲೂ ಪ್ರಭಾವ ಬೀರಲಿವೆ!


ಮಾರುಕಟ್ಟೆಯ ಉತ್ಕರ್ಷ
ಇದರೊಂದಿಗೆ ಇಂದು ಸೆನ್ಸೆಕ್ಸ್ ನಲ್ಲಿ 500ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು ಬಂದಿದೆ. ಮತ್ತೊಂದೆಡೆ ಇಂದು ನಿಫ್ಟಿಯಲ್ಲಿ 180ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದೆ. ಇದಲ್ಲದೇ ಇಂದು ಮಾರುಕಟ್ಟೆಯಲ್ಲಿ ಉಳಿದ ಸೂಚ್ಯಂಕಗಳು ಕೂಡ  ಹಸಿರು ಅಂಕಗಳಲ್ಲಿ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ. ಹಣಕಾಸು ಮತ್ತು ಬ್ಯಾಂಕಿಂಗ್ ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.